»   » ಗಣೇಶ್ ಬಗ್ಗೆ ಶಿವರಾಜ್ ಕುಮಾರ್ ಯಾಕ್ ಹಿಂಗೆ ಹೇಳಿದ್ರು?

ಗಣೇಶ್ ಬಗ್ಗೆ ಶಿವರಾಜ್ ಕುಮಾರ್ ಯಾಕ್ ಹಿಂಗೆ ಹೇಳಿದ್ರು?

Posted By:
Subscribe to Filmibeat Kannada

ಲವಲವಿಕೆಯಿಂದಲೇ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್, ಮೈಕ್ ಹಿಡಿಯುತ್ತಿದ್ದಂತೆಯೇ 2007ರ ಘಟನೆಯ ನೆನಪಿನಂಗಳಕ್ಕೆ ಜಾರಿದರು.

ಗೋಲ್ಡನ್ ಸ್ಟಾರ್ ಗಣೇಶ್ ಬಗ್ಗೆ ಶಿವಣ್ಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೇಳೆ, ಅವರ ಮಾತಿನಲ್ಲಿ ವಿಷಾದವಿತ್ತು, ಆದರೆ ಏನು ಹೇಳಬೇಕು ಅದನ್ನು ನೇರವಾಗಿ ಸ್ಪಷ್ಟಪಡಿಸಿ ಇದ್ದ ಗೊಂದಲಕ್ಕೆ ತೆರೆ ಎಳೆದರು.

ಇದು ನಡೆದದ್ದು ಗಣೇಶ್ ಅಭಿನಯದ ಮುಂದಿನ ಚಿತ್ರ 'ಖುಷಿ ಖುಷಿಯಾಗಿ' ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ. ಬೆಂಗಳೂರಿನ ಫಾರ್ಚ್ಯೂನ್ ಹೋಟೇಲಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ಗಣೇಶ್ ವಿನಂತಿಯ ಮೇರೆಗೆ ಆಗಮಿಸಿದ್ದರು.

ಗಣೇಶ್ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಅಮೂಲ್ಯ ಮತ್ತು ನಂದಿನಿ ರೈ ನಾಯಕಿಯರು. ಯೋಗಿ ಜಿ ರಾಜ್ ಚೊಚ್ಚಲ ನಿರ್ದೇಶನದ ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರ ದಂಡೇ ಆಗಮಿಸಿತ್ತು. ಇದು ತೆಲುಗಿನ 'ಗುಂಡೆ ಜಾರಿ ಗಲ್ಲಂತಾಯಿಂದೆ' ಚಿತ್ರದ ರಿಮೇಕ್.

ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಗಣೇಶ್, ಹಿಂದಿನ ದಿನ ಕರೆ ಮಾಡಿ ಶಿವಣ್ಣ ಬಳಿ ಕಾರ್ಯಕ್ರಮಕ್ಕೆ ಬರುವಂತೆ ವಿನಂತಿಸಿಕೊಂಡೆ. ನಮ್ಮ ಮೇಲಿನ ಪ್ರೀತಿಯಿಂದ ಶಿವಣ್ಣ ಕಾರ್ಯಕ್ರಮಕ್ಕೆ ಬಂದಿದ್ದು ಚಿತ್ರತಂಡ ಮತ್ತಷ್ಟು ಖುಷಿ ಖುಷಿಯಾಗುವಂತೆ ಮಾಡಿದೆ ಎಂದು ಧನ್ಯತಾಭಾವ ಬೀರಿದರು.

ನಾವೆಲ್ಲಾ, ಶಿವಣ್ಣನ ಅಭಿಮಾನಿಗಳು. ಸೆಟ್ ನಲ್ಲಿ ಅವರು ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ರೀತಿ ಎಲ್ಲರಿಗೂ ಅನುಕರಣೀಯ. ನಿರ್ಮಾಪಕರ ಜೊತೆ ಅವರ ಉತ್ತಮ ಸಂಬಂಧ, ಕಿರಿಯ ನಿರ್ದೇಶಕರ ಜೊತೆ ಕೆಲಸ ಮಾಡಿದರೂ ಶಿವಣ್ಣ ಎಲ್ಲರಿಗೂ ಮಾದರಿ ಕಲಾವಿದ ಎಂದು ಗಣೇಶ್, ಶಿವಣ್ಣ ಬಗ್ಗೆ ಕಾರ್ಯಕ್ರಮದಲ್ಲಿ ಪ್ರೀತಿಯ ಮಾತನ್ನಾಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಬಗ್ಗೆ ಶಿವಣ್ಣ ಹೇಳಿದ್ದೇನು? ಮುಂದೆ ಓದಿ..

2007ರ ಮುಂಗಾರು ಮಳೆ

ಗಣೇಶ್ ನನ್ನು ನೋಡಿದಾಗಲೆಲ್ಲಾ, ಮಾತನಾಡಿಸಿದಾಗಲೆಲ್ಲಾ, 2007ರಲ್ಲಿ ಮುಂಗಾರು ಮಳೆ ಚಿತ್ರದ ದಿನಗಳು ನೆನಪಾಗುತ್ತವೆ. ಆ ಸಮಯದಲ್ಲಿ ಕೆಲವು ಮಾಧ್ಯಮಗಳು ಬಿತ್ತರಿಸಿದ ವರದಿ ನನ್ನನ್ನು ತುಂಬಾ ನೋವಿಗೆ ಉಂಟು ಮಾಡಿತ್ತು. ಆ ವರದಿ ಏನು ಎನ್ನುವುದನ್ನು ನಾನು ಮತ್ತೆ ಹೇಳಲು ಇಷ್ಟ ಪಡುವುದಿಲ್ಲ - ಶಿವಣ್ಣ.

ನನಗೆ ಗಣೇಶ್ ಸಹೋದರನಂತೆ

ಮಾಧ್ಯಮಗಳು ವರದಿ ಬಿತ್ತರಿಸುತ್ತಿದ್ದಂತೆಯೇ ಅಂದೇ ನಾನು ಸ್ಪಷ್ಟ ಪಡಿಸಿದ್ದೆ. ನನಗೆ ಗಣೇಶ್ ಕಿರಿಯ ಸಹೋದರ ಇದ್ದಂತೆಯೇ, ಈ ಕಾರ್ಯಕ್ರಮದಲ್ಲಿ ಮತ್ತೆ ಇದನ್ನು ಸ್ಪಷ್ಟ ಪಡಿಸುತ್ತಿದ್ದೇವೆ. ಕನ್ನಡ ಚಿತ್ರೋದ್ಯಮ ಬೆಳೆಯಬೇಕು ಎನ್ನುವುದು ನನ್ನ ಉದ್ದೇಶ - ಶಿವಣ್ಣ.

ಮುಂಗಾರು ಮಳೆ ಚಿತ್ರಕ್ಕೂ ಮುನ್ನ

ಮುಂಗಾರು ಮಳೆ ಚಿತ್ರ ಬಿಡುಗಡೆಗೂ ಮುನ್ನ ಗಣೇಶ್ ಕಿರುತೆರೆಯಲ್ಲಿ ನಡೆಸಿಕೊಡುತ್ತಿದ್ದ ಕಾರ್ಯಕ್ರಮವನ್ನು ನನ್ನ ಬಿಡುವಿನ ವೇಳೆ ನೋಡುತ್ತಿದ್ದೆ. ಗಣೇಶ್ ಬೆಳೆದು ಬಂದ ರೀತಿಗೆ ನನಗೆ ಅಪಾರ ಗೌರವವಿದೆ. ಈ ವೇದಿಕೆಯ ಮೂಲಕ ಮತ್ತೊಮ್ಮೆ ಹೇಳಲು ಬಯಸುತ್ತೇನೆ, ಗಣೇಶ್ ನನ್ನು ನನ್ನ ಕಿರಿಯ ಸಹೋದರನ ಹಾಗೆ.

ಖುಷಿಯಾಗಿ ಚಿತ್ರದ ನಾಯಕಿಯರ ಬಗ್ಗೆ ಶಿವಣ್ಣ

ಈ ಚಿತ್ರದ ಇಬ್ಬರೂ ನಾಯಕಿಯರ ಕಣ್ಣು ಆಕರ್ಷಕವಾಗಿದೆ, ಕಲಾವಿದರಿಗೆ ಇದುವೇ ಪ್ರಮುಖವಾದ ಅಂಶ. ಐವತ್ತು ವರ್ಷವಾದರೂ ನಾನು ಈ ಫಿಟ್ನೆಸ್ ನಲ್ಲಿ ಇದ್ದೀನೆ ಅಂದ್ರೆ ಅದಕ್ಕೆ ನನ್ನ ಹೆಂಡತಿ ಗೀತಾ ಕಾರಣ. ನನ್ನ ಎಲ್ಲಾ ಬೇಕು ಬೇಡವನ್ನು ಗೀತಾ ಸರಿಯಾಗಿ ನಿಭಾಯಿಸಿದ್ದಾಳೆ.

ಕ್ಯಾಮರಾಮ್ಯಾನ್ ಬಗ್ಗೆ

ಖುಷಿ ಖುಷಿಯಾಗಿ ಚಿತ್ರದ ಕ್ಯಾಮರಾಮ್ಯಾನ್ ಶ್ರೀಶ, ದೇಶದ ಅತ್ಯುತ್ತಮ ಕ್ಯಾಮರಾಮ್ಯಾನ್ ಗಳಲ್ಲಿ ಒಬ್ಬರು. ನನ್ನ ಮುಂದಿನ ಚಿತ್ರಕ್ಕೆ ಅವರು ಕ್ಯಾಮರಾಮ್ಯಾನ್ ಆಗಬೇಕು ಎನ್ನುವುದು ನನ್ನ ಆಸೆ ಎಂದು ಶಿವಣ್ಣ, ಶ್ರೀಶ ಬಗ್ಗೆ ಮೆಚ್ಚಿನ ಮಾತನ್ನಾಡಿದ್ದಾರೆ.

ಅರಸು ಮತ್ತು ಮುಂಗಾರು ಮಳೆ

ಜೂನ್ 2007 ರಲ್ಲಿ ಪುನೀತ್, ಮೀರಾ ಜಾಸ್ಮಿನ್, ರಮ್ಯಾ ಪ್ರಮುಖ ಭೂಮಿಕೆಯಲ್ಲಿದ್ದ ಅರಸು ಚಿತ್ರ ಬಿಡುಗಡೆಯಾಗಿತ್ತು. ಸದಭಿರುಚಿಯ ಈ ಚಿತ್ರಕ್ಕೆ ಪ್ರೇಕ್ಷಕರು ಉತ್ತಮವಾಗಿಯೇ ಸ್ಪಂದಿಸಿದ್ದರು. ಆದರೂ, ಡಿಸೆಂಬರ್ 2006ರ ತಿಂಗಳಾಂತ್ಯದಲ್ಲಿ ಬಿಡುಗಡೆಯಾದ ಮುಂಗಾರು ಮಳೆ ಚಿತ್ರಕ್ಕೆ ಅರಸು ಪೈಪೋಟಿ ನೀಡಲಾಗಿರಲಿಲ್ಲ. ಮುಂಗಾರು ಮಳೆ ಚಿತ್ರದ ಸಕ್ಸಸ್ ಮೀಟ್ ನಲ್ಲಿ ಶಿವಣ್ಣನ ಅಭಿಮಾನಿಗಳಿಗೂ, ಗಣೇಶ್ ಅಭಿಮಾನಿಗಳ ನಡುವೆ ವಿರಸ ಏರ್ಪಟ್ಟಿತ್ತು.

ಚಿತ್ರದ ಸಂಗೀತ ನಿರ್ದೇಶಕರ ಬಗ್ಗೆ

ಖುಷಿ ಖುಷಿಯಾಗಿ ಚಿತ್ರಕ್ಕೆ ಸಂಗೀತ ನೀಡಿದ ಅನೂಪ್ ರುಬೆನ್ಸ್ ಬಗ್ಗೆ ಶಿವಣ್ಣ ಮಾತನಾಡುತ್ತಾ, ಇವರು ಸಂಗೀತ ನೀಡಿದ ತೆಲುಗಿನ ಮನ್ನಂ ಚಿತ್ರದ ಹಾಡುಗಳನ್ನು ಕೇಳಿದ್ದೇನೆ. ನನ್ನ ಚಿತ್ರಕ್ಕೆ ಇವರು ಸಂಗೀತ ನೀಡಬೇಕೆನ್ನುವುದು ನನ್ನ ಅಭಿಲಾಷೆ. ನನ್ನ ಚಿತ್ರಕ್ಕೆ ಸಂಗೀತ ನೀಡಿತ್ತೀರಾ ಎಂದು ಶಿವಣ್ಣ ವೇದಿಕೆಯಲ್ಲಿ ಅನೂಪ್ ಅವರನ್ನು ಕೇಳಿದಾಗ, ಯೆಸ್ ಸರ್ ಎಂದು ಅನೂಪ್ ಶಿವಣ್ಣನಿಗೆ ಕೈಮುಗಿದರು.

English summary
Golden Star Ganesh is like my younger brother. I have told this several times when a media report disturbed our minds in 2007 after ‘Mungaru Male’ success, Shivaraj Kumar.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X