For Quick Alerts
  ALLOW NOTIFICATIONS  
  For Daily Alerts

  ಹೊಸ ಶಪಥ ಮಾಡಿದ ಗೋಲ್ಡನ್ ಗರ್ಲ್ ರಮ್ಯಾ

  By Rajendra
  |

  ಹೊಸ ವರ್ಷ ಬಂದರೆ ಸಾಕು ಹೊಸ ಹೊಸ ಸಂಕಲ್ಪಗಳನ್ನು ಮಾಡುವುದು ಮಾಮೂಲು. ಕೆಲವರೇನೋ ಸಿಗರೇಟು ಬಿಡುತ್ತೇನೆ ಎಂದು ಪ್ರತಿವರ್ಷ ಶಪಥ ಮಾಡುತ್ತಲೇ ಇರುತ್ತಾರೆ. ಹೇಗೆ ಬಿಡುವುದು ಎಂದು ಧಂ ಮೇಲೆ ಧಂ ಎಳೆದು ಯೋಚಿಸುವಷ್ಟರಲ್ಲಿ ಇನ್ನೊಂದು ಹೊಸ ವರ್ಷ ಬಂದಿರುತ್ತದೆ.

  ಇನ್ನೂ ಕೆಲವರು ಕುಡಿಯುವುದನ್ನು ಬಿಡುತ್ತೇನೆ ಎಂದು ದೀಕ್ಷೆ ತೊಡುತ್ತಾರೆ...ಅವೆಲ್ಲಾ ಆಗಲ್ಲ ಹೋಗಲ್ಲ ಬಿಡ್ರಿ ಎಂದೂ ಸುಮ್ಮನಾಗುತ್ತಾರೆ. ಆದರೆ ನಮ್ಮ ಗೋಲ್ಡನ್ ಗರ್ಲ್ ರಮ್ಯಾ ಮಾತ್ರ ಈ ವರ್ಷ ಹೊಸ ಪ್ರತಿಜ್ಞೆ ಮಾಡಿದ್ದಾರೆ.

  ಅವಕಾಶ ವಂಚಿತ ಮಕ್ಕಳ ನೆರವಿಗೆ ಅವರು ಧಾವಿಸಿದ್ದಾರೆ. ಈ ವರ್ಷದ ಅವರ ಹೊಸ ನಿರ್ಣಯ, ಸೌಲಭ್ಯ ವಂಚಿತ ಈ ಮಕ್ಕಳಿಗೆ ನೆರವಾಗುವುದು. ತಮ್ಮ ಕೈಲಾದ ಸಹಾಯ ಮಾಡುವುದು. ಈ ಮೂಲಕ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸೋಣ ಬನ್ನಿ ಎಂದೂ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

  201+3...3 ನಿರ್ಣಯಗಳನ್ನು ತೆಗೆದುಕೊಳ್ಳಿ. ಅದರ ಜೊತೆಗೆ 201 ರುಪಾಯಿಗಳನ್ನು ಈ ರೀತಿಯ ಮಕ್ಕಳ ಸಹಾಯರ್ಥಕ್ಕೆ ವಿನಿಯೋಗಿಸಿ ಎಂದಿದ್ದಾರೆ. ರಮ್ಯಾ ಕೇವಲ ಬಾಯಿ ಮಾತಿನಷ್ಟೇ ಹೇಳಿಲ್ಲ. ಈಗಾಗಲೆ ಅವರು ಸರ್ಕಾರೇತರ ಸಂಸ್ಥೆ 'ಡ್ರೀಮ್ ಎ ಡ್ರೀಮ್' ಎಂಬ ಸಂಸ್ಥೆಯೊಂದಿಗೂ ಕೈಜೋಡಿಸಿದ್ದಾರೆ.

  ಅತ್ತ ಸಮಾಜಸೇವೆ, ಇನ್ನೊಂದು ಕಡೆ ರಾಜಕೀಯ, ಮತ್ತೊಂದು ಕಡೆ ಸಿನಿಮಾ ಹೀಗೆ ನಾನಾ ಕ್ಷೇತ್ರಗಳಲ್ಲಿ ರಮ್ಯಾ ಬಿಜಿಯಾಗಿದ್ದಾರೆ. ಇದರ ಜೊತೆಗೆ ಇದೇ ಮೊದಲ ಸಲ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಗೆ ಅಭಿನಯಿಸಲಿದ್ದಾರಂತೆ. ಆ ಚಿತ್ರದ ವಿವರಗಳು ಸದ್ಯಕ್ಕೆ ಇನ್ನೂ ಬಹಿರಂಗವಾಗಿಲ್ಲ. (ಏಜೆನ್ಸೀಸ್)

  English summary
  Golden Girl Ramya has come up with a new way of helping people come up with their resolution. The actress has taken up the cause of helping underprivileged children as she wished her fans a happy 2013 on Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X