»   » ಅಣ್ಣಾವ್ರ ಹುಟ್ಟುಹಬ್ಬದಂದು 'ಹೌಸ್ ಫುಲ್' ನೃತ್ಯಗಾಯನ

ಅಣ್ಣಾವ್ರ ಹುಟ್ಟುಹಬ್ಬದಂದು 'ಹೌಸ್ ಫುಲ್' ನೃತ್ಯಗಾಯನ

Posted By:
Subscribe to Filmibeat Kannada

ಕನ್ನಡ ಚಿತ್ರರಂಗ ಕಂಡ ಅದ್ವೀತೀಯ ನಟ, ಗಾಯಕ, ಡಾ. ರಾಜ್ ಕುಮಾರ್ ಅವರ 87ನೇ ಹುಟ್ಟುಹಬ್ಬ ಇದೇ ಏಪ್ರಿಲ್ 24 ರಂದು ಇದೆ. ಪ್ರತಿವರ್ಷಕ್ಕಿಂತ ಈ ವರ್ಷ ಡಾ. ರಾಜ್ ಹುಟ್ಟು ಹಬ್ಬ ವಿಭಿನ್ನವಾಗಿದೆ. ಹೇಗೆಂದರೆ ಸಾಕಷ್ಟು ಸಂಘ ಸಂಸ್ಥೆಗಳು ಈ ವರನಟನ ಸವಿನೆನಪಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಕಳೆದ 25 ವರ್ಷಗಳಿಂದ ಸಿನಿಮಾ ಪತ್ರಿಕಾ ಛಾಯಾಗ್ರಾಹಕನಾಗಿ ಸೇವೆ ಸಲ್ಲಿಸುತ್ತಿರುವ ಶ್ರೀವತ್ಸ ಶಾಂಡಿಲ್ಯ ತನ್ನ ವೃತ್ತಿಯ ಜೊತೆಗೆ ಅನೇಕ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಮೂರು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಆರಂಭಿಸಿ ಅನೇಕ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದಾರೆ. [ಡಾ.ರಾಜ್ ಹುಟ್ಟುಹಬ್ಬ ನಿಮಿತ್ತ ವಿಶೇಷ ಕಾರ್ಯಕ್ರಮ]

'House Full' Classical Dance Program on Dr Rajkumar birthday

ಅಲ್ಲದೆ ಪ್ರತಿವರ್ಷ ರಾಜ್ ಹುಟ್ಟುಹಬ್ಬದಂದು ರಾಜಗೀತಗಾಯನ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ. ಅದರಂತೆ ಈ ವರ್ಷವೂ ಇದೇ 24 ರಂದು ಸಂಜೆ 6 ಗಂಟೆಗೆ ಮಲ್ಲೇಶ್ವರಂ ಸೇವಾಸದನದಲ್ಲಿ 'ಹೌಸ್ ಫುಲ್' ಹೆಸರಿನ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. 60-70 ದಶಕದಲ್ಲಿ ಡಾ.ರಾಜ್ ಅಭಿನಯಿಸಿದ ಅವಿಸ್ಮರಣೀಯ ಹಾಡುಗಳಿಗೆ ಹಾಗೂ ಹಳೆಯ ಕನ್ನಡ ಚಿತ್ರಗೀತೆಗಳಿಗೆ ಹೆಸರಾಂತ ನೃತ್ಯ ಕಲಾವಿದರಿಂದ ಭರತನಾಟ್ಯ, ಕೂಚುಪುಡಿ, ಕಥಕ್ ಶೈಲಿಯ ನೃತ್ಯ ಪ್ರದರ್ಶನ ಏರ್ಪಡಿಸಿದ್ದಾರೆ. [ಡಾ. ರಾಜ್ ನಟಿಸಿದಂತಹ ಕೌಟುಂಬಿಕ ಚಿತ್ರಗಳು ಮರಳಿ ಬರಬಹುದೇ?]

ಸತತ 3 ಗಂಟೆಗಳ ಕಾಲ ನಡೆಯುವ ಈ ಅವಿಸ್ಮರಣೀಯ ನೃತ್ಯಗಾಯನ ಉತ್ಸವದಲ್ಲಿ ರಣಧೀರ ಕಂಠೀರವ, ಶ್ರೀಕೃಷ್ಣದೇವರಾಯ, ದೇವರು ಕೊಟ್ಟ ತಂಗಿ, ಸ್ಕೂಲ್ ಮಾಸ್ಟರ್ ಅಲ್ಲದೆ ಕಲಾವತಿ ಸೇರಿದಂತೆ ಇನ್ನೂ ಹಲವಾರು ಎವರ್ ಗ್ರೀನ್ ಚಿತ್ರಗಳ ಹಾಡುಗಳಿಗೆ ನೃತ್ಯ ಲಾವಿದರು ಹೆಜ್ಜೆ ಹಾಕಲಿದ್ದಾರೆ.

ಹೆಸರಾಂತ ಕಲಾವಿದೆ ಮಾಳವಿಕಾ ಅವಿನಾಶ್ ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಲಕ್ಷ್ಮೀ ಬಾರಮ್ಮ ಖ್ಯಾತಿಯ ಕವಿತಾ, ಪ್ರತೀಕ್ಷಾ, ಮಾತಂಗಿ, ಪ್ರಸನ್ನ, ಸೇರಿದಂತೆ ಕನ್ನಡದ ಕಿರು/ಹಿರಿ ತೆರೆಯ ಹಲವಾರು ಕಲಾವಿದರು ಈ ಸಂಗೀತ ಸಂಜೆಗೆ ಸಾಕ್ಷಿಯಾಗಲಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದೀಕ್ಷಾ, ಡಾ. ಸಂಜಯ್ ಮತ್ತು ತಂಡದವರು ಕೂಡ ನೃತ್ಯ ಮಾಡಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
'House Full' Classical Dance Program is arranged on the occation of Dr Rajkumar birthday (24th April) annivarsary at Seva sadana, Malleshwaram, Bengaluru at 6 p.m. An event to celebrate 87th Birthday of Padmabhushan Dr.Rajkumar. Classical Dance Performances for old Kannada Movie Songs.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada