»   » ಶಿವಣ್ಣ ಪುತ್ರಿ ನಿರುಪಮಾ ನಿಶ್ಚಿತಾರ್ಥ ಚಿತ್ರ ಸೌರಭ

ಶಿವಣ್ಣ ಪುತ್ರಿ ನಿರುಪಮಾ ನಿಶ್ಚಿತಾರ್ಥ ಚಿತ್ರ ಸೌರಭ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಯುವರಾಜ, ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಡಾ.ಶಿವರಾಜ್ ಕುಮಾರ್ ಹಾಗೂ ಗೀತಾ ಅವರ ಹಿರಿಯ ಪುತ್ರಿ ಡಾ.ನಿರುಪಮಾ (27) ಅವರ ನಿಶ್ಚಿತಾರ್ಥ ಭಾನುವಾರ (ಆ.3) ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು.

ಇದೊಂದು ರೀತಿ ಲವ್ ಕಮ್ ಅರೇಂಜ್ಡ್ ಎಂಗೇಜ್ ಮೆಂಟ್. ಡಾ.ನಿರುಪಮಾ ಹಾಗೂ ಡಾ.ದಿಲೀಪ್ ಕುಮಾರ್ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಕಡೆಗೆ ಮನೆಯವರನ್ನು ಒಪ್ಪಿಸಿ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸಂಭ್ರಮಕ್ಕೆ ಇಡೀ ಸ್ಯಾಂಡಲ್ ವುಡ್ ಸಾಕ್ಷಿಯಾಯಿತು. ['ಆರ್ಯನ್' ಹೇಗಿದೆ? ಪತ್ರಿಕೆಗಳ ವಿಮರ್ಶಾ ನೋಟ]

ಒಬ್ಬರಿಗೊಬ್ಬರು ಹಾರ, ಉಂಗುರ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಸಾಂಪ್ರದಾಯಿಕವಾಗಿ ನೆರವೇರಿತು. ಭಾನುವಾರ ರಾತ್ರಿ 8 ಗಂಟೆಗೆ ಶುಭ ಮುಹೂರ್ತದಲ್ಲಿ ನಿಶ್ಚಿತಾರ್ಥ ನೆರವೇರಿತು. ಇಬ್ಬರೂ ವೃತ್ತಿಯಲ್ಲಿ ವೈದ್ಯರು. ಸ್ಲೈಡ್ ನಲ್ಲಿ ನೋಡೋಣ ಬನ್ನಿ ಮತ್ತಷ್ಟು ಕಲರ್ ಫುಲ್ ಫೋಟೋ ಮತ್ತು ಮಾಹಿತಿ. [ಚಿತ್ರಗಳು: ಮನೋಹರ್.ಆರ್]

ಇವರಿಬ್ಬರದ್ದೂ ಜನುಮದ ಜೋಡಿ

ನಿರುಪಮಾ ಮತ್ತು ದಿಲೀಪ್ ಜೋಡಿಯನ್ನು ನೋಡುತ್ತಿದ್ದರೆ ಆಹಾ ಇವರಿಬ್ಬರದೂ ಜನುಮದ ಜೋಡಿ ಅನ್ನಿಸದೆ ಇರದು.

ಸ್ಯಾಂಡಲ್ ವುಡ್ ಗಣ್ಯರ ಶುಭ ಹಾರೈಕೆ

ಶಿವಣ್ಣನ ಮುದ್ದಿನ ಕಣ್ಮಣಿ ಈಗ ಜೋಡಿ ಹಕ್ಕಿಯಾಗಿ ಹಾರಾಡುವ ಸಮಯ. ಇವರಿಬ್ಬರ ನಿಶ್ಚಿತಾರ್ಥಕ್ಕೆ ಸ್ಯಾಂಡಲ್ ವುಡ್ ನ ಹಲವಾರು ಗಣ್ಯರು ಆಗಮಿಸಿ ನೂತನ ಜೋಡಿಗೆ ಶುಭ ಕೋರಿದರು.

ನಿಶ್ಚಿತಾರ್ಥಕ್ಕೆ ಬಂದ ಗಣ್ಯಾತಿಗಣ್ಯರು

ಡಾ.ಅಂಬರೀಶ್ ಮತ್ತು ಸುಮಲತಾ, ಡಾ.ಜಯಂತಿ, ಡಾ.ಭಾರತಿ ವಿಷ್ಣುವರ್ಧನ್, ದ್ವಾರಕೀಶ್, ವಿ ರವಿಚಂದ್ರನ್, ಡಾ.ಬಿ ಸರೋಜಾದೇವಿ, ಸಾಹುಕಾರ್ ಜಾನಕಿ, ಲಹರಿ ವೇಲು, ಗುರುಕಿರಣ್, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ, ಸಾ.ರಾ. ಗೋವಿಂದು ಇನ್ನಿತರರು ನಿಶ್ಚಿತಾರ್ಥಕ್ಕೆ ಆಗಮಿಸಿದ್ದರು.

ಬಾಳ ದೋಣಿ ಮೀಟಿದ ನವಜೋಡಿ

ಎಂಬಿಬಿಎಸ್ ಮುಗಿಸಿರುವ ನಿರುಪಮಾ ಅವರು ಪ್ರಸ್ತುತ ಎಂಎಸ್ ಮಾಡುತ್ತಿದ್ದಾರೆ. ನಿರುಪಮಾ ಅವರ ಕೈಹಿಡಿಯುತ್ತಿರುವ ಹುಡುಗನ ಹೆಸರು ದಿಲೀಪ್. ಮೈಸೂರಿನಲ್ಲಿ ಓದಬೇಕಾದರೆ ಇಬ್ಬರೂ ಕ್ಲಾಸ್ ಮೇಟ್ ಆಗಿದ್ದರು. ಅಲ್ಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿ ಈಗ ಜೋಡಿಹಕ್ಕಿಗಳಾಗಿದ್ದಾರೆ.

ಶಿವಣ್ಣ ದಂಪತಿಗಳಿಗೆ ತಮ್ಮ ಮಗಳ ಬಗ್ಗೆ ಅಪಾರ ಹೆಮ್ಮೆ

ದಿಲೀಪ್ ಸಹ ವೃತ್ತಿಯಲ್ಲಿ ವೈದ್ಯರು. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನ ನಿವಾಸಿ. ಒಳ್ಳೆಯ ಹುಡುಗನನನ್ನು ನಿಶೂ ಬಾಳಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿರುವ ಬಗ್ಗೆ ಶಿವಣ್ಣ ದಂಪತಿಗಳಿಗೆ ತಮ್ಮ ಮಗಳ ಬಗ್ಗೆ ಅಪಾರ ಹೆಮ್ಮೆ, ಮೆಚ್ಚುಗೆ ಇದೆ.

ಒಳ್ಳೆಯ ಹುಡುಗ, ನಿಶೂಗೆ ತಕ್ಕ ಜೋಡಿ

ನಿಶೂ ಹೊಸ ಬಾಳಿಗೆ ಅಡಿಯಿಡುತ್ತಿದ್ದರೂ ಅವಳು ಯಾ ಹೊತ್ತಿದ್ದರೂ ನನ್ನ ಪುಟ್ಟ ಮಗಳೇ ಎನ್ನುತ್ತಾರೆ ಶಿವಣ್ಣ. ಒಳ್ಳೆಯ ಹುಡುಗ, ನಿಶೂಗೆ ತಕ್ಕ ಜೋಡಿ, ಎಲ್ಲಕ್ಕಿಂತ ಹೆಚ್ಚಾಗಿ ನಿಶೂ ಆಯ್ಕೆಯ ಹುಡುಗ ಸೂಪರ್.

ಗೀತಾ ಶಿವರಾಜ್ ಕುಮಾರ್ ಮನದಾಳದ ಮಾತು

ತಮ್ಮ ಮಗಳನ್ನು ನಮಗಿಂತಲೂ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂಬ ವಿಶ್ವಾಸವಿದೆ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಇಬ್ಬರಿಗೂ ಎರಡೂ ಕುಟುಂಬಿಕರ ಆಶೀರ್ವಾದ ಇದೆ ಎನ್ನುತ್ತಾರೆ ಗೀತಾ ಶಿವರಾಜ್ ಕುಮಾರ್.

ಹೊಸ ಬಾಳಿನ ಹೊಸಿಲಲಿ ಹೊಸ ಜೋಡಿ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಸೇರಿದಂತೆ ಉಮೇಶ್, ಸಂಜನಾ, ಗಿರಿಜಾ ಲೋಕೇಶ್, ಡಾ.ರಾಜ್ ಕುಮಾರ್ ಅವರ ಯೋಗ ಶಿಕ್ಷಕರು, ಎಸ್ ವಿ ರಾಜೇಂದ್ರ ಸಿಂಗ್ ಬಾಬು, ವಿಜಯಲಕ್ಷ್ಮಿ ಸಿಂಗ್, ಅನಿರುದ್ಧ, ಕೀರ್ತಿ ವರ್ಧನ್ ಸೇರಿದಂತೆ ಹಲವರು ಚಿತ್ರೋದ್ಯಮದ ಗಣ್ಯರು ಶುಭಕೋರಿದರು.

English summary
Century Star Shivrajkumar's (52) daughter Dr.Nirupama (27) is gets engaged in 3rd September, 2014 in Bangalore. Nirupama and Dilipkumar exchanged the engagement ring at a fully crowded family and film industry bigwigs on Sunday night at 8 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada