For Quick Alerts
  ALLOW NOTIFICATIONS  
  For Daily Alerts

  ಹಸೆಮಣೆ ಏರಿದ ಗಿರೀಶ್ ಕಾಸರವಳ್ಳಿ ಪುತ್ರಿ ಅನನ್ಯ ಕಾಸರವಳ್ಳಿ

  |

  ಕಿರುತೆರೆ ನಟಿ ನೇಹಾ ಪಾಟೀಲ್ ಮದುವೆ ದಿನವೇ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಪುತ್ರಿ ಅನನ್ಯ ಕಾಸರವಳ್ಳಿ ಅವರ ವಿವಾಹವೂ ಜರುಗಿದೆ.

  ಸಂತೋಷ ಅವರೊಂದಿಗೆ ಅನನ್ಯ ಕಾಸರವಳ್ಳಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಶುಭ ಸಮಾರಂಭಕ್ಕೆ ಕನ್ನಡದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ನಟ ಅನಿರುದ್ಧ ಸೇರಿದಂತೆ ಹಲವು ಕಲಾವಿದರು ಹಾಗೂ ಗಣ್ಯರು ಆಗಮಿಸಿ ನವ ಜೋಡಿಗಳಿಗೆ ಶುಭವನ್ನು ಕೋರಿದರು.

  ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಈ 6 ಸೆಲೆಬ್ರಿಟಿಗಳು

  ಇದೇ ತಿಂಗಳ 12 ರಂದು ಅನನ್ಯ ನಿಶ್ಚಿತಾರ್ಥ ನಡೆದಿತ್ತು. ಅಂದ್ಹಾಗೆ ಅನನ್ಯ ವರಿಸಿರುವ ಸಂತೋಷ್ ಅವರು ಜೈನ್ ಯೂನಿವರ್ಸಿಟಿಯಲ್ಲಿ ರಿಜಿಸ್ಟಾರ್ ಆಗಿ ಕೆಲಸ ಮಾಡ್ತಿದ್ದಾರೆ.

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನೇಹಾ ಪಾಟೀಲ್

  ಅನನ್ಯ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಿರ್ದೇಶಕಿ ಮತ್ತು ನಟಿ. ಇವರು ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಗಿರೀಶ ಕಾಸರವಳ್ಳಿ ಮತ್ತು ವೈಶಾಲಿ ಕಾಸರವಳ್ಳಿಯವರ ಪುತ್ರಿ.

  ತಂದೆಯಂತೆ ಜೀವನಕ್ಕೆ ಹತ್ತಿರ ಇರುವ ಚಿತ್ರಗಳನ್ನು ನಿರ್ದೇಶಿಸುವುದರಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. 'ಬೆಳದಿ ಹರಿಶ್ಚಂದ್ರ' ಇವರ ನಿರ್ದೇಶಿಸಿದ ಮೊದಲ ಚಿತ್ರ. ನಂತರ ಯಕ್ಷಗಾನ ಕುರಿತಾದ 'ಹರಿಕಥಾ ಪ್ರಸಂಗ' ಚಿತ್ರವನ್ನು ಚಿತ್ರವನ್ನು ನಿರ್ದೇಶಿಸಿದ್ದಾರೆ. 'ಕಪ್ಪು ಕಲ್ಲಿನ ಸೈತಾನ' ಎಂಬ ಡಾಕುಮೆಂಟರಿಯನ್ನು ಕೂಡ ಮಾಡಿದ್ದಾರೆ.

  English summary
  Director Girish kasaravalli's daughter Ananya Kasaravalli gets married with santhosh on friday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X