»   » ರಾಜಕೀಯಕ್ಕೆ ಬರಲ್ಲ, ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದ ಶಿವಣ್ಣ

ರಾಜಕೀಯಕ್ಕೆ ಬರಲ್ಲ, ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದ ಶಿವಣ್ಣ

Posted By: ದಾವಣಗೆರೆ ಪ್ರತಿನಿಧಿ
Subscribe to Filmibeat Kannada
ರಾಜಕೀಯಕ್ಕೆ ಬರಲ್ಲ, ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದ ಶಿವಣ್ಣ | Filmibeat Kannada

ಟಗರು ಚಿತ್ರದ 25ನೇ ದಿನದ ವಿಜಯೋತ್ಸವಕ್ಕೆ ದಾವಣಗೆರೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರೋಡ್ ಶೋ ನಡೆಸಿದರು. ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಅಶೋಕ ಚಿತ್ರಮಂದಿರದವರೆಗೂ ರೋಡ್ ಶೋ ನಡೆಸಿ, ಅಭಿಮಾನಿಗಳಿಗೆ ಖುಷಿಯಿಂದ ಕೈ ಬೀಸಿ ಸಂತಸ ವ್ಯಕ್ತಪಡಿಸಿದರು.

ತೆರೆದ ವಾಹನದಲ್ಲಿ ರೋಡ್ ಶೋ‌ ನಡೆಸುತ್ತಿರುವ ಮೆಚ್ಚಿನ ನಟನನ್ನು ನೋಡಲು ಬಂದ ನೂರಾರು ಅಭಿಮಾನಿಗಳನ್ನು ನಿಯಂತ್ರಿಸಲು ಪೋಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇನ್ನೂ ಅಶೋಕ ಚಿತ್ರಮಂದಿರದ ಮುಂಭಾಗ ಬರುತ್ತಿದ್ದಂತೆ ರೈಲ್ವೇ ಗೇಟ್ ಹಾಕಿದ್ದರಿಂದ ಸ್ವಲ್ಪ ಕಾಲ ಬಿಸಿಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ಹ್ಯಾಟ್ರಿಕ್ ಹೀರೋ ಗೆ ಎದುರಾಯಿತು.

I will not contest in elections clarified Kannada Actor Shiva Rajkumar

ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಶಿವರಾಜ್ ಕುಮಾರ್, ''ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಸಿನಿಮಾದಲ್ಲಿ ನಾನು ಶ್ರಮ ವಹಿಸುತ್ತಿದ್ದೇನೆ. ನನ್ನ ಪತ್ನಿ ಮಾತ್ರ ರಾಜಕೀಯಕ್ಕೆ ಹೋಗುತ್ತಾರೆ. ಇನ್ನು ಉಪೇಂದ್ರ ರವರ ರಾಜಕೀಯ ಎಂಟ್ರಿಗೆ ನಾನು ಸ್ವಾಗತ ಮಾಡುತ್ತೇನೆ. ನಾನು ಯಾವಾಗಲೂ ಅವರಿಗೆ ಸಪೋರ್ಟ್ ಮಾಡುತ್ತೇನೆ. ಉಪೇಂದ್ರ ಯಾವಾಗಲೂ ಒಂದು ಚೇಂಜ್ ತರುತ್ತಾರೆ'' ಎಂದರು.‌

ಶಿವಣ್ಣ ಜೊತೆಗೆ ನಟಿಸುವ ಶ್ರದ್ಧಾ ಕನವರಿಕೆ ಈಡೇರುತ್ತಾ.?

ಸಿನಿಮಾದಲ್ಲಿ ಅವಕಾಶ ಸಿಗಬೇಕು ಅಂದರೆ ನಟಿಯರು ಅಡ್ಜಸ್ಟ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಕನ್ನಡ ಚಿತ್ರರಂಗದಲ್ಲಿದೆ ಎಂಬ ಮಂಡ್ಯ ರಮೇಶ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಿವರಾಜ್ ಕುಮಾರ್, ''ಅವರು ಯಾಕೆ ಈ ರೀತಿ ಸ್ಟೇಟ್ ಮೆಂಟ್ ಕೊಟ್ಟಿದ್ದಾರೋ ಗೊತ್ತಿಲ್ಲ. ಚಿತ್ರರಂಗದಲ್ಲಿ ಇದುವರೆಗೂ ಈ ರೀತಿಯ ಘಟನೆ ನಡೆದಿಲ್ಲ'' ಅಂತ ಹೇಳಿದರು.

English summary
I will not contest in elections clarified Kannada Actor Shiva Rajkumar in Davanagere.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X