»   » ಮದ್ಯಪಾನ,ಸಿಗರೇಟು ಜಾಹೀರಾತಿಗೆ ವಿವೇಕ್ ಕೊಕ್

ಮದ್ಯಪಾನ,ಸಿಗರೇಟು ಜಾಹೀರಾತಿಗೆ ವಿವೇಕ್ ಕೊಕ್

Posted By:
Subscribe to Filmibeat Kannada
Vivek Oberoi
ಮದ್ಯಪಾನ, ತಂಬಾಕು ಸೇವನೆಗೆ ಪ್ರಚೋದನೆ ನೀಡುವ ಜಾಹೀರಾತನ್ನು ಎಂದು ನಟಿಸುವುದಿಲ್ಲ ಎಂದು ಬಾಲಿವುಡ್ ನಟ ವಿವೇಕ್ ಒಬೆರಾಯ್ ಹೇಳಿದ್ದಾರೆ. ಗ್ರಾಹಕರ ಸಮಾವೇಶದಲ್ಲಿ ಪಾಲ್ಗೊಂಡು ಗ್ರಾಹಕರು ಹಾಗೂ ಸಿನಿ ಸ್ಟಾರ್ ಗಳ ಜೋಡಣೆ ಬಗ್ಗೆ ಮಾತಾಡಿದ ಅವರು ಉತ್ಪನ್ನಗಳ ಮಾರಾಟಕ್ಕೆ ತಾರಾಮೌಲ್ಯ ಮುಖ್ಯವಾದರೂ, ಮಾರಾಟದ ವಸ್ತು ಅಷ್ಟೇ ಪ್ರಧಾನ ಪಾತ್ರವಹಿಸುತ್ತದೆ ಎಂದರು.

ಕಂಪನಿ ಚಿತ್ರದ ಮೂಲಕ ನನಗೆ ಬ್ರೇಕ್ ಸಿಕ್ಕಿತು. ಅದರಲ್ಲಿ ನೆಗಟಿವ್ ಪಾತ್ರ ನಿರ್ವಹಿಸಿದ್ದನಾದರೂ, ಮುಂದೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಸಹಾಯಕವಾಗುವ ಜಾಹೀರಾತಿನಲ್ಲಿ ಕಾಣಿಸಲಿಲ್ಲ.ಸ್ಟಾರ್ ಗಿರಿ ಶಾಶ್ವತವಲ್ಲ ಆದರೆ, ಜನರ ಮನಸ್ಸಿನಲ್ಲಿ ಒಬ್ಬ ಚಾಲ್ತಿಯಲ್ಲಿರುವ ನಟ ಹೇಳುವ ಮಾತುಗಳು, ಜಾಹೀರಾತಿನಲ್ಲಿ ಪ್ರಚಾರಕ್ಕಾಗಿ ಮಾಡುವ ಗಿಮಿಕ್ ಬಹುಕಾಲ ಉಳಿಯುತ್ತದೆ. ಆದ್ದರಿಂದ ನಾವು ಶುದ್ಧರಾಗಿ, ಜನರಿಗೂ ಶುದ್ಧತೆಯ ಬಗ್ಗೆ ಮಾತ್ರ ತಿಳಿಸುವುದು ಒಳ್ಳೆಯದು ಎಂದರು.

ಹೊಸನಗರದ ಶ್ರೀರಾಮಚಂದ್ರಾಪುರ ಮಠದ ಗೋಸಂರಕ್ಷಣಾ ಜಾಥದ ಪ್ರಮುಖ ಪ್ರಚಾಕರಲ್ಲಿ ಒಬ್ಬರಾದ ವಿವೇಕ್ ಒಬೆರಾಯ್, ಸುನಾಮಿ ಕಾಲದಲ್ಲೂ ಜನಸೇವೆ ಮಾಡಿ ಹೆಸರಾಗಿದ್ದರು. ಒಂದೆಡೆ ಕಿಂಗ್ ಖಾನ್ ಶಾರುಖ್ , ಸಾರ್ವಜನಿಕವಾಗಿ ಸಿಗರೇಟ್ ಸೇವಿಸಿ, ಕೇಂದ್ರ ಸಚಿವಾಲಯದ ಕೋಪಕ್ಕೆ ಗುರಿಯಾಗಿ, ಸುದ್ದಿಯಾಗಿದ್ದರು. ಆದರೆ, ಅದರಿಂದ, ಅವರ ಸಿಗರೇಟ್ ಸೇವನೆ ಏನೂ ಕಮ್ಮಿಯಾದಂತಿಲ್ಲ.

ಇನ್ನೊಂದೆಡೆ ವಿವೇಕ್ ಒಬೆರಾಯ್ ವಿವೇಕಯುಕ್ತ ಮಾತುಗಳನ್ನು ಆಡುವುದಷ್ಟೇ ಅಲ್ಲದೆ, ನುಡಿದಂತೆ ನಡೆವ ವಚನ ಪಾಲಿಸುವ ಪಣ ತಟ್ಟಿದ್ದಾರೆ. ಇದು ಬಾಲಿವುಡ್ ಸ್ಟಾರ್ ಗಳ ಭಿನ್ನರುಚಿಗೆ ಸೋದಾಹರಣೆ ಎನ್ನಬಹುದು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada