»   » ರಿಯಲ್ ಸ್ಟಾರ್ ಉಪೇಂದ್ರ ಬ್ರಹ್ಮ ಮೊದಲರ್ಧ ಹೇಗಿದೆ?

ರಿಯಲ್ ಸ್ಟಾರ್ ಉಪೇಂದ್ರ ಬ್ರಹ್ಮ ಮೊದಲರ್ಧ ಹೇಗಿದೆ?

By: ಉದಯರವಿ
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಅವರ ಕಾಂಬಿನೇಷನ್ ಚಿತ್ರ ಎಂದ ಮೇಲೆ ನಿರೀಕ್ಷೆಗಳು ಸಾಕಷ್ಟು ಇದ್ದವು. ಅದಕ್ಕೆ ತಕ್ಕಂತೆ ಚಿತ್ರ ಇದೆಯೇ ಇಲ್ಲವೇ ಎಂಬುದು ಮೊದಲರ್ಧದಲ್ಲೇ ನಿರ್ಧರಿಸಲು ಸಾಧ್ಯವಿಲ್ಲ. ಇಲ್ಲಿರುವುದು ಕೇವಲ ಅನಿಸಿಕೆ ಎಂಬುದು ಗಮನಕ್ಕಿರಲಿ.

1970 ರ ದಶಕದಿಂದ ಆರಂಭವಾಗುವ ಚಿತ್ರ ಮಲೇಷ್ಯಾದಿಂದ ಇಂಡಿಯಾಗೆ ಹಾಗೂ ಅಲ್ಲಿಂದಿಲ್ಲಿಗೆ ಇಲ್ಲಿಂದ ಅಲ್ಲಿಗೆ ಹರಿದಾಡುತ್ತಾ ಕುತೂಹಲ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮಲೇಷ್ಯಾದಲ್ಲಿ ಚಿತ್ರೀಕರಣಗೊಂಡಿರುವ ಎರಡು ಹಾಡುಗಳು ನೋಡಲು ಚೆನ್ನಾಗಿವೆ. ಕಣ್ಣಿಗೆ ಸೊಗಸು, ಕಿವಿಗೆ ಒಂಚೂರು ಇಂಪು.

How is Upendra movie Brahma first half?

ಸಯ್ಯಾಜಿ ಶಿಂಧೆ ಕನ್ನಡ ಅಷ್ಟಷ್ಟು ಮಾತ್ರವೆ. ರಂಗಾಯಣ ರಘು ಕಾಮಿಡಿ ಮೊದಲರ್ಧ ವರ್ಕ್ ಔಟ್ ಆಗಿದೆ. ಬ್ರಹ್ಮನ ಉದ್ದೇಶ ಏನು? ಅವನ್ಯಾರು ಎಂಬುದು ಗೊತ್ತಾಗಬೇಕಾದರೆ ಕೊನೆಯತನಕ ಕಾಯಲೇಬೇಕು.

ರಂಗಾಯಣ ರಘು ಅದೃಷ್ಟವಂತನಾಗಿ ಮೊದಲರ್ಧ ಕಾಮಿಡಿಯಿಂದ ತುಂಬಿ ತುಳುಕಿದೆ. ಮೊದಲರ್ಧ ನೋಡಿದ ಮೇಲೆ ಇದು ಚಂದ್ರು ಚಿತ್ರ ಅನ್ನಿಸುವುದಕ್ಕಿಂತ ಉಪ್ಪಿ ಚಿತ್ರ ಅನ್ನಿಸುತ್ತದೆ.

ಚಂದ್ರು ಅವರ ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಇಲ್ಲಿ ಅವರ ಮ್ಯಾಜಿಕ್ ಗಿಂತ ಉಪ್ಪಿ ಮ್ಯಾಜಿಕ್ ಹೆಚ್ಚಾಗಿ ಕಾಣುತ್ತದೆ. ಒಟ್ತಾರೆಯಾಗಿ ಚಂದೆಉ ಏನು ಹೇಳಲು ಹೊರಟಿದ್ದಾರೆ ಎಂಬುದು ಮಾತ್ರ ಕುತೂಹಲವಾಗಿದೆ.

English summary
Read opinion on Kannada movie Brahma. Real Star Upendra and Pranotha lead movie first half review. Director R Chandru maintains suspense in first half.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada