twitter
    For Quick Alerts
    ALLOW NOTIFICATIONS  
    For Daily Alerts

    ನಟಿ ಹರಿಪ್ರಿಯಗೆ ಈಗ ಸಾಯುವುದು ಸುಲಭವಂತೆ!

    |

    ಸಾವು ಎಂಬ ಪದ ಮೊದಲಿನಿಂದಲೂ ಭಯಹುಟ್ಟಿಸುತ್ತಿದೆ. ಆದರೆ ಕೊರೊನಾ ಕಾಡಲು ಪ್ರಾರಂಭವಾದ ನಂತರ ಸಾವು ಎಲ್ಲರಿಗೂ ಬಳಿಯಲ್ಲೇ ಸುಳಿದ ಅನುಭವ.

    Recommended Video

    ದರ್ಶನ್ ಅಭಿಮಾನಿಗಳು ಫುಲ್ ಹ್ಯಾಪಿ | Roberrt Poster | Filmibeat Kannada

    ಸಿನಿಮಾ ಮಂದಿಗಂತೂ ಸಾವು ಪದ ತುಸು ಹೆಚ್ಚೇ ಭಯ ಹುಟ್ಟಿಸುತ್ತಿದೆ ಈ ವರ್ಷ. ಕನ್ನಡ ಚಿತ್ರರಂಗದಲ್ಲಿ ಸೇರಿದಂತೆ ಬಾಲಿವುಡ್ ಹಾಗೂ ಇತರೆ ಸಿನಿರಂಗಗಳಲ್ಲಿ ಅತಿ ಹೆಚ್ಚು ಮಂದಿ ಕಲಾವಿದರು ಸಾವಿಗೀಡಾಗಿದ್ದಾರೆ ಈ ವರ್ಷ. ಅದರಲ್ಲಿಯೂ ಚಿರಂಜೀವಿ ಸರ್ಜಾ, ಸುಶಾಂತ್ ಸಿಂಗ್ ಅವರಂತಹಾ ಕಿರಿಯ, ಉದನೋನ್ಮುಖ ನಟರ ಸಾವು ತೀವ್ರ ಬೇಸರ ತಂದುಬಿಟ್ಟಿದೆ.

    ನಾಲ್ಕು ಭಾಷೆಗಳಿಗೆ ಡಬ್ ಆಗುತ್ತಿದೆ ಹರಿಪ್ರಿಯಾ ನಟನೆಯ 'ಕನ್ನಡ್ ಗೊತ್ತಿಲ್ಲ'ನಾಲ್ಕು ಭಾಷೆಗಳಿಗೆ ಡಬ್ ಆಗುತ್ತಿದೆ ಹರಿಪ್ರಿಯಾ ನಟನೆಯ 'ಕನ್ನಡ್ ಗೊತ್ತಿಲ್ಲ'

    ಇಂಥಹಾ ಸೂಕ್ಷ್ಮ ಸನ್ನಿವೇಶದಲ್ಲಿ ನಟಿ ಹರಿಪ್ರಿಯಾ ಅವರು ಸಾವಿನ ಬಗ್ಗೆ ಮಾತನಾಡಿದ್ದಾರೆ. ಆದರೆ ಅವರ ಅಭಿಮಾನಿಗಳು ಹೆದರಬೇಕಿಲ್ಲ. ಅವರು ಸಾವಿನ ಬಗ್ಗೆ ಮಾತನಾಡಿದ್ದಾರಾದರೂ ಅದು ಸಿನಿಮಾದಲ್ಲಿನ 'ಸುಳ್ಳು ಸಾವು'.

