»   » ಚಾಲೆಂಜ್, ಈ ವಯ್ಯಾ ಯಾರೇಳಿ ನೊಡೋಣ?

ಚಾಲೆಂಜ್, ಈ ವಯ್ಯಾ ಯಾರೇಳಿ ನೊಡೋಣ?

By: ರವಿಕಿಶೋರ್
Subscribe to Filmibeat Kannada

ಈ ಫೋಟೋದಲ್ಲಿರುವ ವ್ಯಕ್ತಿ ಯಾರೆಂದು ನೀವು ಭೂತಗನ್ನಡಿ ಹಾಕಿ ನೋಡಿದರೂ ಸಾಧ್ಯವೇ ಇಲ್ಲ ಬಿಡಿ, ಯಾರಿರಬಹುದು ಎಂಬುದನ್ನು ನೀವು ಊಹಿಸುವುದೂ ಅಸಾಧ್ಯ. ಈ ವ್ಯಕ್ತಿ ಅವರೇ ಎಂದು ಗೊತ್ತಾದರೆ ನಿಮಗೆ ಇನ್ನೂ ಅಚ್ಚರಿಯಾಗುತ್ತದೆ!

'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ತಾವೊಬ್ಬ ಮಠಾಧಿಪತಿ ಎಂಬುದನ್ನೂ ಮರೆತು ಸೂಪರೋ ರಂಗ ಎಂದು ಡಾನ್ಸ್ ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು ಕಾಳಿ ಮಠದ ಋಷಿಕುಮಾರ ಸ್ವಾಮಿ, ಇದೀಗ ಅವರು ಇನ್ನೊಂದು ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ.

ಈ ಬಾರಿ ಅವರ ಅವತಾರ ಇನ್ನೂ ವಿಚಿತ್ರವಾಗಿದೆ. ರೆಸಾರ್ಟ್ ಒಂದರಲ್ಲಿ ಬಾಟಲಿ ಸಮೇತ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮತ್ತೆ ಹಲವರ ಕಣ್ಣು ಕುಕ್ಕಿದ್ದಾರೆ. ಆದರೆ ಕ್ಷಮಿಸಿ ಋಷಿಕುಮಾರ ಸ್ವಾಮೀಜಿ ಮಾಡುತ್ತಿರುವುದು ರಿಯಲ್ ಅಲ್ಲಾ ರೀಲ್ ಎಂಬುದು ನಿಮ್ಮ ಗಮನಕ್ಕಿರಲಿ.

ಈ ದಿಲ್ ಹೇಳಿದೆ ನೀ ಬೇಕಂತ

ಇಷ್ಟಕ್ಕೂ ಇದು ಯಾವ ಚಿತ್ರ ಎಂದರೆ 'ಈ ದಿಲ್ ಹೇಳಿದೆ ನೀ ಬೇಕಂತ'. ಈ ಚಿತ್ರದಲ್ಲಿ ಋಷಿಕುಮಾರ ಅವರದು ಲವ್ ಮಾಡ್ಬೇಡಿ, ಓಡೋಗ್ಬೇಡಿ ಎಂದು ಕುಡಿದು ಹಾಡುವ ಪಾತ್ರ.

ಋಷಿಕುಮಾರನಿಗೆ ಕಾಳಿ ಅಪ್ಪಣೆಯಾಗಿರಬೇಕು

ಕಾಳಿಯ ಅಪ್ಪಣೆ ಇಲ್ಲದೆ ತಾನೇನೂ ಮಾಡುವುದಿಲ್ಲ ಎಂದು ಹೇಳುತ್ತಿದ್ದ ಋಷಿಕುಮಾರನಿಗೆ ಬಹುಶಃ ಕಾಳಿ ಅನುಗ್ರಹವಾಗಿರಬೇಕು. ಅದಕ್ಕೇ ಮತ್ತೆ ಬಣ್ಣ ಹಚ್ಚಿದ್ದಾರೆ.

ಕುಡಿದು ಹಿತವಚನ ಹೇಳುವ ಪಾತ್ರ

ಚಿತ್ರದಲ್ಲಿ ಋಷಿಕುಮಾರ ಸ್ವಾಮಿಗಳದ್ದು ಅತಿಥಿ ಪಾತ್ರ. ರೆಸಾರ್ಟ್ ನಲ್ಲಿ ಕುಡಿದು ಡಾನ್ಸ್ ಮಾಡುತ್ತಾ ಪ್ರೇಮಿಗಳಿಗೆ ಹಿತವಚನ ಹೇಳುವ ಪಾತ್ರದಲ್ಲಿ ಅವರು ಕಾಣಿಸಲಿದ್ದಾರೆ. ಕುಂಬಳಗೋಡಿನ ರೆಸಾರ್ಟ್ ಒಂದರಲ್ಲಿ ಈ ಹಾಡನ್ನು ಚಿತ್ರೀಕರಿಸಿಕೊಳ್ಳಲಾಗಿದೆ.

ಚಿತ್ರದಲ್ಲಿ ಕಾಳಿ ಶ್ರೀಗಳು ಎಣ್ಣೆ ಸ್ಟೆಪ್

ಈ ಚಿತ್ರಕ್ಕೆ ಶ್ರೀನಿವಾಸ್ ಎಂಬುವವರು ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರದ ನಾಯಕ ನಟ ಮೂಡ್ ಔಟ್ ಆಗಿ ಕುಡಿಯಲು ತನ್ನ ಗೆಳೆಯನ ಜೊತೆ ಬಂದಾಗ, ಅಲ್ಲೇ ಕುಡಿಯುತ್ತಾ ಕುಳಿತಿರುವ ಋಷಿಕುಮಾರ ಪರಿಚಯವಾಗುತ್ತದೆ. ಆಗ ನಾಯಕ ನಟನನ್ನು ಸಮಾಧಾನಪಡಿಸಲು ಕಾಳಿಶ್ರೀಗಳು ಎಣ್ಣೆ ಸ್ಟೆಪ್ ಹಾಕುತ್ತಾರೆ.

ಕಾಳಿಶ್ರೀಗಳ ಡಾನ್ಸ್ ನೋಡಲು ಜೂನ್ ವರೆಗೂ ಕಾಯಬೇಕು

ಈ ಚಿತ್ರದಲ್ಲಿ ಅವಿನಾಶ್‌ ನರಸಿಂಹರಾಜು ಹಾಗೂ ಶ್ರೀಶ್ರುತಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಬಹುಶಃ ಚಿತ್ರ ಜೂನ್‌ನಲ್ಲಿ ತೆರೆಕಾಣಬಹುದು. ಸುರೇಶ್ ಮಂಗಳೂರು, ವಿದ್ಯಾ ಮೂರ್ತಿ, ನಾಗೇಂದ್ರ ಶಾ, ಕುಮುದಾ, ಮಿತ್ರ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ. ಈ ಚಿತ್ರಕ್ಕೆ ಸಂಗೀತ ಸತೀಶ್ ಆರ್ಯನ್ ಅವರದು.

English summary
Do you identify who is in the photo! Proclaimed godman Rishi kumar Swamya aka Kaali Swamy back to action, now he is playing a guest role in Sandalwood's forthcoming movie "Ee Dil Helidhe Ni Bekanthaa". He plays a role of drunkard in the song. Recently the song picturised in a resort near Kumbalgodu, Bangalore. A Movie from the Production House "Sai Krishna Enterprises".
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada