For Quick Alerts
  ALLOW NOTIFICATIONS  
  For Daily Alerts

  ರಾಜ್ ಬ್ಯಾನರ್ ಚಿತ್ರಗಳಿಗೆ ಸಂಸ್ಕೃತಿ ಅನ್ನೋದೇ ಇಲ್ಲ?

  |

  ಕನ್ನಡ ಚಿತ್ರರಂಗದ ಪ್ರತಿಷ್ಠಿತ ಮತ್ತು ಅನುಭವಿ ಬ್ಯಾನರ್ ಗಳೆಂದರೆ ಡಾ.ರಾಜ್ ಒಡೆತನದ ವಜ್ರೇಶ್ವರಿ ಮತ್ತು ಪೂರ್ಣಿಮಾ ಕಂಬೈನ್ಸ್. ಈ ಬ್ಯಾನರ್ ನಲ್ಲಿ ಮೂಡಿಬಂದ ಬಹಳಷ್ಟು ಸದಭಿರುಚಿಯ ಚಿತ್ರಗಳನ್ನು ಕನ್ನಡಿಗರು ನೋಡಿ ಆನಂದಿಸಿದ್ದಾರೆ.

  ನಿಜಕ್ಕೂ ರಾಜ್ ಕ್ಯಾಂಪ್ ಅನಾದಿಕಾಲದಿಂದಲೂ ಮುಗ್ಧ ಕನ್ನಡ ಕುಲಕೋಟಿಗಳನ್ನು ವಂಚಿಸುತ್ತಾ ಬಂದಿದೆಯೇ? ಕಳಪೆ ಕಥೆಗಳು, ಕಳಪೆ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಮುತ್ತುಗಳನ್ನು ನೀಡಿದೆಯಾ? ಇಷ್ಟು ದಿನ ಇಲ್ಲದ ಈ ಅಪನಂಬಿಕೆ ಈವಾಗ ಯಾರಿಗೆ ಬಂದಿದೆ? ಏಕಪ್ಪಾ ಬಂದಿದೆ ಅಂದಿರಾ?

  ರಾಜ್ ಬ್ಯಾನರ್ ಚಿತ್ರಗಳ ಕಥೆಯ ಬಗ್ಗೆ ಪರೋಕ್ಷವಾಗಿ ವಿತರಕ ಸಮರ್ಥ ವೆಂಚರ್ಸ್ ನ ಪ್ರಸಾದ್ ಜರಿದಿದ್ದಾರೆ.

  ಕನ್ನಡ ಚಿತ್ರರಂಗದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಸಿನಿಮಾ ಮಾಡುತ್ತಿರುವ ಈ ಬ್ಯಾನರ್ ಕಥೆಯೇ ಇಲ್ಲದೆ ಚಿತ್ರಗಳನ್ನು ನೀಡಿ ಜನರಿಗೆ ಮೋಸ ಮಾಡುತ್ತಿದೆ. ಇವರಿಗೆ ಸಂಸ್ಕೃತಿ ಅಥವಾ ಪುಸ್ತಕ ಅಂದರೆ ಏನಂದೆ ಗೊತ್ತಿಲ್ಲ. ಈ ಬ್ಯಾನರ್ ಬೇಜವಾಬ್ದಾರಿಯಿಂದ ಸಿನಿಮಾಗಳನ್ನು ತಯಾರಿಸುತ್ತದೆ ಎಂದು ಪ್ರಸಾದ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಶುಕ್ರವಾರದ (ಜೂ 1) ಕನ್ನಡಪ್ರಭ ದೈನಿಕದಲ್ಲಿ ಪ್ರಕಟವಾಗಿದೆ.

  ಈ ಭೂಮಿ, ಈ ಬಾನು ಚಿತ್ರ ತಂಡ ಒಂದು ಸದಭಿರುಚಿಯ ಚಿತ್ರ ಮಾಡುತ್ತಿದ್ದಾರೆ. ಈ ಪ್ರತಿಷ್ಠಿತ ಬ್ಯಾನರ್ ನವರು ಇಂಥವರನ್ನು ನೋಡಿಯಾದರೂ ಬುದ್ದಿ ಕಲಿಯಲಿ ಎನ್ನುವ ಪ್ರಸಾದ್ ಅವರ ಈ ಹೇಳಿಕೆ ಕನ್ನಡ ಚಿತ್ರೋದ್ಯಮದಲ್ಲಿ ಹೊಸ ಅಲೆ ಎಬ್ಬಿಸುವ ಸಾಧ್ಯತೆಯಿದೆ.

