Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಮಗಳು ಜಾನಕಿ' ಧಾರಾವಾಹಿ ಅಕಾಲಿಕ ಅಂತ್ಯ: ಸೀತಾರಾಮ್ ಹೇಳುವುದೇನು?
ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ 'ಮಗಳು ಜಾನಕಿ' ಇನ್ನು ಮುಂದೆ ಪ್ರಸಾರವಾಗುವುದಿಲ್ಲ.
Recommended Video
ಕೋಟ್ಯಂತರ ವೀಕ್ಷಕರನ್ನು ಸೆಳೆದಿದ್ದ, ಗುಣಮಟ್ಟದ, ಸದಭಿರುಚಿಯ, ಕೌಟುಂಬಿಕ ಧಾರಾವಾಹಿ ಎನಿಸಿಕೊಂಡಿದ್ದ ಮಗಳು ಜಾನಕಿ ಧಾರಾವಾಹಿ ಇನ್ನು ಮುಂದೆ ಪ್ರಸಾರವಾಗುವುದಿಲ್ಲ. ನಿರ್ದೇಶಕರು ಧಾರಾವಾಹಿಯನ್ನು ಅಂತ್ಯಗೊಳಿಸುವ ಮುನ್ನವೇ ಧಾರಾವಾಹಿ ಪ್ರಸಾರ ಅಂತ್ಯವಾಗುತ್ತಿದೆ.
ಮಗಳು
ಜಾನಕಿ
ಧಾರಾವಾಹಿ
ಪ್ರಸಾರವಿಲ್ಲ:
ನಿರ್ದೇಶಕ
ಸೀತಾರಾಮ್
ಮಗಳು ಜಾನಕಿ ಧಾರಾವಾಹಿ ಪ್ರಸಾರವಾಗುತ್ತಿದ್ದ ಕಲರ್ಸ್ ಸೂಪರ್ ವಾಹಿನಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದೆ. ಹಾಗಾಗಿ ಮಗಳು ಜಾನಕಿ ಧಾರಾವಾಹಿ ಸಹ ಸ್ಥಗಿತಗೊಳ್ಳುತ್ತಿದೆ.

ಅಕಾಲಿಕವಾಗಿ ಅಂತ್ಯವಾಗುತ್ತಿರುವ ಮಗಳು ಜಾನಕಿ
ತಮ್ಮ ನಿರ್ದೇಶನದ ಧಾರಾವಾಹಿ ಹೀಗೆ ಅಕಾಲಿಕವಾಗಿ ಅಂತ್ಯಗೊಳ್ಳುತ್ತಿರುವ ಬಗ್ಗೆ ಬೇಸರದಿಂದಲೇ ಫಿಲ್ಮೀಬೀಟ್ ಕನ್ನಡದ ಜೊತೆ ಮಾತನಾಡಿದ ಟಿ.ಎನ್.ಸೀತಾರಾಮ್, 'ಸದ್ಯಕ್ಕೆ ಮಗಳು ಜಾನಕಿ ಧಾರಾವಾಹಿ ಪ್ರಸಾರವಾಗುವುದಿಲ್ಲ (ಹೊಸ ಎಪಿಸೋಡ್) ಮುಂದೆ ಏನಾಗುತ್ತದೆಯೋ ದೇವರೇ ನಿರ್ಧರಿಸಲಿದ್ದಾನೆ' ಎಂದರು.

'ಬೇರೆ ಚಾನೆಲ್ ನಲ್ಲಿ ಅವಕಾಶ ಕೊಡಿ ಎಂದು ನಾವು ಕೇಳಲಾಗದು'
ಕಲರ್ಸ್ ಸೂಪರ್ ವಾಹಿನಿಯೇ ಬಂದ್ ಆಗುತ್ತಿದೆ. ಇದು ಆ ಚಾನೆಲ್‌ನ ಮ್ಯಾನೆಜ್‌ಮೆಂಟ್ ನಿರ್ಣಯ, ನಮ್ಮ ಧಾರಾವಾಹಿಗೆ ಬೇರೆ ಚಾನೆಲ್ ಕೊಡಿ ಎಂದು ನಾವು ಕೇಳಲಾಗದು. ಒಂದು ವೇಳೆ ಅವರೇನಾದರೂ ಕಲರ್ಸ್‌ನ ಬೇರೆ ಚಾನೆಲ್‌ನಲ್ಲಿ ಸ್ಲಾಟ್ ಕೊಟ್ಟರೆ ಖಂಡಿತ ಧಾರಾವಾಹಿ ಚಿತ್ರೀಕರಿಸಿ ಕೊಡುತ್ತೇವೆ ಎಂದು ಸೀತಾರಾಮ್ ಹೇಳಿದರು.
ಟಿ.ಎನ್.
ಸೀತಾರಾಮ್
ಹಂಚಿಕೊಂಡ
ತಾಯಿಯೊಬ್ಬಳ
ಹೃದಯಕಲಕುವ
ಪತ್ರ

ಹಕ್ಕುಸ್ವಾಮ್ಯದ ಪ್ರಶ್ನೆ
ಕಲರ್ಸ್ ಗುಂಪಿನ ಬೇರೆ ವಾಹಿನಿಯಲ್ಲೇಕೆ ಪ್ರಸಾರ ಮಾಡಬಾರದು ಎಂಬ ಪ್ರಶ್ನೆಗೆ, ಹಕ್ಕುಗಳ ಅಡೆ-ತಡೆಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಕಲರ್ಸ್ ಮ್ಯಾನೇಜ್‌ಮೆಂಟ್ ನಿರ್ಣಯ ಬದಲಾದಲ್ಲಿ ಮಾತ್ರವೇ ನಮ್ಮ ಧಾರಾವಾಹಿ ಬೇರೆ ಚಾನೆಲ್‌ನಲ್ಲಿ ಪ್ರಸಾರವಾಗಬಹುದು ಎಂದರು.

ಧಾರಾವಾಹಿ ಮೂಲಕ ಸಾಕಷ್ಟು ಹೇಳುವುದಿತ್ತು: ಸೀತಾರಾಮ್
ಪ್ರಸ್ತುತ ಸಾಮಾಜಿಕ ವಿಷಯಗಳನ್ನೇ ತಮ್ಮ ಧಾರಾವಾಹಿಯಲ್ಲಿ ತರುವ ಸೀತಾರಾಮ್ ಅವರು ಧಾರಾವಾಹಿ ಮೂಲಕ ಅನೇಕ ವಿಷಯಗಳ ಬಗ್ಗೆ ಹೇಳಬೇಕೆಂದುಕೊಂಡಿದ್ದರು. ಆದರೆ ಅನಿವಾರ್ಯವಾಗಿ ಧಾರಾವಾಹಿ ಚಿತ್ರೀಕರಣವನ್ನೇ ಬಂದ್ ಮಾಡಬೇಕಾಗಿದೆ.