For Quick Alerts
  ALLOW NOTIFICATIONS  
  For Daily Alerts

  'ಏಕ್ ಲವ್ ಯಾ' ಚಿತ್ರೀಕರಣ ಪ್ರಾರಂಭಸಿದ ನಿರ್ದೇಶಕ ಪ್ರೇಮ್

  |

  ನಿರ್ದೇಶಕ ಪ್ರೇಮ್ ಈಗ 'ಏಕ್ ಲವ್ ಯಾ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ದಿ ವಿಲನ್ ಚಿತ್ರದ ನಂತರ 'ಏಕ್ ಲವ್ ಯಾ' ಕೈಗೆತ್ತಿಕೊಂಡಿರುವ ಪ್ರೇಮ್ ಇವತ್ತಿನಿಂದ (ಮೇ-20) ಚಿತ್ರೀಕರಣ ಪ್ರಾರಂಭಿಸಿದ್ದಾರೆ.

  ಈಗಾಗಲೆ ಅದ್ಧೂರಿಯಾಗಿ ಚಿತ್ರದ ಟೈಟಲ್ ಲಾಂಚ್ ಮಾಡಿದ್ದ ಪ್ರೇಮ್ ಮತ್ತು ತಂಡ ಚಿತ್ರೀಕರಣವನ್ನು ಇಂದಿನಿಂದ ಶುರು ಮಾಡಿದ್ದಾರೆ. ಅಂದ್ಹಾಗೆ ಚಿತ್ರದಲ್ಲಿ ರಕ್ಷಿತಾ ಸಹೋದರ ರಾಣಾ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಏಕ್ ಲವ್ ಯಾ' ಚಿತ್ರದ ಮೂಲಕ ಮೊದಲ ಬಾರಿಗೆ ರಾಣಾ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ.

  ಸಲ್ಮಾನ್ ಖಾನ್ ಗೆ ಪ್ರೇಮ್ ನಿರ್ದೇಶನ, ಸುದೀಪ್ ನಿರ್ಮಾಣ.!

  ಸಹೋದರನ ಮೊದಲ ಚಿತ್ರಕ್ಕೆ ರಕ್ಷಿತಾ ಬಂಡವಾಳ ಹೂಡುತ್ತಿದ್ದಾರೆ. ಮಲೆಮಾದೇಶ್ವರ ಬೆಟ್ಟದಲ್ಲಿ ಚಿತ್ರಕ್ಕೆ ಅದ್ಧೂರಿ ಮುಹೂರ್ತ ಮಾಡಿಕೊಳ್ಳುವ ಮೂಲಕ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಮಲೆಮಹಾದೇಶ್ವರ ಬೆಟ್ಟದಲ್ಲಿ ಮುಹೂರ್ತ ಮಾಡಿಕೊಂಡು ಬೆಂಗಳೂರಿನಿಂದ ಚಿತ್ರೀಕರಣ ಪ್ರಾರಂಭಿಸುತ್ತಿದೆ ಚಿತ್ರತಂಡ.

  ನಾಯಕನಾಗಿ ರಾಣಾ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೆ ನಾಯಕಿಯ ಆಯ್ಕೆ ಇನ್ನು ಫೈನೆಲ್ ಆಗಿಲ್ಲ. ಪ್ರೇಮ್ ಸಿನಿಮಾ ಅಂದಾಕ್ಷಣ ನಾಯಕಿ ಯಾರಿರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಇನ್ನು ಉಳಿದೆಲ್ಲ ಕಲಾವಿದರ ಬಗ್ಗೆಯು ಚಿತ್ರತಂಡ ಬಹಿರಂಗ ಪಡಿಸಿಲ್ಲ.

  ಸದ್ಯ ಚಿತ್ರೀಕರಣ ಪ್ರಾರಂಭಿಸುವ ಚಿತ್ರತಂಡ ಉಳಿದ ಮಾಹಿತಿಯನ್ನು ಸಧ್ಯದಲ್ಲೇ ಬಹಿರಂಗಪಡಿಸಲಿದೆ. 26 ದಿನಗಳು ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಕುತೂಹಲ ಮೂಡಿಸಿರುವ ಏಕ್ ಲವ್ ಯಾ ಚಿತ್ರದಲ್ಲಿ ಏನೆಲ್ಲ ವಿಶೇಷತೆಗಳಿಗೆ ಎನ್ನುವುದು ಮುಂದಿನದಿನಗಳಲ್ಲಿ ಗೊತ್ತಾಗಲಿದೆ.

  English summary
  Kannada director Prem directorial Ek Love Ya Kannada movie shooting begins. Rakshith's brother Rana playing lead role in this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X