»   » 2017ನೇ ವರ್ಷಕ್ಕೆ ಗುಡ್ ಬೈ ಹೇಳುತ್ತಿದೆ 'ಚಮಕ್'

2017ನೇ ವರ್ಷಕ್ಕೆ ಗುಡ್ ಬೈ ಹೇಳುತ್ತಿದೆ 'ಚಮಕ್'

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ 'ಚಮಕ್' ಈ ವರ್ಷದ ಕೊನೆಯ ಸಿನಿಮಾ. ಡಿಸೆಂಬರ್ 29 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ 2017ನೇ ವರ್ಷಕ್ಕೆ ಗ್ರ್ಯಾಂಡ್ ಸೆಂಡ್ ಆಫ್ ನೀಡುತ್ತಿದೆ.

ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಸುಮಾರು 180ಕ್ಕೂ ಅಧಿಕ ಚಿತ್ರಗಳು ತೆರೆಕಂಡಿದೆ. ಇದು ಕನ್ನಡದ ಮಟ್ಟಿಗೆ ಅತಿ ಹೆಚ್ಚು ಚಿತ್ರಗಳು ರಿಲೀಸ್ ಆದ ವರ್ಷ ಎಂಬ ಹೆಗ್ಗಳಿಕೆ ಪಾತ್ರವಾಗುತ್ತಿದೆ.

ಈ ವರ್ಷ ಮುಗಿಯಿತು, ಮುಂದಿನ ವರ್ಷ ಅಬ್ಬರಿಸಲಿರುವ ಅದ್ಧೂರಿ ಚಿತ್ರಗಳು

Ganesh Chamak movie releasing on December 29th

ಔಟ್ ಅಂಡ್ ಔಟ್ ಎಂಟರ್ ಟೈನ್ ಮೆಂಟ್ ಸಿನಿಮಾ ಇದಾಗಿದ್ದು, ಪ್ರೇಕ್ಷಕರಿಗೆ ಖುಷಿ ಕೊಡುವ ಮೂಲಕ ಈ ವರ್ಷಕ್ಕೆ ತೆರೆ ಎಳೆಯಲು ಚಿತ್ರತಂಡ ಸಜ್ಜಾಗಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳು ಮೋಡಿ ಮಾಡಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

ಆತಂಕದಲ್ಲಿದ್ದ 'ಚಮಕ್' ನಿರ್ದೇಶಕರಿಗೆ ರಿಲೀಫ್ ನೀಡಿದ ಸೆನ್ಸಾರ್

ಸಿಂಪಲ್ ಸುನಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಜುಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಇನ್ನು ಈ ಚಿತ್ರಕ್ಕೆ ಚಂದ್ರಶೇಖರ್ ಅವರು ಬಂಡವಾಳ ಹೂಡಿದ್ದಾರೆ. ಶಿವರಾಜ್ ಕುಮಾರ್ ಅಭಿನಯಿಸಿದ್ದ 'ಶ್ರೀಕಂಠ' ಮತ್ತು ರಮೇಶ್ ಅರವಿಂದ್ ಅಭಿನಯಿಸಿದ್ದ 'ಪುಷ್ಪಕ ವಿಮಾನ' ಚಿತ್ರಗಳು 2017ನೇ ವರ್ಷದ ಮೊದಲ ಚಿತ್ರಗಳಾಗಿದ್ದವು. ಜನವರಿ 6 ರಂದು ಇವೆರೆಡು ಚಿತ್ರಗಳು ತೆರೆಕಂಡಿತ್ತು.

English summary
Golden star Ganesh, Rashmika Mandanna starrer most expected movie 'Chamak' is releasing on December 29th. the movie directed by simple suni.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X