»   » Pics: ಸೆಕ್ಸಿ ಸಿಲ್ಕ್ ಸ್ಮಿತಾ ಪಾತ್ರದಲ್ಲಿ ಹಾಟ್ ಸನಾ

Pics: ಸೆಕ್ಸಿ ಸಿಲ್ಕ್ ಸ್ಮಿತಾ ಪಾತ್ರದಲ್ಲಿ ಹಾಟ್ ಸನಾ

Posted By:
Subscribe to Filmibeat Kannada

ಈಗ ಬಿಗ್ ಬಾಸ್ ನದ್ದೆ ಎಲ್ಲೆಡೆ ಸುದ್ದಿ ಬಾಲಿವುಡ್ ತಾರೆ, ರೂಪದರ್ಶಿ ಹಾಗೂ ಡಾನ್ಸರ್ ಹಾಗೂ ಹಿಂದಿ ಬಿಗ್ ಬಾಸ್ ನ ಮೂರನೇ ಸ್ಥಾನ ವಿಜೇತೆ ಸನಾ ಖಾನ್ ಕೂಡಾ ಸುದ್ದಿಯಲ್ಲಿದ್ದಾಳೆ. ಕನ್ನಡದ ಕೂಲ್ ಸಖತ್ ಹಾಟ್ ಮಗ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಅಭಿನಯಿಸಿದ್ದ ಈ ಬೆಡಗಿಗೆ ಸಕತ್ ಆಫರ್ ಸಿಕ್ಕಿದೆ.

25 ವರ್ಷದ ಈ ಪ್ರತಿಭಾವಂತೆಗೆ ಬಿಗ್ ಬಾಸ್ 6 ರಿಯಾಲಿಟಿ ಶೋ ನಂತರ ಮಲೆಯಾಳಂ ಚಿತ್ರವೊಂದರಲ್ಲಿ ಆಫರ್ ಸಿಕ್ಕಿದೆ. ಸನಾ ಅಮ್ಮ ಕೂಡಾ ಮಲೆಯಾಳಿಯಾಗಿದ್ದು ಕಣ್ಣೂರು ಮೂಲದವರಾಗಿದ್ದಾರೆ. ಇದಕ್ಕಿಂತ ಮುಖ್ಯವಾಗಿ ಸನಾಗೆ ಸಿಕ್ಕಿರುವುದು ಇತ್ತೀಚೆಗೆ ಡ್ರೀಲ್ ರೋಮ್ ಎಂದೇ ಪರಿಗಣಿಸಲ್ಪಟ್ಟಿರುವ ಸೆಕ್ಸ್ ಬಾಂಬ್ ಸ್ಕಿಲ್ ಸ್ಮಿತಾ ಪಾತ್ರ.

ಸಿಲ್ಕ್ ಪಾತ್ರಕ್ಕೆ ವಿದ್ಯಾ ಬಾಲನ್ ಜೀವ ತುಂಬಿದ ನಂತರ ಸಾಲು ಸಾಲು ಸಿಲ್ಕ್ ಸ್ಮಿತಾ ಕುರಿತ ಚಿತ್ರಗಳು ಸೆಟ್ಟೇರಿದ್ದು ನಿಜ. ಕನ್ನಡದಲ್ಲೂ ಸಿಲ್ಕ್ ಸ್ಮಿತಾ ಸಕತ್ ಹಾಟ್ ಎಂಬ ಹೆಸರಿನಲ್ಲಿ ಚಿತ್ರ ತೆರೆಗೆ ಬರಲಿದ್ದು, ಪಾಕಿಸ್ತಾನಿ ನಟಿ ವೀಣಾ ಮಲ್ಲಿಕ್ ಮುಖ್ಯ ಪಾತ್ರದಲ್ಲಿದ್ದಾರೆ. ಆದರೆ, ಸನಾ ನಟಿಸುತ್ತಿರುವ ಮಲೆಯಾಳಂ ಚಿತ್ರ ಹಲವು ಬಗೆಯಿಂದ ಕುತೂಹಲ ಕೆರಳಿಸಿದೆ. ಸಿಲ್ಕ್ ಸ್ಮಿತಾ ಕುರಿತ ಚಿತ್ರದಲ್ಲಿ ಸನಾ ಮುಖ್ಯ ಪಾತ್ರಧಾರಿಯಾಗಿದ್ದು, ಈ ಚಿತ್ರದಲ್ಲಿ ಅಂಥದ್ದೇನಿದೆ ಎಂಬುದನ್ನು ಮುಂದೆ ನೋಡುತ್ತಾ ಹೋಗಿ...

ಸಿಲ್ಕ್ ಆಗಿ ಸನಾ ಖಾನ್

ಸಿಲ್ಕ್ ಸ್ಮಿತಾಳಿಗೆ ಮೊಟ್ಟ ಮೊದಲ ಬಾರಿಗೆ ಮಲೆಯಾಳಂ ಚಿತ್ರರಂಗದಲ್ಲಿ ಚಾನ್ಸ್ ಕೊಟ್ಟ ಚಿತ್ರಕಥೆಗಾರ ಅಂಟೋನಿ ಈಸ್ಟಮನ್ ಅವರು ಈ ಹೊಸ ಚಿತ್ರಕ್ಕೆ ಕಥೆ ಸಂಭಾಷಣೆ ಒದಗಿಸಿರುವುದು ಕುತೂಹಲ ಕೆರಳಿಸಿದೆ. ಸಿಲ್ಕ್ ಸ್ಮಿತಾಳ ಸಂಪೂರ್ಣ ಜೀವನ ಚರಿತ್ರೆ ಇದಾಗಲಿದೆ ಎನ್ನಲಾಗಿದೆ.

ಸಿಲ್ಕ್ ಆಗಿ ಸನಾ ಖಾನ್

ದಕ್ಷಿಣ ಭಾರತದಲ್ಲಿ ಚಿರಪರಿಚಿತಳಾಗಿರುವ ಮುಂಬೈ ಬೆಡಗಿ ಸನಾ, ತಮಿಳಿನಲ್ಲಿ ಸಿಲಂಬರಸನ್ ಜೊತೆ ಸಿಲಂಬಾಟ್ಟಂ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಳು

ಸಿಲ್ಕ್ ಆಗಿ ಸನಾ ಖಾನ್

ಮಲೆಯಾಳಂನ ಈ ಸಿಲ್ಕ್ ಸ್ಮಿತಾ ಚಿತ್ರದ ಹೆಸರು 'ಕ್ಲೈಮ್ಯಾಕ್ಸ್'. 25 ವರ್ಷ ವಯಸ್ಸಿನ ಸನಾ ಐದು ಭಾಷೆಗಳಲ್ಲಿ 14ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾಳೆ. 50ಕ್ಕೂ ಅಧಿಕ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾಳೆ

ಸಿಲ್ಕ್ ಆಗಿ ಸನಾ ಖಾನ್

ಕ್ಲೈಮ್ಯಾಕ್ಸ್ ಚಿತ್ರ ತಮಿಳಿನಲ್ಲಿ ನಡಿಗಿಯಿನ್ ಡೈರಿ ಅರ್ಥಾತ್ ನಟಿಯ ಡೈರಿ ಎಂಬ ಹೆಸರಿನಲ್ಲಿ ಡಬ್ ಆಗುತ್ತಿದೆ. ಕನ್ನಡದಲ್ಲಿ ಡಬ್ ಮಾಡಲು ಅವಕಾಶ ಇಲ್ಲದಿರುವುದರಿಂದ ತಮಿಳು, ಮಲೆಯಾಳಂ ಅಲ್ಲದೆ ತೆಲುಗು ಭಾಷೆಗೂ ಡಬ್ ಆಗುವ ಸಾಧ್ಯತೆಯಿದೆ

ಸಿಲ್ಕ್ ಆಗಿ ಸನಾ ಖಾನ್

ಸ್ಕಿಲ್ ಸ್ಮಿತಾ ಜೀವನದ ಕೆಲವು ಹಸಿ ಬಿಸಿ ಸತ್ಯಗಳನ್ನು ಈ ಚಿತ್ರ ಹೊರಹಾಕಲಿದೆ ಎಂಬ ಸುದ್ದಿಯಿದೆ. ಸ್ಕಿಲ್ ಸ್ಮಿತಾಳ ವೃತ್ತಿ ಜೀವನ ಹಾಗೂ ಜೀವನದ ಕೊನೆಗಾಲದ ಭಾಗದ ಮೇಲೆ 'ಕ್ಲೈಮ್ಯಾಕ್ಸ್' ಚಿತ್ರ ಹೆಚ್ಚಿನ ಬೆಳಕು ಚೆಲ್ಲಲಿದೆ. ಸಿಲ್ಕ್ ಸ್ಮಿತಾಳ ಕೊನೆಗಾಲದಲ್ಲಿ ಕೈ ಹಿಡಿದವರು, ಕೈ ಕೊಟ್ಟವರ ಕಥೆ ಇದರಲ್ಲಿ ಸಿಗಲಿದೆ.

English summary
Yesteryear sex sensation Silk Smitha has become a hot property and most debatable actress in the recent years. Thanks to Bollywood filmmaker Ekta Kapoor, who made an unofficial biopic on the late actress. Since then, many directors from different film industries are fancying the idea of having their own take on Silk.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada