For Quick Alerts
  ALLOW NOTIFICATIONS  
  For Daily Alerts

  ನಾದಬ್ರಹ್ಮನಿಗೆ 71ನೇ ಹುಟ್ಟುಹಬ್ಬ: ಸಂಗೀತ ಕ್ಷೇತ್ರಕ್ಕೆ ಹಂಸಲೇಖ ಕೊಡುಗೆ ಅಪಾರ!

  |

  ಕನ್ನಡ ಸಿನಿಮಾರಂಗದ ಕವಿ, ನಾದಬ್ರಹ್ಮ ಹಂಸಲೇಖಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕನ್ನಡ ಚಿತ್ರರಂಗ ಕಂಡ ಅಮೂಲ್ಯ ವಜ್ರ ಹಂಸಲೇಖ. ಇವರ ಕೊಡುಗೆ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ. ಕನ್ನಡ ಸಿನಿಮಾರಂಗಕ್ಕೆ ದುಡಿದ ಇವರ ಕೊಡುಗೆ ಕನ್ನಡ ಸಾಹಿತ್ಯಕ್ಕೂ ಅಪಾರ.

  ಹಂಸಲೇಖ ಹಾಡುಗಳಿಗೆ ಸೋಲದ ಮನಸ್ಸುಗಳೇ ಇಲ್ಲ ಎಂದು ಹೇಳಬಹುದು. ಅಷ್ಟರ ಮಟ್ಟಿಗೆ ಸಿನಿರಸಿಕರ ಮನ ಮಿಡಿತವನ್ನು ಅರಿತು ಹಾಡುಗಳನ್ನು ಬರೆದಿದ್ದಾರೆ. ಹಂಸಲೇಖ ಹಾಡುಗಳು ಎಂದಿಗೂ ಜೀವಂತ. ಇವರು ಕೊಟ್ಟ ಬಹುತೇಕ ಎಲ್ಲಾ ಹಾಡುಗಳು ಎವರ್‌ಗ್ರೀನ್.

  ನನ್ನನ್ನು ಮನುಷ್ಯನನ್ನಾಗಿಸಿದ ಗುರುಗಳು ನೀವು: ಹಂಸಲೇಖಗೆ ಕೈ ಮುಗಿದ ಧನಂಜಯ್ನನ್ನನ್ನು ಮನುಷ್ಯನನ್ನಾಗಿಸಿದ ಗುರುಗಳು ನೀವು: ಹಂಸಲೇಖಗೆ ಕೈ ಮುಗಿದ ಧನಂಜಯ್

  1951 ಜೂನ್ 23ರಂದು ಮೈಸೂರಿನಲ್ಲಿ ಜನಿಸಿದ ಹಂಸಲೇಖ 71ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಂದ್ಹಾಗೆ ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ, ಸಾಹಿತಿ ಹಂಸಲೇಖ ಅವರ ಮೊದಲ ಮೂಲ ಹೆಸರು ಗಂಗರಾಜು.

  1973 ಗೀತ ರಚನಾಕಾರರಾದ ಹಂಸಲೇಖ!

  1973 ಗೀತ ರಚನಾಕಾರರಾದ ಹಂಸಲೇಖ!

  1973 ರಲ್ಲಿ ಬಂದ 'ತ್ರಿವೇಣಿ' ಚಿತ್ರದ 'ನೀನಾ ಭಗವಂತ' ಹಾಡಿನ ಮೂಲಕ ಗೀತ ರಚನೆಕಾರರಾಗಿ ಕನ್ನಡ ಚಿತ್ರರಂಗಕ್ಕೆ ಹಂಸಲೇಖ ಪ್ರವೇಶ ಮಾಡಿದರು. ಅಲ್ಲಿಂದ ಶುರುವಾದ ಹಂಸಲೇಖ ಸಂಗೀತ ಜರ್ನಿ ಇಂದೂ ಕೂಡ ಮುಂದುವರೆದಿದೆ. ಕನ್ನಡ ಮಾತ್ರ ಅಲ್ಲದೆ ತಮಿಳು, ತೆಲುಗು, ಮಲಯಾಳಂ ಚಿತ್ರಗಳಿಗೂ ಸಂಗೀತ ಹಾಗೂ ಸಾಹಿತ್ಯ ಸಂಯೋಜಿಸಿರುವ ಖ್ಯಾತಿ ಇವರಿಗೆ.

  ಡಿ.ಕೆ.ಶಿವಕುಮಾರ್‌ ಜೊತೆ ಹೆಜ್ಜೆ ಹಾಕಲಿದ್ದಾರೆ ಹಂಸಲೇಖಡಿ.ಕೆ.ಶಿವಕುಮಾರ್‌ ಜೊತೆ ಹೆಜ್ಜೆ ಹಾಕಲಿದ್ದಾರೆ ಹಂಸಲೇಖ

  'ಪ್ರೇಮಲೋಕದ' ಮೂಲಕ ಸಂಗೀತ ನಿರ್ದೇಶನ!

  'ಪ್ರೇಮಲೋಕದ' ಮೂಲಕ ಸಂಗೀತ ನಿರ್ದೇಶನ!

