Just In
Don't Miss!
- News
ಕೊರೊನಾ ಸೋಂಕು ಹಿನ್ನೆಲೆ; ಉಚ್ಚಂಗಿದುರ್ಗ ಜಾತ್ರೋತ್ಸವ ರದ್ದು
- Automobiles
ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿ ಖರೀದಿಸಿದ ನಟ ಅರ್ಜುನ್ ಕಪೂರ್
- Finance
ಜೂನ್ 1ರಿಂದ ಚಿನ್ನಾಭರಣಗಳ ಮೇಲೆ ಹಾಲ್ಮಾರ್ಕ್ ಕಡ್ಡಾಯ
- Lifestyle
ವರ್ಷದ ಮೊದಲ ರಾಶಿ ಮೇಷಗೆ ಏ.14ಕ್ಕೆ ಸೂರ್ಯ ಸಂಚಾರ: ಇದರಿಂದ ನಿಮ್ಮ ರಾಶಿಯ ಮೇಲಾಗಲಿದೆ ಈ ಪರಿಣಾಮ
- Sports
ಐಪಿಎಲ್ 2021: ಮುಂಬೈ vs ಕೋಲ್ಕತ್ತಾ, ಪಂದ್ಯದ ಹೈಲೈಟ್ಸ್
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮತ್ತೆ ಐಪಿಎಲ್ ಬಂತು, ಸಿಂಪಲ್ ಸುನಿ ಪ್ರಕಾರ ಆರ್‌ಸಿಬಿ ಪ್ಲೇಯಿಂಗ್ 11 ಹೀಗಿರಬೇಕು
ಕೊರೊನಾ ಭೀತಿಯಿಂದ ಕಾಲಕಳೆಯುತ್ತಿರುವ ಈ ಸಮಯದಲ್ಲಿ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಲು ಇಂಡಿಯನ್ ಪ್ರೀಮಿಯರ್ ಲೀಗ್ 2021 ಆರಂಭವಾಗ್ತಿದೆ. ಇಂದಿನಿಂದ ಐಪಿಎಲ್ 14ನೇ ಆವೃತ್ತಿ ಶುರುವಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೆಣಸಾಡಲಿದೆ.
'ಈ ಸಲ ಕಪ್ ನಮ್ದೆ' ಎಂಬ ನಂಬಿಕೆಯಿಂದ ಆರ್‌ಸಿಬಿ ಅಭಿಮಾನಿಗಳು ಹೊಸ ಆವೃತ್ತಿಯನ್ನು ಆರಂಭಿಸುತ್ತಿದ್ದಾರೆ. ಈ ಸಲ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಯಾರ್ ಯಾರು ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆಯುತ್ತಾರೆ ಎನ್ನುವುದು ಸಹಜವಾಗಿ ಕುತೂಹಲ ಮೂಡಿಸಿದೆ. ಇದೀಗ, ಚೊಚ್ಚಲ ಪಂದ್ಯ ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡದ ಅಪ್ಪಟ ಅಭಿಮಾನಿ ಸ್ಯಾಂಡಲ್‌ವುಡ್ ನಿರ್ದೇಶಕ ಸಿಂಪಲ್ ಸುನಿ ಪ್ಲೇಯಿಂಗ್ 11 ಪಟ್ಟಿ ಮಾಡಿದ್ದಾರೆ. ಮುಂದೆ ಓದಿ...

ಆರಂಭಿಕ ಆಟಗಾರರು ಯಾರು
ಸಿಂಪಲ್ ಸುನಿ ಪಟ್ಟಿ ಮಾಡಿರುವ ಆರ್‌ಸಿಬಿ ತಂಡದಲ್ಲಿ ದೇಶಿ ಪ್ರತಿಭೆ ದೇವದತ್ ಪಡಿಕ್ಕಲ್ ಮತ್ತು ನ್ಯೂಜಿಲ್ಯಾಂಡ್ ತಂಡದ ಫಿನ್ ಅಲೇನ್ ಆರಂಭಿಕರಾಗಿ ಸ್ಥಾನ ಪಡೆದಿದ್ದಾರೆ. ನಿರೀಕ್ಷೆಯಂತೆ ಕ್ಯಾಪ್ಟನ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಆಡಬೇಕು ಎಂದು ಸುನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಮೂವರು ಆರ್‌ಸಿಬಿಯ ಸಾಮರ್ಥ್ಯವನ್ನು ಹೆಚ್ಚಿಸಲಿದ್ದಾರೆ ಎಂದ ಕೊಹ್ಲಿ

ಮಧ್ಯಮ ಕ್ರಮಾಂಕ
ಮಧ್ಯಮ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್ ಮತ್ತು ಆಸಿಸ್ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್ ಆರ್‌ಸಿಬಿ ತಂಡಕ್ಕೆ ಬಲ ತುಂಬಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ ಸುನಿ. ನಾಲ್ಕನೇ ಕ್ರಮಾಂಕದಲ್ಲಿ ಎಬಿಡಿ, ಐದನೇ ಕ್ರಮಾಂಕದಲ್ಲಿ ಮ್ಯಾಕ್ಸ್‌ವೆಲ್ ಆರನೇ ಕ್ರಮಾಂಕದಲ್ಲಿ ಹರ್ಷಲ್ ಪಟೇಲ್ (ಬೌಲಿಂಗ್ ಆಲ್ ರೌಂಡರ್) ಆಡಲಿ ಎಂದು ಸುನಿ ಗುರುತಿಸಿದ್ದಾರೆ.

ಬೌಲಿಂಗ್ ವಿಭಾಗ
ಸುನಿ ಆಯ್ಕೆ ಮಾಡಿರುವ ತಂಡದಲ್ಲಿ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸುವ ಬಯಕೆ ಹೊಂದಿದ್ದಾರೆ. ಏಳನೇ ಕ್ರಮಾಂಕದಲ್ಲಿ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್, ಏಂಟನೇ ಕ್ರಮಾಂಕದಲ್ಲಿ ನ್ಯೂಜಿಲ್ಯಾಂಡ್ ಬೌಲರ್ ಜಿಮ್ಮಿಸ್ಸನ್, ಒಂಬತ್ತನೇ ಕ್ರಮಾಂಕದಲ್ಲಿ ನವದೀಪ್ ಶೈನಿ, ಹತ್ತನೇ ಆಟಗಾರನಾಗಿ ಸಿರಾಜ್ ಹಾಗೂ ಹನ್ನೊಂದನೇ ಆಟಗಾರನಾಗಿ ಚಹಾಲ್ ಇರಲಿ ಎಂದು ಸುನಿ ಪಟ್ಟಿ ಮಾಡಿದ್ದಾರೆ.
ಮ್ಯಾಕ್ಸ್‌ವೆಲ್ ಆರ್‌ಸಿಬಿಯಲ್ಲಿ ಆಡುವ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ

ಮುಂಬೈ ವಿರುದ್ಧ ಮೊದಲ ಪಂದ್ಯ
ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆರ್‌ಸಿಬಿ ಮೊದಲ ಪಂದ್ಯ ಆಡಲಿದೆ. ಚೆನ್ನೈನಲ್ಲಿ ಮೊದಲ ಪಂದ್ಯ ನಡೆಯಲಿದೆ. ಹೊಸ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಶುಭಾರಂಭ ಮಾಡಲಿ ಎಂದು ಬೆಂಗಳೂರು ಫ್ಯಾನ್ಸ್ ಶುಭ ಕೋರಿದ್ದಾರೆ.