    ಸಿನಿಮಾದಲ್ಲಿ ಸಾಯುವುದು ಬಹಳ ಕಷ್ಟವಂತೆ

    ಸಿನಿಮಾದಲ್ಲಿ ಸಾಯುವುದು ಬಹಳ ಕಷ್ಟವಂತೆ

    ಸಿನಿಮಾಗಳಲ್ಲಿ ಸಾವಿನ ದೃಶ್ಯಗಳು ಸಾಮಾನ್ಯ. ಬಹುತೇಕ ಸಿನಿಮಾಗಳಲ್ಲಿ ಒಂದಲ್ಲಾ ಒಂದು ಸಾವಿನ ದೃಶ್ಯವಿದ್ದೇ ಇರುತ್ತದೆ. ನಿಶ್ಚಲವಾಗಿ ಮಲಗಿದ್ದಲ್ಲೇ ಮಲಗಿರುವುದು ಏನು ದೊಡ್ಡ ಕಾರ್ಯವಲ್ಲ ಎಂದು ನೀವಂದುಕೊಂಡಿದ್ದರೆ ಅದು ತಪ್ಪು. ಹರಿಪ್ರಿಯಾ ಹೇಳುವ ಪ್ರಕಾರ ಈ ಸಾವಿನ ದೃಶ್ಯಗಳಲ್ಲಿ ಅಭಿನಯಿಸುವುದು ಬಹಳ ಸವಾಲಿನ ಕೆಲಸವಂತೆ.

    'ಮೂಗಿನ ಹತ್ತಿ ಒಳಗೆ ಹೋಗುವ ಭಯ'

    'ಮೂಗಿನ ಹತ್ತಿ ಒಳಗೆ ಹೋಗುವ ಭಯ'

    ತಮ್ಮ ಸಿನಿಮಾ ಅನುಭವವನ್ನು ಬ್ಲಾಗ್‌ನಲ್ಲಿ ಬರೆದಿರುವ ಹರಿಪ್ರಿಯ, 'ಒಂದು ಸಿನಿಮಾದಲ್ಲಿ ನಾಯಕ-ನಾಯಕಿ ಸತ್ತಿರ್ತಾರೆ, ಇಬ್ಬರ ಹೆಣ ಮೆರವಣಿಗೆ ಹೋಗುತ್ತಿರುತ್ತೆ, ಅದೇ ಸಮಯದಲ್ಲಿ ಮಳೆ ಬರುತ್ತೆ, ಮಳೆ ಹನಿ ಕಣ್ಣ ಮೇಳೆ ಬೀಳ್ತಿದ್ರು ಶೇಕ್ ಆಗದ ಹಾಗೆ ಇರಬೇಕು, ಮೂಗಿಗೆ ಹತ್ತಿ ಬೇರೆ ಇಟ್ಟಿದ್ರು, ಮಳೆಗೆ ಹತ್ತಿ ನೆನೆದು ಮೂಗಿನ ಒಳಗೆ ಹೋದರೆ ಎಂಬ ಭಯ ಬೇರೆ ನನಗೆ' ಎಂದು ಹರಿಪ್ರಿಯ ಸಾಯುವ ಕಷ್ಟದ ಬಗ್ಗೆ ಹೇಳಿದ್ದಾರೆ.

    ಆಸ್ಟ್ರಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಹರಿಪ್ರಿಯಾ ಅಭಿನಯದ 'ಅಮೃತಮತಿ' ಆಯ್ಕೆಆಸ್ಟ್ರಿಯಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಹರಿಪ್ರಿಯಾ ಅಭಿನಯದ 'ಅಮೃತಮತಿ' ಆಯ್ಕೆ

    'ಕಣ್ಣು ಬಿಟ್ಟುಕೊಂಡು ಸಾಯುವುದು ದೊಡ್ಡ ಪಜೀತಿ'

    'ಕಣ್ಣು ಬಿಟ್ಟುಕೊಂಡು ಸಾಯುವುದು ದೊಡ್ಡ ಪಜೀತಿ'

    ಕಣ್ಣು ಮುಚ್ಚಿಕೊಂಡು ಸಾಯುವುದು ಒಂದಾದರೆ, ಕಣ್ಣು ಬಿಟ್ಟುಕೊಂಡು ಸಾಯುವುವುದು ಇನ್ನೂ ಕಷ್ಟದ ಕೆಲಸವಂತೆ. ಗಾಳಿ, ಧೂಳು ಎಲ್ಲಾ ಬಂದು ಕಣ್ಣಿಗೆ ಬೀಳುತ್ತಿರುತ್ತದೆ ಆದರೂ ಕಣ್ಣು ಮಿಟುಕಿಸುವಂತಿಲ್ಲ. ಒಮ್ಮೊಮ್ಮೆ ಸೆಟ್‌ನಲ್ಲಿಯೇ ಕೆಲವರು ಜೋಕ್ ಮಾಡುತ್ತಿರುತ್ತಾರೆ ಅದನ್ನು ನೋಡಿಯೂ ಸುಮ್ಮನೆ ಮಲಗಿರಬೇಕು' ಇದೆಲ್ಲಾ ಬಹಳ ಸವಾಲಿನ ಕೆಲಸ ಅಂತಾರೆ ಹರಿಪ್ರಿಯ.

    ನಿರ್ದೇಶಕರು ಕೊಟ್ಟ ಐಡಿಯಾ

    ನಿರ್ದೇಶಕರು ಕೊಟ್ಟ ಐಡಿಯಾ

    ನಿರ್ದೇಶಕರೊಬ್ಬರು ಹರಿಪ್ರಿಯಗೆ ಒಂದೊಳ್ಳೆ ಸಲಹೆ ಕೊಟ್ಟರಂತೆ. ಆಕ್ಷನ್ ಹೇಳುವ ಮುನ್ನಾ ಚೆನ್ನಾಗಿ ಗಾಳಿ ಒಳಗೆ ತೆಗೆದುಕೊಂಡು, ಅರ್ಧ ಬಾಯಿ ತೆಗೆದಿಟ್ಟುಕೊಂಡು ಸತ್ತಂತೆ ನಟಿಸಿ, ಶಾಟ್ ಮುಗಿಯುವವರೆಗೆ ಬಾಯಿಯ ಮೂಲಕ ಉಸಿರು ಹೊರಬಿಡುತ್ತಿದ್ದರೆ ಹೆಚ್ಚು ಹೊತ್ತು ಸತ್ತಂತೆ ನಿಶ್ಚಯವಾಗಿ ಇರಬಹುದು ಎಂದು.

    ಸಾಯುವುದು ಮೊದಲಿನಷ್ಟು ಕಷ್ಟವಲ್ಲ: ಹರಿಪ್ರಿಯ

    ಸಾಯುವುದು ಮೊದಲಿನಷ್ಟು ಕಷ್ಟವಲ್ಲ: ಹರಿಪ್ರಿಯ

    ಇದೇ ತಂತ್ರವನ್ನು ಈಗ ಬಳಸುವ ಹರಿಪ್ರಿಯ, ಈಗ ಸಾಯುವುದು ಮೊದಲಿನಷ್ಟು ಕಷ್ಟವಲ್ಲ ಎಂದು ಹೇಳಿದ್ದಾರೆ. ಅವರು ಹಲವಾರು ಸಿನಿಮಾಗಳಲ್ಲಿ ಸತ್ತಿದ್ದಾರಂತೆ. ಕೆಲವುಗಳಲ್ಲಿ ಕಣ್ಣು ಮುಚ್ಚಿ, ಕೆಲವುಗಳಲ್ಲಿ ಕಣ್ಣು-ಬಾಯಿ ಬಿಟ್ಟು. ಕೆಲವು ಸಿನಿಮಾಗಳಲ್ಲಿಯಂತೂ 'ಚೆನ್ನಾಗಿ ಸತ್ತಿದ್ದಕ್ಕೆ' ಚಪ್ಪಾಳೆ ಸಹ ಸಿಕ್ಕಿತಂತೆ!

    English summary
    Haripriya wrote about difficulties actors face while acting in death scene in movie.
    Sunday, July 26, 2020, 12:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X