  'ಪ್ರೇಮಲೋಕ' ಸಿನಿಮಾದ ಮೂಲಕ 1987ರಲ್ಲಿ ಪೂರ್ಣಪ್ರಮಾಣದ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದರು ಹಂಸಲೇಖ. ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದ್ದರು. ರವಿಚಂದ್ರನ್ ಮತ್ತು ಹಂಸಲೇಖ ಜೋಡಿಯ ಹಾಡುಗಳು ಇಂದಿಗೂ ಜನಪ್ರಿಯವಾಗಿದ್ದು, ಎಂದೆಂದಿಗೂ ಜೀವಂತ. ಈ ಜೋಡಿ ಒಂದು ಸಿನಿಮಾಗಾಗಿ ಒಂದಾಗಿದೆ ಎಂದರೆ ಆ ಚಿತ್ರದ ಹಾಡುಗಳು ಹಿಟ್ ಎಂದೆ ಅರ್ಥ. ಪ್ರೇಮಲೋಕದಲ್ಲಿ ಈ ಜೋಡಿ ಮಾಡಿದ ಮೋಡಿ ಮಾತ್ರ ಇಂದಿನ ಪೀಳಿಗೆಯ ಯುವಕರ ಮನದಲ್ಲಿ ಅಚ್ಚಳಿಯದಂತೆ ಉಳಿದಿತ್ತು.

  3,500 ಹಾಡು, 370ಕ್ಕೂ ಹೆಚ್ಚು ಸಿನಿಮಾ ಸಂಗೀತ!

  3,500 ಹಾಡು, 370ಕ್ಕೂ ಹೆಚ್ಚು ಸಿನಿಮಾ ಸಂಗೀತ!

  ಹಂಸಲೇಖ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಇವರನ್ನು ನಾದಬ್ರಹ್ಮ ಎಂದು ಸುಮ್ಮನ್ನೇ ಕರೆದಿಲ್ಲ. ಅಂದಾಜಿನ ಲೆಕ್ಕಾಚಾರದಂತೆ, ಹಂಸಲೇಖ ಸುಮಾರು 3500 ಹಾಡುಗಳನ್ನು ರಚಿಸಿದ್ದಾರೆ. ಹಾಗೇ 375ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದು ಸಣ್ಣ ಸಾಧನೆ ಅಲ್ಲ. ಇನ್ನು ಇಷ್ಟು ಹಾಡು ಮತ್ತು ಸಿನಿಮಾಗಳಲ್ಲಿ ಬಹುತೇಕ ಎಲ್ಲವೂ ಸೂಪರ್ ಹಿಟ್ ಲಿಸ್ಟ್‌ನಲ್ಲಿವೆ.

  ಕುಪ್ಪಳ್ಳಿಯಲ್ಲಿ ನಿಂತು ಕಹಳೆ ಊದಿದ ಹಂಸಲೇಖ: ''ಹೋರಾಟ ಶುರು''ಕುಪ್ಪಳ್ಳಿಯಲ್ಲಿ ನಿಂತು ಕಹಳೆ ಊದಿದ ಹಂಸಲೇಖ: ''ಹೋರಾಟ ಶುರು''

  ಹಂಸಲೇಖ ಆಯ್ದು ಹಾಡುಗಳ ಪಟ್ಟಿ!

  ಹಂಸಲೇಖ ಆಯ್ದು ಹಾಡುಗಳ ಪಟ್ಟಿ!

  ಹಂಸಲೇಖ ಹಾಡುಗಳಲ್ಲಿ, ಕೆಲವನ್ನು ಮಾತ್ರ ಹಿಟ್ ಹಾಡುಗಳು ಎಂದು ಪಟ್ಟಿ ಮಾಡಲು ಸಾಧ್ಯವಿಲ್ಲ. ಆದರೆ ಒಂದಷ್ಟು ಎವರ್‌ಗ್ರೀನ್ ಹಿಟ್ ಹಾಡುಗಳ ಪಟ್ಟಿ ಇಲ್ಲಿದೆ.

  ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ: ಪ್ರೇಮಲೋಕ

  ಏ ದಿನಕರ: ಓಂ

  ಓ ಗುಲಾಬಿಯೇ: ಓಂ

  ಪ್ರೇಮ ಕಾಶ್ಮೀರಾ: ಶಬ್ಧವೇದಿ

  ನಿಂಬೆ ಹಣ್ಣಿನಂತ ಹುಡುಗಿ: ಪ್ರೇಮಲೋಕ

  ಅಮರಂಜಿ ಚಿನ್ನಯೋ: ಮನೆ ದೇವ್ರು

  ಈ ಭೂಮಿ ಬಣ್ಣದ ಬುಗುರಿ: ಮಹಾಕ್ಷತ್ರಿಯ

  ನವಿಲೇ: ಕಲಾವಿದ

  ಅನ್ನ ನೀಡೋರೆ ನನ್ನೋರು: ಹೃದಯವಂತ

  ಯಾರು ಭೂಮಿಗೆ ಮೊದಲ ಬಾರಿಗೆ: ಸಂಭ್ರಮ

  English summary
  Hamsalekha Birthday He Turn 71, Hamsalekha Hit Songs Top List Is Here, know more,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X