»   » ಅತಿ ಹೆಚ್ಚು ಸಂಭಾವನೆ ಎಣಿಸುವ ದಕ್ಷಿಣದ ನಟಿಯರು

ಅತಿ ಹೆಚ್ಚು ಸಂಭಾವನೆ ಎಣಿಸುವ ದಕ್ಷಿಣದ ನಟಿಯರು

By: ಉದಯರವಿ
Subscribe to Filmibeat Kannada

ಬಾಲಿವುಡ್ ನಿಂದ ಕೋಲಿವುಡ್ ತನಕ ಒಂದೇ ತಕರಾರು. ಅದೇನಪ್ಪಾ ಅಂದ್ರೆ ನಾಯಕರ ನಟರ ಸಂಭಾವನೆಗೆ ಹೋಲಿಸಿದರೆ ನಾಯಕಿಯರ ಸಂಭಾವನೆ ಯಾಕೆ ಕಮ್ಮಿ ಎಂಬುದು? ನಾಯಕ ನಟರಿಗಿಂತ ನಾವೇನು ಕಮ್ಮಿ? ನಮಗ್ಯಾಕೆ ಸಂಭಾವನೆಯಲ್ಲಿ ತಾರತಮ್ಯ ಎಂದು ಇತ್ತೀಚೆಗೆ ಹಲವು ತಾರೆಗಳು ಚರ್ಚೆಗೆ ದಾರಿ ಮಾಡಿಕೊಟ್ಟಿದ್ದಾರೆ.

ನಾಯಕ ನಟನಾದರೆ ಅರುವತ್ತು ಎಪ್ಪತ್ತು ವರ್ಷವಾದರೂ ಚಾಲ್ತಿಯಲ್ಲಿರುತ್ತಾರೆ. ಆದರೆ ನಟಿಮಣಿಯರು ಮಾತ್ರ ಐದಾರು ವರ್ಷಗಳು ಚಾಲ್ತಿಯಲ್ಲಿದ್ದರೆ ಅದೇ ದೊಡ್ಡ ಸುದ್ದಿ ಎಂಬಂತಾಗಿದೆ. ಒಂದು ವೇಳೆ ಅವರು ಹತ್ತು ಹದಿನೈದು ವರ್ಷಗಳ ಕಾಲ ಇದ್ದರೂ ಅತ್ತೆ, ಅಮ್ಮ, ಅಜ್ಜಿ ಪಾತ್ರಗಳೇ ಅವರ ಪಾಲಿಗೆ ಸಿಗುವುದು. [ದಕ್ಷಿಣ ಭಾರತದ ಹೆಚ್ಚು ಸಂಭಾವನೆ ಗಳಿಸುವ ನಾಯಕರು]

ಗಂಡು ಹೆಣ್ಣು ಎಂಬ ಭೇದಭಾವ ಬಣ್ಣದ ಜಗತ್ತಿಗೂ ಅಂಟಿಕೊಂಡಿದೆ. ಇರಲಿ ವಿಷಯ ಇದಲ್ಲ. ದಕ್ಷಿಣ ಭಾರತದಲ್ಲಿ ಈಗ ಅತ್ಯಧಿಕ ಸಂಭಾವನೆ ಪಡೆಯುವ ನಟಿಯರ ಮೇಲೊಂದು ಇಣುಕು ನೋಟ ಬೀರೋಣ ಬನ್ನಿ. ತಾರೆಗಳ ಸಂಭಾವನೆ ಇಷ್ಟೇ ಎಂದು ಕರಾರುವಕ್ಕಾಗಿ ಹೇಳುವುದು ಕಷ್ಟ. ಹೆಚ್ಚುಕಡಿಮೆ ಇಷ್ಟಿರಬಹುದು ಎಂಬ ಲೆಕ್ಕಾಚಾರ ಇದು.

ಅತಿಹೆಚ್ಚು ಸಂಭಾವನೆ ಪಡೆಯುವ ನಯನತಾರಾ

ದಕ್ಷಿಣದಲ್ಲಿ ಬಲು ಬೇಡಿಕೆ ಇರುವ ತಾರೆಗಳಲ್ಲಿ ನಯನತಾರಾ ಸಹ ಒಬ್ಬರು. ಇವರು ಚಿತ್ರವೊಂದಕ್ಕೆ ಸುಮಾರು ರು.2.5ರಿಂದ 3 ಕೋಟಿ ಎಣಿಸುತ್ತಾರೆ.

ಬೆಂಗಳೂರು ಸಂಪಿಗೆ ಅನುಷ್ಕಾ ಶೆಟ್ಟಿ ರೇಟು

ಬೆಂಗಳೂರು ಸಂಪಿಗೆ ಅನುಷ್ಕಾ ಶೆಟ್ಟಿ ಅವರಿಗೆ ತೆಲುಗು, ತಮಿಳಿನಲ್ಲಿ ಬಲು ಬೇಡಿಕೆ ಇದೆ. ಚಿತ್ರವೊಂದಕ್ಕೆ ಸುಮಾರು ರು. 2.5 ಕೋಟಿ ಪಡೆಯುತ್ತಾರೆ.

ಮಿಲ್ಕಿ ಬ್ಯೂಟಿ ತಮನ್ನಾ ರೇಟು ವಸಿ ಜಾಸ್ತಿನೇ

ಮಿಲ್ಕಿ ಬ್ಯೂಟಿ ಎಂದೇ ಕರೆಸಿಕೊಂಡಿರುವ ಈ ಚೆಲುವೆ ಚಿತ್ರವೊಂದಕ್ಕೆ ರು.1.75 ಕೋಟಿ ಪಡೆಯುತ್ತಾರಂತೆ. ಸದ್ಯಕ್ಕೆ ತೆಲುಗಿನ ಮಹೇಶ್ ಬಾಬು ಜೊತೆ ಆಗಡು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಇಲಿಯಾನಾ ರೇಟು ಯಾರಿಗೇನು ಕಮ್ಮಿ ಇಲ್ಲ

ಗೋವಾ ಬ್ಯೂಟಿ ಇಲಿಯಾನಾ ಡಿಸೋಜಾ ರೇಟು ಯಾರಿಗೇನು ಕಮ್ಮಿ ಇಲ್ಲ. ಸದ್ಯಕ್ಕೆ ಬಾಲಿವುಡ್ ಚಿತ್ರರಂಗದ ಮೇಲೆ ತಮ್ಮ ನೋಟ ನೆಟ್ಟಿರುವ ಈ ತಾರೆ ಚಿತ್ರವೊಂದಕ್ಕೆ ರು.1.5 ಕೋಟಿ ಎಣಿಸುತ್ತಾರೆ.

ಕಾಜಲ್ ಅಗರವಾಲ್ ರೇಟು ಇಷ್ಟೆನಾ?

ಎಲ್ಲಾ ತಾರೆಗಳೂ ಕೋಟಿಗಳಲ್ಲೆ ಸಂಭಾವನೆ ಎಣಿಸಲ್ಲ ಎಂಬುದಕ್ಕೆ ಕಾಜಲ್ ಅಗರವಾಲ್ ಅವರೇ ಉದಾಹರಣೆ. ಇವರ ಸಂಭಾವನೆ ಅಬ್ಬಬ್ಬಾ ಎಂದರೆ ರು.75 ಲಕ್ಷದಿಂದ 1 ಕೋಟಿ ಒಳಗೆ ಎನ್ನುತ್ತವೆ ಮೂಲಗಳು.

ತ್ರಿಷಾ ಕೃಷ್ಣನ್ ಸಂಭಾವನೆ ಕೂಡ ಅಷ್ಟೆಯಾ

ಒಂದು ಕಾಲದಲ್ಲಿ ದಕ್ಷಿಣದಲ್ಲಿ ಅದರಲ್ಲೂ ತಮಿಳು ಚಿತ್ರೋದ್ಯಮದಲ್ಲಿ ರಾಣಿಯಂತೆ ಮೆರೆದ ತಾರೆ. ಇದೀಗ ಸಾಕಷ್ಟು ಡಿಮ್ಯಾಂಡ್ ಮಾಡುತ್ತಿದ್ದರೂ ಅವರಿಗೆ ಡಿಮ್ಯಾಂಡ್ ಇಲ್ಲ ಎಂಬ ಕಾರಣಕ್ಕೆ ನಿರ್ಮಾಪಕರು ರು.80 ರಿಂದ 1 ಕೋಟಿ ಒಳಗೆ ವ್ಯವಹಾರ ಮುಗಿಸುತ್ತಿದ್ದಾರೆ.

ಶ್ರುತಿ ಹಾಸನ್ ಸಂಭಾವನೆ ತೃಪ್ತಿಕರ

ತುಂಬಾ ಎಕ್ಸ್ ಪೆಕ್ಟ್ ಮಾಡದೆ ತನಗಿಷ್ಟೇ ಸಾಕು ಎಂದು ಅಡ್ಜೆಸ್ಟ್ ಮಾಡಿಕೊಂಡಂತೆ ಕಾಣುತ್ತಾರೆ ನಟಿ ಶ್ರುತಿ ಹಾಸನ್. ಚಿತ್ರವೊಂದಕ್ಕೆ ರು.75 ಲಕ್ಷದಿಂದ 1 ಕೋಟಿ ಒಳಗೆ ಇದೆ ಅವರ ಸಂಭಾವನೆ.

ಅಸಿನ್ ಸಂಭಾವನೆ ವಸಿ ಜಾಸ್ತಿಯೇ?

ಈ ಮಲ್ಲು ಬೆಡಗಿ ದಕ್ಷಿಣದಿಂದ ಬಾಲಿವುಡ್ ಗೆ ಜಿಗಿದು ಈಗ ತನ್ನದೇ ಆದಂತಹ ಎತ್ತರಕ್ಕೆ ಏರಿದ್ದಾರೆ. ಬಾಲಿವುಡ್ ನಲ್ಲಿ ಚಿತ್ರವೊಂದಕ್ಕೆ ರು.1 ಕೋಟಿ ಪಡೆಯುತ್ತಾರಂತೆ.

ಮುಗ್ಧ ಚೆಲುವೆ ಅಮಲಾ ಪೌಲ್ ರೇಟು

ತೆರೆಯ ಮೇಲೆ ಬಲು ಮುದ್ದಗಾಗಿ ಕಾಣುವ ಅಮಲಾ ಪೌಲ್ ಎಂಬ ಬೆಡಗಿ ಚಿತ್ರವೊಂದಕ್ಕೆ ರು.1 ಕೋಟಿ ಎಣಿಸುತ್ತಾರೆ.

ಹಂಸಿಕಾ ಮೋಟ್ವಾನಿ ರೇಟು ಡೌನ್

ತೆಲುಗು ಚಿತ್ರದಲ್ಲಿ ಬಿಜಿಯಾಗಿರುವ ಈ ತಾರೆ ಚಿತ್ರವೊಂದಕ್ಕೆ ರು.80 ಲಕ್ಷ ಪಡೆಯುತ್ತಾರೆ.

ಪ್ರಿಯಾಮಣಿ ಡಿಮ್ಯಾಂಡಪ್ಪೋ ಡಿಮ್ಯಾಂಡ್

ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಅಭಿನಯಿಸಿರುವ ತಾರೆ ಪ್ರಿಯಾಮಣಿ ಚಿತ್ರವೊಂದಕ್ಕೆ ರು.75 ಲಕ್ಷ ಸಂಭಾವನೆ ಪಡೆಯುತ್ತಾರೆ.

ರೂಪಸಿ ತಾಪಸಿ ರೇಟು ಸ್ವಲ್ಪ ಕಡಿಮೆ

ಹೆಸರಿಗೆ ತಕ್ಕಂತೆ ತಾಪಸಿ ರೂಪಸಿಯೇ? ಆದರೆ ಸಂಭಾವನೆ ವಿಚಾರದಲ್ಲಿ ಮಾತ್ರ ನಿರ್ಮಾಪಕರು ಯಾಕೋ ಸ್ವಲ್ಪ ಹಿಂದೇಟು ಹಾಕುತ್ತಿದ್ದಾರೆ ಅನ್ನಿಸುತ್ತದೆ. ಚಿತ್ರವೊಂದಕ್ಕೆ ರು. 65 ಲಕ್ಷ ಪಡೆಯುತ್ತಾರೆ.

ರಮ್ಯಾ ರೇಟು ಏನೂ ಕಡಿಮೆಯಾಗಿಲ್ಲ

ಸ್ಯಾಂಡಲ್ ವುಡ್ ನಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ತಾರೆ ಗೋಲ್ಡನ್ ಗರ್ಲ್ ರಮ್ಯಾ. ಚಿತ್ರವೊಂದಕ್ಕೆ ಅವರು ರು.54 ಲಕ್ಷ ಪಡೆಯುತ್ತಾರೆ ಎಂಬುದು ಸದ್ಯದ ಮಾಹಿತಿ.

ಕನ್ನಡಕ್ಕೂ ಅಡಿಯಿಟ್ಟಿರುವ ಅಂಜಲಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ದೂಕುಡು ರೀಮೇಕ್ ಚಿತ್ರದ ಮೂಲಕ ಕನ್ನಡಕ್ಕೂ ಅಂಜಲಿ ಅಡಿಯಿಟ್ಟಿದ್ದಾರೆ. ಚಿತ್ರವೊಂದಕ್ಕೆ ರು.50 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ.

ಮದುವೆಯಾದ ಬಳಿಕ ಜೆನಿಲಿಯಾ ರೇಟಿ ಡೌನ್

ಮದುವೆಯಾದ ಬಳಿಕ ಜೆನಿಲಿಯಾ ಡಿಸೋಜಾ ರೇಟು ಡೌನ್ ಆಗಿದೆಯೇ? ಚಿತ್ರವೊಂದಕ್ಕೆ ಅವರು ರು.50 ಲಕ್ಷ ಎಣಿಸುತ್ತಿದ್ದಾರಂತೆ.

ಚಂದ್ರಮುಖಿ ಶ್ರೀಯಾ ಸರನ್ ಸಂಭಾವನೆ

'ಚಂದ್ರ' ಚಿತ್ರದ ಮೂಲಕ ಕನ್ನಡಕ್ಕೆ ಅಡಿಯಿಟ್ಟ ತಾರೆ ಶ್ರೀಯಾ ಸರನ್. ಇವರ ಸಂಭಾವನೆಯ ಗ್ರಾಫು ಹಾವು ಏಣಿ ಆಟದಂತೆ ಆಗಿದೆ. ಇದೀಗ ಚಿತ್ರವೊಂದಕ್ಕೆ ರು.40 ಲಕ್ಷ ಪಡೆಯುತ್ತಿದ್ದಾರೆ.

ನಿತ್ಯಾ ಮೆನನ್ ರೇಟು ಎಷ್ಟು ಗೊತ್ತೆ?

ಚಿತ್ರವೊಂದಕ್ಕೆ ನಟಿ ನಿತ್ಯಾ ಮೆನನ್ ರು.40 ಲಕ್ಷ ಸಂಭಾವನೆ ಪಡೆಯುತ್ತಾರಂತೆ.

ಬೆಳಗಾವಿ ಬ್ಯೂಟಿ ಲಕ್ಷ್ಮಿ ರೈ ಸಂಭಾವನೆ

ಕಾಂಚನ ಹಾಗೂ ಮಾಂಕಥ ಚಿತ್ರದ ಮೂಲಕ ಯಶಸ್ಸಿನ ಮೆಟ್ಟಿಲು ಏರಿದ ತಾರೆ ಲಕ್ಷ್ಮಿ ರೈ. ಇದೀಗ ಚಿತ್ರವೊಂದಕ್ಕೆ ರು.25 ಲಕ್ಷ ಸಂಭಾವನೆ ಪಡೆಯುತ್ತಾರಂತೆ.

ಚಾರ್ಮಿಂಗ್ ತಾರೆ ಚಾರ್ಮಿ ಕೌರ್

ಕಡಿಮೆ ವಯಸ್ಸಿಗೆ ಬಣ್ಣದ ಲೋಕಕ್ಕೆ ಅಡಿಯಿಟ್ಟ ಚಾರ್ಮಿ ಕೌರ್ ಚಿತ್ರವೊಂದಕ್ಕೆ ರು.20 ರಿಂದ 25 ಲಕ್ಷ ಎಣಿಸುತ್ತಾರೆ.

English summary
The actresses' remunerations are also very less when compared to that of actors. We bring you the details of highest paid actresses in South India.
Please Wait while comments are loading...