»   » ಆಸ್ಪತ್ರೆಗೆ ನಟ, ಸಾಹಿತಿ ಗಿರೀಶ್ ಕಾರ್ನಾಡ್ ದಾಖಲು

ಆಸ್ಪತ್ರೆಗೆ ನಟ, ಸಾಹಿತಿ ಗಿರೀಶ್ ಕಾರ್ನಾಡ್ ದಾಖಲು

Posted By:
Subscribe to Filmibeat Kannada
Girish Karnad
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ನಾಟಕಕಾರ, ನಟ ಹಾಗೂ ನಿರ್ದೇಶಕ ಗಿರೀಶ್ ಕಾರ್ನಾಡ್ (75) ಅವರು 'ಪೋರ' ಚಿತ್ರೀಕರಣದಲ್ಲಿ ಗಾಯಗೊಂಡ ಕಾರಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಅವರು ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

'ಪೋರ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ನೆಲಮಂಗದಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಅವರು ಚಿತ್ರೀಕರಣ ಸ್ಥಳದಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಮಳೆ ಬಿದ್ದು ಶೂಟಿಂಗ್ ಸ್ಪಾಟ್ ಕೆಸರು ಕೆಸರಾಗಿದ್ದ ಕಾರಣ ಅವರು ಜಾರಿಬಿದ್ದಿದ್ದಾರೆ.

ಅವರ ಕೈ ಮತ್ತು ಕಾಲಿಗೆ ಗಾಯಗಳಾಗಿದ್ದು ಉಳಿದಂತೆ ಅವರಿಗೆ ಯಾವುದೇ ಅಪಾಯವಾಗಿಲ್ಲ. ಸದ್ಯಕ್ಕೆ ಅವರು ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಮಾಸ್ ಮೂವೀಸ್ ಲಾಂಛನದಲ್ಲಿ ಡಾ.ಶೈಲೇಂದ್ರ ಬೆಳದಾಳೆ, ದೇವರಾಜ್ ಶಿಡ್ಲಘಟ್ಟ ನಿರ್ಮಿಸುತ್ತಿರುವ ಚಿತ್ರ 'ಪೋರ'.

ಈ ಚಿತ್ರಕ್ಕೆ ಕಳೆದ ವಾರ ನಾಯಕ ಅಮೋಘ್, ನಾಯಕಿ ವ್ಯಾಲರಿ ಅಭಿನಯಸಿದ "ಒಂದು ಖಾಲಿ ಖಾಲಿ ಹೃದಯ ಎಲ್ಲಾದರೂ ಸಿಗಲಿದೆಯಾ..." ಎಂಬ ಹಾಡನ್ನು ಇನ್ನೋವೇಟಿವ್ ಫಿಲಂ ಸಿಟಿ ಹಾಗೂ ಮೈಸೂರು ರೋಡಿನ 'ದಿ ಕ್ಲಬ್'ನಲ್ಲಿ ರಾಮು ಅವರ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.

ಅಮೋಘ್ ಕಥೆ, ಚಿತ್ರಕಥೆ, ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ನಿರಂಜನಬಾಬು ಛಾಯಾಗ್ರಹಣ, ಕೆ.ಎಂ. ಇಂದ್ರ ಸಂಭಾಷಣೆ ಮತ್ತು ಸಂಗೀತ, ಶಿವರಾಜ್ ಮೆವೂ ಸಂಕಲನ ಮದನ್ ಹರಿಣಿ, ಮುರಳಿ, ರಾಮು ನೃತ್ಯ ನಿರ್ದೇಶನ, ರವಿವರ್ಮಾ ಸಾಹಸ, ಇಸ್ಮಾಯಿಲ್ ಕಲಾ ನಿರ್ದೇಶನ, ಅಚ್ಯುತ್ ನಿರ್ಮಾಣ ನಿರ್ವಹಣೆ ಇದೆ. ಅಮೋಘ, ವ್ಯಾಲರಿ, ಗಿರೀಶ್ ಕರ್ನಾಡ್, ಟಿ.ಎಸ್. ನಾಗಾಭರಣ, ಸುಧಾರಾಣಿ, ಸುಮಿತ್ರಾ, ರಾಜು ತಾಳಿಕೋಟೆ, ತಬಲ ನಾಣಿ, ಮಲ್ಲೇಶ್, ತಾರಾಗಣದಲ್ಲಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Contemporary writer, playwright, screenwriter, actor and movie director Girish Karnad, 75, suffered injuries on the sets of the Kannada film Pora, directed by Janardhan, on Tuesday evening at around 4 pm at Nelamangala.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada