Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕನ್ನಡವನ್ನು ಕೆಟ್ಟ ಭಾಷೆ ಎಂದ ಗೂಗಲ್‌ಗೆ ಬುದ್ಧಿ ಕಲಿಸಿದ ಕನ್ನಡಿಗರು
''ಮೊಲೆಯ ಹಾಲಂತೆ ಸವಿಜೇನು ಬಾಯ್ಗೆ
ತಾಯಿಯಪ್ಪುಗೆಯಂತೆ ಬಲು ಸೊಗಸು ಮೆಯ್ಗೆ
ಗುರುವಿನೋಳ್ನುಡಿಯಂತೆ ಶ್ರೇಯಸ್ಸು ಬಾಳ್ಗೆ
ತಾಯ್ನುಡಿಗೆ ದುಡಿದು ಮಡಿ ಇಹಪರಗಳೇಳ್ಗೆ''
ಕನ್ನಡ ಭಾಷೆಯ ಸುಂದರತೆಯನ್ನು ರಾಷ್ಟ್ರಕವಿ ಕುವೆಂಪು ಹೊಗಳಿರುವುದು ಹೀಗೆ. ಆದರೆ ನಮ್ಮ ಸುಂದರ ತಾಯ್ ಭಾಷೆ ಕನ್ನಡವನ್ನು ಕೆಟ್ಟ ಭಾಷೆ ಎಂದು ಗೂಗಲ್ ಹೇಳುತ್ತಿದೆ!
ಗೂಗಲ್‌ನಲ್ಲಿ ಭಾರತದ ಅತ್ಯಂತ ಕೆಟ್ಟ ಭಾಷೆ ಯಾವುದೆಂದು ಗೂಗಲಿಸಿದರೆ ಉತ್ತರವಾಗಿ 'ಕನ್ನಡ' ಎಂದು ಬರುತ್ತಿದೆ. ಇದು ಕನ್ನಡಿಗರನ್ನು ಕೆರಳಿಸಿದ್ದು, ಗೋಗಲ್‌ನ ಈ ಕುಚೋದ್ಯದ ವಿರುದ್ಧ ಆನ್‌ಲೈನ್ ಅಭಿಯಾನ ಆರಂಭಿಸಿದ್ದಾರೆ.
ಕನ್ನಡಕ್ಕೆ ಗೂಗಲ್ ಮಾಡಿರುವ ಅಪಮಾನದ ಬಗ್ಗೆ ಹಲವರು ವಿಡಿಯೋಗಳನ್ನು ಮಾಡಿದ್ದಾರೆ. ಕನ್ನಡವನ್ನು ಕೆಟ್ಟ ಭಾಷೆ ಎಂದಿರುವ ವೆಬ್‌ಪೇಜ್ ಅನ್ನು ರಿಪೋರ್ಟ್ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಲಾಗಿದೆ. ಅಂತೆಯೇ ಹಲವಾರು ಮಂದಿ ಕನ್ನಡಿಗರು ಆ ವೆಬ್‌ಪೇಜ್ ಅನ್ನು ರಿಪೋರ್ಟ್ ಮಾಡಿದ್ದಾರೆ.

ವೆಬ್‌ಸೈಟ್ ನಿಷ್ಕ್ರಿಯಗೊಂಡಿದೆ
ಗೂಗಲ್‌ನಲ್ಲಿ ಭಾರತದ ಕೆಟ್ಟ ಭಾಷೆ ಯಾವುದು (ugliest language of india) ಎಂದು ಇಂಗ್ಲೀಷ್‌ನಲ್ಲಿ ಟೈಪಿಸಿದರೆ 'ಕನ್ನಡ' ಎಂದು ಗೂಗಲ್ ಹೇಳುತ್ತಿದೆ. https://debtconsolidationsquad.com/ ಹೆಸರಿನ ವೆಬ್‌ಸೈಟ್‌ನಲ್ಲಿ ಭಾರತದ ಕೆಟ್ಟ ಭಾಷೆ ಕನ್ನಡ ಎಂದು ಬರೆಯಲಾಗಿತ್ತು. ರಿಪೋರ್ಟ್ ಮಾಡಿದ ಬಳಿಕ ಈ ವೆಬ್‌ಸೈಟ್ ನಿಷ್ಕ್ರಿಯಗೊಂಡಿದೆ.

'ಕೋರಾ' ವೆಬ್‌ಸೈಟ್‌ನಲ್ಲೂ ಉತ್ತರ ನೀಡಲಾಗಿತ್ತು
'ಕೋರಾ' ವೆಬ್‌ಸೈಟ್‌ನಲ್ಲಿಯೂ ಸಹ ಭಾರತದ ಕೆಟ್ಟ ಭಾಷೆ ಕನ್ನಡ ಎಂದು ಯಾರೋ ಉತ್ತರ ಬರೆದಿದ್ದರು. ಅಲ್ಲಿಯೂ ಸಹ ಕನ್ನಡಿಗರು, ಕನ್ನಡದ ಹಿರಿಮೆ ಗರಿಮೆ ಬಗ್ಗೆ ಉತ್ತರಗಳನ್ನು ಬರೆದು 'ಕನ್ನಡ ಕೆಟ್ಟ ಭಾಷೆ' ಎಂದು ಬರೆದಿದ್ದ ಉತ್ತರವನ್ನು ರಿಪೋರ್ಟ್ ಮಾಡಿದ್ದಾರೆ. ಕೋರಾದಿಂದ ಆ ಉತ್ತರ ಕಾಣೆಯಾಗಿದೆ.

ಸುಂದರ್ ಪಿಚಾಯಿಗೆ ಟ್ವೀಟ್
ಇನ್ನು ಕೆಲವರು ಟ್ವಿಟ್ಟರ್ ಹಾಗೂ ಇನ್ನಿತರೆ ಸಾಮಾಜಿಕ ಜಾಲತಾಣದಲ್ಲಿ ಗೂಗಲ್‌ಗೆ ಹಾಗೂ ಗೂಗಲ್‌ನ ಸಿಇಒ ಸುಂದರ್ ಪಿಚಾಯಿಗೆ ಟ್ಯಾಗ್ ಮಾಡಿ ಕನ್ನಡ ವಿಶ್ವದ ಪ್ರಾಚೀನ ಭಾಷೆಗಳಲ್ಲಿ ಒಂದು. ಕನ್ನಡವು ಒಂದು ಪರಿಪೂರ್ಣ, ವೈಜ್ಞಾನಿಕ ಭಾಷೆ ಎಂದು ಮನದಟ್ಟು ಮಾಡುವ ಯತ್ನ ಮಾಡಿದ್ದಾರೆ.

'ವಿಶ್ವ ಲಿಪಿಗಳ ರಾಣಿ ಕನ್ನಡ'
ಅದೇ ನೀವು ಗೂಗಲ್‌ನಲ್ಲಿ ವಿಶ್ವ ಲಿಪಿಗಳ ರಾಣಿ (queen of languages in the world) ಯಾವುದೆಂದು ಟೈಪ್ ಮಾಡಿದರೆ ಕನ್ನಡದ ಹೆಸರು ಬರುತ್ತಿದೆ. 'ವಿನೋಬಾ ಭಾವೆ ಅವರು ಕನ್ನಡವು ವಿಶ್ವ ಲಿಪಿಗಳ ರಾಣಿ ಎಂದು ಕರೆದಿದ್ದಾರೆ' ಎಂದು ಗೂಗಲ್ ತೋರಿಸುತ್ತಿದೆ. ಭೂದಾನ ಚಳುವಳಿಯ ಹರಿಕಾರ, ಸ್ವಾತಂತ್ರ್ಯ ಹೋರಾಟಗಾರ, ಭಾರತ ರತ್ನ ಪುರಸ್ಕೃತ ಆಚಾರ್ಯ ವಿನೋಬಾ ಭಾವೆ ಅವರು ಕನ್ನಡದ ಬಗ್ಗೆ ಹೇಳಿದ್ದ ಮಾತುಗಳನ್ನು ಗೂಗಲ್ ಕೋಟ್ ಮಾಡಿದೆ. ವಿನೋಬಾ ಭಾವೆ ಹುಟ್ಟಿದ್ದು ಈಗಿನ ಮಹಾರಾಷ್ಟ್ರದಲ್ಲಿ.