twitter
    For Quick Alerts
    ALLOW NOTIFICATIONS  
    For Daily Alerts

    ವಿವಿಧತೆಯನ್ನು ಕೊಂದರೆ ಏಕತೆ ಎಲ್ಲಿ? ಹಿಂದಿ ಹೇರಿಕೆ ಬಗ್ಗೆ 'ಹೆಬ್ಬುಲಿ' ಕೃಷ್ಣ ಕಿಡಿ

    |

    ಹಿಂದಿ ಹೇರಿಕೆಗೆ ಕರ್ನಾಟಕದಲ್ಲಿ ವಿರೋಧ ಹೆಚ್ಚಾಗುತ್ತಿದೆ. ತ್ರಿಭಾಷಾ ಸೂತ್ರವನ್ನು ಖಂಡಿಸುತ್ತಿರುವ ಕನ್ನಡಿಗರು ದ್ವಿಭಾಷಾ ನೀತಿ ಜಾರಿಗೆ ಒತ್ತಾಯಿಸುತ್ತಿದ್ದಾರೆ.

    Recommended Video

    ಬ್ರಹ್ಮ ಚಿತ್ರದಲ್ಲಿನ Upendra Pranitha ಮುಂಬೈನ ಕ್ಲಬ್‌ನಲ್ಲಿ ಹಾಡಿನ ಚಿತ್ರೀಕರಣ | Filmibeat Kannada

    ಈ ಅಭಿಯಾನಕ್ಕೆ ಕನ್ನಡ ಚಿತ್ರರಂಗದಿಂದಲೂ ಹಲವರು ಬೆಂಬಲ ನೀಡಿದ್ದಾರೆ. ನಿಖಿಲ್ ಕುಮಾರ್, ಚೇತನ್, ವಸಿಷ್ಠ ಸಿಂಹ, ಸಂತೋಷ್ ಆನಂದ್ ರಾಮ್, ಸಿಂಪಲ್ ಸುನಿ ದ್ವಿಭಾಷಾ ನೀತಿ ಪರ ನಿಂತಿದ್ದಾರೆ.

    'ಸ್ಪಷ್ಟ ನಿಲುವು ಬೇಕು': ಪುನೀತ್ ಮಾಡಿದ್ದ ಟ್ವೀಟ್ ಬಗ್ಗೆ ನೆಟ್ಟಿಗರು ಅತೃಪ್ತಿ'ಸ್ಪಷ್ಟ ನಿಲುವು ಬೇಕು': ಪುನೀತ್ ಮಾಡಿದ್ದ ಟ್ವೀಟ್ ಬಗ್ಗೆ ನೆಟ್ಟಿಗರು ಅತೃಪ್ತಿ

    ಇದೀಗ, ಸ್ಯಾಂಡಲ್‌ವುಡ್‌ನ ಮತ್ತೊಬ್ಬ ಸ್ಟಾರ್ ನಿರ್ದೇಶಕ ಹೆಬ್ಬುಲಿ ಖ್ಯಾತಿಯ ಕೃಷ್ಣ ಹಿಂದಿ ಹೇರಿಕೆಯನ್ನು ಖಂಡಿಸಿದ್ದಾರೆ. ವಿವಿಧತೆಯಲ್ಲಿ ಏಕತೆ ಎನ್ನುವ ದೇಶದಲ್ಲಿ ವಿವಿಧತೆಯನ್ನು ಕೊಂದರೆ ಏಕತೆ ಎಲ್ಲಿ? ಎಂದು ಪ್ರಶ್ನಿಸಿದ್ದಾರೆ.

    Hebbuli Director Krishna condemns Hindi Imposition

    ಈ ಕುರಿತು ಟ್ವೀಟ್ ಮಾಡಿರುವ ಕೃಷ್ಣ 'ವಿವಿಧತೆಯನ್ನು ಕೊಂದರೆ ಏಕತೆ ಎಲ್ಲಿ. ಕಡ್ಡಾಯವಾಗಿ ಮಾತೃಭಾಷಾ ಶಿಕ್ಷಣಕ್ಕೆ ಮೊದಲ ಆದ್ಯತೆ, ಅನ್ಯ ರಾಜ್ಯ ಹಾಗೂ ದೇಶಗಳೊಡನೆ ಸಂಪರ್ಕ ಭಾಷೆಯಾಗಿ ಆಂಗ್ಲ ಭಾಷೆಯನ್ನು ಸ್ವೀಕರಿಸಲಾಗಿದೆ. ಮತ್ತೊಂದು ಸಂಪರ್ಕ ಭಾಷೆಯಾಗಿ ಹಿಂದಿಯ ಅವಶ್ಯಕತೆಯಿಲ್ಲ, ಅನಗತ್ಯವಾಗಿ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯ ದಬ್ಬಾಳಿಕೆಯನ್ನು ವಿರೋಧಿಸುತ್ತೇನೆ' ಎಂದಿದ್ದಾರೆ.

    ಅಂದು ಕನ್ನಡ ಭಾಷೆಗೆ ಅನ್ಯಾಯವಾಗುತ್ತಿದೆ ಎಂದಾಗ ಇಡೀ ಚಿತ್ರರಂಗ ಒಗ್ಗಟ್ಟಾಗಿ ನಿಂತು ಗೋಗಾಕ್ ಚಳವಳಿಯಲ್ಲಿ ಭಾಗಿಯಾಗಿತ್ತು. ಈಗ ಮತ್ತೆ ಹಿಂದಿ ಹೇರಿಕೆ ವಿಚಾರದಲ್ಲಿ ಕನ್ನಡಿಗರ ಸ್ವಾಭಿಮಾನವನ್ನು ಪ್ರಶ್ನಿಸಲಾಗುತ್ತಿದೆ. ಈಗಲೂ ಸಿನಿಮಾರಂಗ ಕನ್ನಡಿಗರ ಪರ ನಿಲ್ಲಬೇಕೆಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ.

    English summary
    Hebbuli, Pailwan Fame Director Krishna condemns hindi Imposition and he support kannada.
    Saturday, August 22, 2020, 13:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X