  ಪ್ರಸಾದ್ ಹೇಳಿಕೆಯ ನಂತರ ಗಮನಿಸ ಬೇಕಾದ ಅಂಶವೇನಂದರೆ ಕನ್ನಡ ಚಿತ್ರೋದ್ಯಮದಲ್ಲಿ 50ಕ್ಕೊ ಹೆಚ್ಚು ವರ್ಷಗಳಿಂದ ಇದ್ದು, ಇನ್ನೂ ಚಿತ್ರ ನಿರ್ಮಿಸುತ್ತಿರುವ ಬ್ಯಾನರ್ ಎಂದರೆ ಅದು ಡಾ. ರಾಜಕುಮಾರ್ ಅವರದ್ದು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.

  ನಾನು ಒಬ್ಬ ಪಕ್ಕಾ ವ್ಯಾಪಾರಸ್ಥ ಎನ್ನುವ ವಿತರಕ ಪ್ರಸಾದ್ ಅವರ ಈ ಗಂಭೀರ ಹೇಳಿಕೆಗೆ ಕಾರಣವಾದರೂ ಏನಿರಬಹುದು ಎಂದು ಹುಡುಕಿದರೆ ಅದು ಅಣ್ಣಾಬಾಂಡ್ ಚಿತ್ರದ ಕಡೆ ಬೊಟ್ಟು ಮಾಡಬಹುದು.

  ಡಾ. ರಾಜ್ ಬ್ಯಾನರ್ ಅಡಿಯಲಿ ಇತ್ತೀಚಿಗೆ ತೆರೆಕಂಡ ಚಿತ್ರತಂಡ ಅಣ್ಣಾಬಾಂಡ್. ಹೆಚ್ಚುಕಮ್ಮಿ 16 ಕೋಟಿ ರೂಪಾಯಿಗೆ ಅಣ್ಣಾಬಾಂಡ್ ಚಿತ್ರವನ್ನು ಕೊಂಡುಕೊಳ್ಳುತ್ತೇನೆ ಎನ್ನುತ್ತಿದ್ದ ಪ್ರಸಾದ್ ಅವರಿಗೆ ಚಿತ್ರದ ವಿತರಣೆ ಹಕ್ಕನ್ನು ನೀಡಲು ಕೊನೆ ಕ್ಷಣದಲ್ಲಿ ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ನಿರಾಕರಿಸಿದ್ದರು ಅಲ್ಲದೆ ಅವರನ್ನು ಎಲ್ಲಿ ಇಡಬೇಕೋ ಅಲ್ಲಿ ಇಟ್ಟಿದ್ದರು. ಹಾಗಾಗಿ ಇದು ಪ್ರಸಾದ್ ಅವರ ಅಸಮಾಧಾನಕ್ಕೆ ಕಾರಣವಾಗಿರಬಹುದು.

  ಡಾ. ರಾಜ್ ಬ್ಯಾನರ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಮುಗ್ಗರಿಸಿದ ಉದಾಹರಣೆಗಳು ಬಹಳ ಕಮ್ಮಿ. ಹಾಲುಜೇನು, ಚಲಿಸುವ ಮೋಡಗಳು, ಸಮಯದ ಗೊಂಬೆ, ಭಕ್ತ ಪ್ರಹ್ಲಾದ, ಅಪೂರ್ವ ಸಂಗಮ, ಕವಿರತ್ನ ಕಾಳಿದಾಸ, ತಾಯಿಗೆ ತಕ್ಕ ಮಗ, ನಾ ನಿನ್ನ ಗೆಲ್ಲಲಾರೆ ಈ ರೀತಿ ಒಂದಕ್ಕೊಂದು ಚಿತ್ರಗಳು ಸದಭಿರುಚಿಯ ಮತ್ತು ಜನಮೆಚ್ಚಿದ ಚಿತ್ರಗಳು.

  ಓದುಗರೇ ಈಗ ನೀವು ಹೇಳಿ ಡಾ.ರಾಜ್ ಬ್ಯಾನರ್ ಚಿತ್ರಗಳ ಬಗ್ಗೆ ...

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X