For Quick Alerts
  ALLOW NOTIFICATIONS  
  For Daily Alerts

  ಕೊರೊನಾ ವೈರಸ್ ಭೀತಿ: ಐಫಾ ಅವಾರ್ಡ್ಸ್ ಮುಂದಕ್ಕೆ

  |

  ಕೊರೊನಾ ಭೀತಿ ಎಲ್ಲೆಡೆ ಹರಡಿದೆ. ಕೊರೊನಾ ದಿಂದಾಗಿ ಬಾಲಿವುಡ್ ಸಹ ಬೆದರಿದ್ದು, ಕೆಲವು ಸಿನಿಮಾಗಳ ಚಿತ್ರೀಕರಣವೇ ಮುಂದೂಡಲ್ಪಟ್ಟಿದೆ.

  ಹೊಸ ಸುದ್ದಿಯೆಂದರೆ ಕೊರೊನಾ ವೈರಸ್ ಭೀತಿಯಿಂದಾಗಿ ಪ್ರತಿಷ್ಠಿತ ಐಫಾ ಅವಾರ್ಡ್ಸ್ ಕಾರ್ಯಕ್ರಮವನ್ನೇ ಮುಂದೂಡಲಾಗಿದೆ.

  21 ನೇ ಐಫಾ ಅವಾರ್ಡ್ಸ್ (ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮಂ ಅಕಾಡೆಮಿ ಆವಾರ್ಡ್ಸ್‌) ಕಾರ್ಯಕ್ರಮವು ಇದೇ ತಿಂಗಳಲ್ಲಿ ಭೂಪಾಲ್‌ನಲ್ಲಿ ಆಯೋಜಿಸಲಾಗಿತ್ತು. ಆದರೆ ಅದನ್ನು ಮುಂದೂಡಲಾಗಿದೆ.

  ಕೊರೊನಾ ವೈರಸ್ ಆತಂಕ ಎಲ್ಲೆಡೆ ಹರಡಿರುವ ಕಾರಣ, ಮಧ್ಯ ಪ್ರದೇಶ ಸರ್ಕಾರದ ಸಲಹೆ ಪಡೆದು ಐಫಾ ಅವಾರ್ಡ್ಸ್ ಕಾರ್ಯಕ್ರಮವನ್ನು ಮುಂದೂಡಲಾಗಿದೆ, ಕೆಲವೇ ದಿನಗಳಲ್ಲಿ ಹೊಸ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಆಯೋಜಕರು ಅಧಿಕೃತ ಹೇಳಿಕೆ ನೀಡಿದ್ದಾರೆ.

  ಕನ್ನಡ ಸೇರಿದಂತೆ, ಬಾಲಿವುಡ್, ಟಾಲಿವುಡ್, ಕಾಲಿವುಡ್‌ ಸಿನಿಮಾಗಳು ಕೊರೊನಾ ವೈರಸ್ ಭೀತಿಯಿಂದಾಗಿ ವಿದೇಶಿ ಚಿತ್ರೀಕರಣವನ್ನು ರದ್ದು ಮಾಡಿವೆ. ಕೊರೊನಾ ಕಾರಣದಿಂದಾಗಿ ಕೆಲವು ಚಿತ್ರಗಳ ಬಿಡುಗಡೆ ಸಹ ತಡವಾಗುತ್ತಿದೆ.

  ಭಾರತದಲ್ಲಿ ನಾಲ್ಕು ಕೊರೊನಾ ವೈರಸ್ ಪ್ರಕರಣಗಳು ಮಾತ್ರವೇ ಈವರೆಗೆ ಖಚಿತವಾಗಿವೆ. 20 ಕ್ಕೂ ಅಧಿಕ ಶಂಕಿತ ಪ್ರಕರಣಗಳನ್ನು ಗುರುತಿಸಲಾಗಿದೆಯಾದರೂ ಇವು ಖಚಿತಗೊಂಡಿಲ್ಲ.

  English summary
  IIFA awards function which scheduled to happen in Bhopal in March ending has been postponed due to Coronavirus scare.
  Friday, March 6, 2020, 17:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X