For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಸ್ಟಾರ್ ಗಣೇಶ್ ಈಗ ಹೊಸ ಆಟೋರಾಜ

  By Rajendra
  |

  'ಆಟೋ ರಾಜ' ಎಂದರೆ ಸಾಮಾನ್ಯವಾಗಿ ನೆನಪಾಗುವ ಏಕೈಕ ಹೆಸರು ಕನ್ನಡ ಚಿತ್ರರಂಗ ಕಂಡಂತಹ ಅಮೋಘ ನಟ ದಿವಂತಗ ಶಂಕರ್ ನಾಗ್. ಎಂಬತ್ತರ ದಶಕದಲ್ಲಿ ಹೊಸ ಅಲೆ ಎಬ್ಬಿಸಿದ 'ಆಟೋ ರಾಜ' ಚಿತ್ರದ ಮೂಲಕ ಅವರು ಆಟೋ ಚಾಲಕರ ಪಾಲಿಗೆ ಮನೆ ದೇವರಾಗಿ ಬದಲಾಗಿದ್ದು ಇತಿಹಾಸ.

  ಅವರ ಹೆಸರಿನಲ್ಲಿ ಈಗಾಗಲೆ ಹಲವಾರು ಚಿತ್ರಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಹಿಂದೆ ಅನಿಮೇಷನ್‌ನಲ್ಲಿ ಪ್ರವಾದಿ, ಕರವೇಲ ಚಿತ್ರಗಳು ನಿರ್ಮಿಸಲಾಗಿತ್ತು. ನಿಮ್ಮ ಶಂಕರ್ ನಾಗ್, ಶಂಕರ್ ನಾಗ್ ಸರ್ಕಲ್ ಎಂಬ ಚಿತ್ರಗಳೂ ಸೆಟ್ಟೇರಿದ್ದವು. ಶಂಕರ್ ನಾಗ್ ಅಭಿನಯದ ಅಮೋಘ ಚಿತ್ರಗಳಲ್ಲಿ ಒಂದಾದ 'ಆಟೋ ರಾಜ' ಚಿತ್ರ ಈಗ ಮತ್ತೆ ನಿರ್ಮಿಸಲಾಗುತ್ತಿದೆ.

  ಈ ಹೊಸ 'ಆಟೋ ರಾಜ'ನಿಗೆ ಅಜಯ್ ರಾವ್ ನಾಯಕ ನಟ ಎಂದು ಈ ಹಿಂದೆ ಘೋಷಿಸಲಾಗಿತ್ತು. ಆದರೆ ಅಜಯ್ ರಾವ್ ಡೇಟ್ಸ್ ಹೊಂದಾಣಿಕೆಯಾಗುತ್ತಿಲ್ಲ ಎಂಬ ಕಾರಣ ನೀಡಿ ಚಿತ್ರದಿಂದ ಹೊರಬಿದ್ದಿದ್ದಾರೆ. ಹೊಸ 'ಆಟೋ ರಾಜ'ನಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಕರೆತರಲು ಚಿತ್ರದ ನಿರ್ಮಾಪಕರು ಮುಂದಾಗಿದ್ದಾರೆ.

  ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಕ್ಕೆ ಓಕೆ ಎನ್ನುವುದೊಂದು ಬಾಕಿ ಇದೆ. ಒಂದು ವೇಳೆ ಗಣೇಶ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರೆ ಇನ್ನು ಮುಂದೆ ಆಟೋ ಚಾಲಕರ ಶಂಕರ್ ನಾಗ್ ಫೋಟೋ ಪಕ್ಕದಲ್ಲಿ ಗಣೇಶ್‌ ಫೋಟೋವನ್ನೂ ಸೇರಿಸಿಕೊಳ್ಳಬಹುದು. ಆದರೆ ಅಜಯ್ ರಾವ್ ಹೀಗೆ ಏಕಾಏಕಿ ಕೈ ಎತ್ತಿದ್ದು ಯಾಕೆ ಎಂಬ ಪ್ರಶ್ನೆ ಕಾಡುತ್ತಿದೆ.

  ಯೋಗಿ, ಕಳ್ಳ ಮಳ್ಳ ಸುಳ್ಳ' ಖ್ಯಾತಿಯ ಉದಯ್ ಪ್ರಕಾಶ್ ಅವರು 'ಆಟೋ ರಾಜ' ಪಾತ್ರಕ್ಕೆ ಹೀರೋ ಹೆಸರನ್ನು ಸೂಚಿಸಲು ಕೋರಿದ್ದರು. ಪ್ರೇಕ್ಷಕರು ಒಕ್ಕೊರಲಿನಿಂದ ಅಜಯ್ ರಾವ್ ರನ್ನು ಆಯ್ಕೆ ಮಾಡಿದ್ದರು. ಅಜಯ್ ಕೂಡ ಆಟೋ ರಾಜನಾಗಲು ತಮ್ಮ ಸಂಪೂರ್ಣ ಒಪ್ಪಿಗೆಯನ್ನು ಕೊಟ್ಟಿದ್ದರು. ಆದರೆ ಈಗ ಡೇಟ್ಸ್ ಕಾರಣ ನೀಡಿ ಆಗಲ್ಲ ಎಂದಿರುವುದು ಅಚ್ಚರಿ ಮೂಡಿಸಿದೆ.

  ಇಡೀ ಕನ್ನಡ ಚಿತ್ರರಂಗದಲ್ಲಿ ಆ ಪಾತ್ರವನ್ನು ಮತ್ತೆ ಮಾಡುವುದಿದ್ದರೆ, ಅದು ಅಜಯ್‌ರಿಂದ ಮಾತ್ರ ಅಂತ ತೀರ್ಪು ಹೊರಬಿದ್ದಿತ್ತು. ಇದರಿಂದ ಸಾಕಷ್ಟು ಖುಷಿ ಹೆಚ್ಚಿಸಿಕೊಂಡಿದ್ದ ಅಜಯ್ ತಮ್ಮ ಮೇಲಿರುವ ಜವಾಬ್ದಾರಿ ಹೆಚ್ಚಾಗಿದೆ. "ಇದಕ್ಕೆ ಖಂಡಿತವಾಗಿಯೂ ನ್ಯಾಯ ಸಲ್ಲಿಸುವ ಭರವಸೆ ನನ್ನಲ್ಲಿದೆ" ಅಂತ ಇಷ್ಟುದ್ದ ಹೇಳಿಕೊಂಡಿದ್ದರು ಅಜಯ್.

  ಇದೇ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರು ಗಿರೀಶ್ ಮತ್ತು ವಿಶ್ವ ತಮ್ಮ ಚಿತ್ರದ ಹೀರೋನ ಆಯ್ಕೆಮಾಡಿದವರಿಗೆ ಸೈಟ್ ಕೊಡಲಾಗುತ್ತದೆ ಎಂದಿದ್ದರು. ಅದರಂತೆ ಒಟ್ಟು ಸ್ಪರ್ಧಿಗಳಲ್ಲಿ ಚೀಟಿ ಎತ್ತುವ ಮೂಲಕ ಅದೃಷ್ಟಶಾಲಿಯನ್ನು ಪತ್ರಿಕಾಗೋಷ್ಠಿಯಲ್ಲಿ ಆಯ್ಕೆ ಮಾಡಿದರು. ಕುಮಾರಿ ಮಂಜುಳಾ ಎಂಬುವವರು ಲಕ್ಕಿ ಡಿಪ್‌ನಲ್ಲಿ ಆಯ್ಕೆಯಾಗಿದ್ದು ಅವರ ಹೆಸರಿಗೆ 30X40 ನಿವೇಶನವನ್ನು ಹಸ್ತಾಂತರಿಸಲಾಯಿತು.

  ವಿಚಿತ್ರವೆಂದರೆ ಶಂಕರ್ ನಾಗ್ ಮೇಲೆ ಬಂದಂತಹ ಚಿತ್ರಗಳು ಇದುವರೆಗೂ (ಆಟೋ ಶಂಕರ್) ತೆರೆಯ ಮೇಲೆ ಬಂದಿಲ್ಲ. ಸ್ಯಾನ್ ವಿಶನ್ಸ್ ಸಂಸ್ಥೆ ಮೂಲಕ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರ ಹಾಗಾಗದಿರಲಿ ಎಂದು ಆಶಿಸೋಣ. ಜೈ ಶಂಕರ್ ನಾಗ್ ಜೈ ಕರ್ನಾಟಕ ಮಾತೆ. (ಒನ್‌ಇಂಡಿಯಾ ಕನ್ನಡ)

  English summary
  Golden Star Ganesh to be act in Udaya Prakash's film Auto Raja. Actor Ajay Rao was earlier selected as a hero. Ajay Rao even participated in a pressmeet earlier to announce his acceptance of the film, but later he was not able to allot the dates required by the producers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X