»   » ದಿಗಂತ್ ಜೊತೆ ಐಂದ್ರಿತಾ ಕಬಡ್ಡಿ ಆಟ ನೋಡಿ

ದಿಗಂತ್ ಜೊತೆ ಐಂದ್ರಿತಾ ಕಬಡ್ಡಿ ಆಟ ನೋಡಿ

Posted By:
Subscribe to Filmibeat Kannada

'ಟೋನಿ' ಮತ್ತು 'ಭಜರಂಗಿ' ಸಿನಿಮಾ ಆದ್ಮೇಲೆ ಸ್ಯಾಂಡಲ್ ವುಡ್ ನಲ್ಲಿ ನಟಿ ಐಂದ್ರಿತಾ ರೇ 'ಅತಿ ಅಪರೂಪ' ಆಗಿಬಿಟ್ಟಿದ್ದಾರೆ. ಬೆಂಗಾಲಿ ಚಿತ್ರವೊಂದರಲ್ಲಿ ನಟಿಸುತ್ತಿರುವ ಆಂಡಿ, ಒಂದು ವರ್ಷದಿಂದ ಗಾಂಧಿನಗರದ ಕಡೆ ತಲೆ ಕೂಡ ಹಾಕಿಲ್ಲ.

''ಕಳೆದೇ ಹೋದರಲ್ಲಾ ಆಂಡಿ'' ಅನ್ನುವಾಗಲೇ ಗರಮಾಗರಂ ಐಟಂ ಸಾಂಗ್ ಮೂಲಕ ಮರಳಿ ಕನ್ನಡಕ್ಕೆ 'ಕುಂಟೆಬಿಲ್ಲೆ' ಆಡುತ್ತಾ ಬಂದಿದ್ದಾರೆ ನಟಿ ಐಂದ್ರಿತಾ ರೇ. ಅದೂ ದೂದ್ ಪೇಡ ದಿಗಂತ್ ಜೊತೆ ಅನ್ನೋದು ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ.

ಒಂದ್ಕಾಲದಲ್ಲಿ ಪ್ರಣಯ ಪಕ್ಷಿಗಳಾಗಿದ್ದ ಈ ಜೋಡಿ, ಇದೀಗ ಲಾಂಗ್ ಗ್ಯಾಪ್ ನಂತ್ರ ಒಂದಾಗಿದ್ದಾರೆ ಅಂದ್ರೆ, ಇಬ್ಬರ ಕೆಮಿಸ್ಟ್ರಿ ಹೇಗಿರಬಹುದು? ಹೇಳಿ ಕೇಳಿ, ಇದು ಐಟಂ ಸಾಂಗ್. ಅಂದ್ಮೇಲೆ ಐಂದ್ರಿತಾ ಹೇಗೆ ಕಾಣ್ತಾರೆ ಅಂತ ಕುತೂಹಲ ಇದ್ದರೆ, 'ಶಾರ್ಪ್ ಶೂಟರ್' ಅಡ್ಡದಿಂದ ಬಂದಿರುವ ಲೇಟೆಸ್ಟ್ ಫೋಟೋಗಳನ್ನ ಕಣ್ತುಂಬಿಕೊಳ್ಳಿ...

ಸಖತ್ ಹಾಟ್ ಲುಕ್ ನಲ್ಲಿ ಐಂದ್ರಿತಾ

ಇಷ್ಟು ದಿನ ಐಂದ್ರಿತಾರನ್ನ ಮಿಸ್ ಮಾಡಿಕೊಂಡಿದ್ದ ಪಡ್ಡೆಗಳಿಗೆ 'ಶಾರ್ಪ್ ಶೂಟರ್' ಸಿನಿಮಾ ತಂಡ ಗುಡ್ ನ್ಯೂಸ್ ನೀಡಿದೆ. ಮಿರಿ ಮಿರಿ ಮಿಂಚುವ ಕೆಂಪು ಬಣ್ಣದ ಕಾಸ್ಟ್ಯೂಮ್ ನಲ್ಲಿ ಐಂದ್ರಿತಾ ಮಸ್ತ್ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಗರಮಾಗರಂ ಸ್ಟೆಪ್ಸ್ ಕೂಡ ಹಾಕಿದ್ದಾರೆ.

ಬಣ್ಣ-ಬಣ್ಣದ ಕಾಸ್ಟ್ಯೂಮ್ ನಲ್ಲಿ ಐಂದ್ರಿತಾ ಚಿತ್ತಾರ

ಧಮಾಕೇಧಾರ್ ಆಗಿ ಕಮ್ ಬ್ಯಾಕ್ ಮಾಡಿರುವ ಐಂದ್ರಿತಾ, 'ಶಾರ್ಪ್ ಶೂಟರ್' ಚಿತ್ರದ ಈ ಐಟಂ ಸಾಂಗ್ ನಲ್ಲಿ ತರಹೇವಾರಿ ಕಾಸ್ಟ್ಯೂಮ್ ನಲ್ಲಿ ಕಂಗೊಳಿಸಿದ್ದಾರೆ. ಹಾಡಿಗಾಗಿ ಹಾಕಲಾಗಿದ್ದ ಕಲರ್ ಫುಲ್ ಸೆಟ್ ನಲ್ಲಿ ಥೌಸೆಂಡ್ ವ್ಯಾಟ್ ಬಲ್ಬ್ ನಂತೆ ಮಿಂಚುತ್ತಿದದ್ದು ಆಂಡಿ ಮಾತ್ರ. ಹಾಗಂತ ಆಂಡಿ ಜೊತೆ ಸ್ಟೆಪ್ ಹಾಕಿದ ತುಂಡ್ಹೈಕ್ಳೇ ಬಾಯಿಬಿಟ್ಟಿದ್ದಾರೆ. [ದಿಗಂತ್ ಜೊತೆ ನಟಿ ಐಂದ್ರಿತಾ ರೇ ಐಟಂ ಡಾನ್ಸ್]

ದಿಗಂತ್ ಜೊತೆ ಆಂಡಿ ಮಸ್ತಿ

ದಿಗಂತ್ ಮತ್ತು ಐಂದ್ರಿತಾ ಕಾಂಬಿನೇಷನ್ 'ಮನಸಾರೆ' ಮತ್ತು 'ಪಾರಿಜಾತ' ಚಿತ್ರಗಳಲ್ಲಿ ಕ್ಲಿಕ್ ಆಗಿತ್ತು. ಇದೀಗ ಅದೇ ಜೋಡಿ 'ಶಾರ್ಪ್ ಶೂಟರ್' ಹಾಡಿಗಾಗಿ ಒಂದಾಗಿದೆ. ಇಬ್ಬರ ಕೆಮಿಸ್ಟ್ರಿಯ ಝಲಕ್ ಇಲ್ಲಿದೆ ನೋಡಿ. [ಐಂದ್ರಿತಾ ರೇ ಜೊತೆ ದಿಗಂತ್ ಎಂಗೇಜ್ ಮೆಂಟ್?]

ಇದು ನಿರ್ದೇಶಕ ಗೌಸ್ ಪೀರ್ ಪ್ಲಾನ್

'ಶಾರ್ಪ್ ಶೂಟರ್' ಚಿತ್ರದಲ್ಲಿ ಐಟಂ ಸಾಂಗ್ ಇರಲೇಬೇಕು ಅಂತ ಐಡಿಯಾ ಮಾಡಿದವರು ನಿರ್ದೇಶಕ ಗೌಸ್ ಪೀರ್. ಹಾಡಿಗೆ ಆಂಡಿ ಬೆಸ್ಟ್ ಅಂತ ನಿರ್ಧಾರವಾದ ಮೇಲೆ, ದಿಗಂತ್ ಮತ್ತು ಆಂಡಿ ಜೋಡಿ ಪ್ರೇಕ್ಷಕರಿಗೆ ಕಿಕ್ ಕೊಡುವ ಹಾಡನ್ನ ಖುದ್ದು ಗೌಸ್ ಪೀರ್ ಬರೆದಿದ್ದಾರೆ. ಹಾಡಿನ ಸಾಲುಗಳು ಹೀಗಿವೆ - ''ಕುಂಟೆಬಿಲ್ಲೆ ಆಡಿಕೊಂಡು ಇದ್ದೆ ನಾನು...ಕಬಡ್ಡಿ ಆಟ ಆಡೋ ಆಸೆ ತಂದೆ ನೀನು...''

ಹಾಡು ಕೇಳಿ ಒಪ್ಪಿಕೊಂಡರಂತೆ ಐಂದ್ರಿತಾ

ಸುದೀರ್ಘ ಸಮಯದ ನಂತ್ರ ಬರೀ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳುವುದು ಹೇಗೆ ಅಂತ ಮೊದಲು ಐಂದ್ರಿತಾ ಯೋಚಿಸಿದ್ದರಂತೆ. ಗೌಸ್ ಪೀರ್ ಮೊದಲು ಮಾತುಕತೆ ನಡೆಸಿದಾಗ, ಹಾಡು ಕೇಳಿ ಆಮೇಲೆ ಡಿಸೈಡ್ ಮಾಡ್ತೀನಿ ಅಂದಿದ್ದರಂತೆ. ಅದಕ್ಕೆ ತಕ್ಕ ಹಾಗೆ, ಟಪ್ಪಾಂಗುಚ್ಚಿ ಹಾಡನ್ನ ರೆಡಿ ಮಾಡಿದ ನಿರ್ದೇಶಕರು ಆಂಡಿ ಮುಂದೆ ಪ್ಲೇ ಮಾಡಿದ್ದೇ ತಡ, ಹಾಡು ಇಷ್ಟವಾಗಿ ಐಂದ್ರಿತಾ 'ಐಟಂ ಗರ್ಲ್' ಆಗುವುದಕ್ಕೆ ಒಪ್ಪಿಕೊಂಡರಂತೆ. [ಅತಿ ಅಪರೂಪದ ಐಂದ್ರಿತಾ 'ಪ್ರೇಮ್' ಗೀತೆ]

ಆಂಡಿ ಐಟಂ ಗರ್ಲ್ ಆಗಿರುವುದು ಇದೇ ಮೊದಲಲ್ಲ!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಕಡ್ಡಿಪುಡಿ' ಚಿತ್ರದಲ್ಲಿ ಐಂದ್ರಿತಾ ಒಂದು ಹಾಡಿಗೆ ಕುಣಿದುಕುಪ್ಪಳಿಸಿದ್ದರು. ಹಾಡಲ್ಲಿದ್ದ ಆಂಡಿ 'ಸೌಂದರ್ಯ ಸಮರ' ಪಡ್ಡೆಹುಡುಗರಿಗೆ ಹೇಗೆ ತಾನೆ ಮರೆಯೋಕೆ ಸಾಧ್ಯ?

ದಿಗ್ಗಿಗಾಗಿ ಈ ಸಾಂಗ್

ಒಂದ್ಕಡೆ ಹಾಡು ಇಷ್ಟವಾಗಿದ್ದರೆ, ಇನ್ನೊಂದ್ಕಡೆ ದಿಗಂತ್ ಆಪ್ತ ಗೆಳೆಯನಾಗಿರುವ ಕಾರಣ, ಐಂದ್ರಿತಾ ಈ ಹಾಡಿಗೆ ಗ್ರೀನ್ ಸಿಗ್ನಲ್ ಕೊಟ್ಟರಂತೆ. ಈಗಾಗಲೇ ಹಾಡಿನ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಸೆಟ್ ಗಾಗಿ 30 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ನೃತ್ಯ ನಿರ್ದೇಶಕ ಮುರುಳಿ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ದಿಗಂತ್ ಗೆ ಜೋಡಿಯಾಗಿ ಸಂಗೀತಾ ಚಿತ್ರದಲ್ಲಿ ಅಭಿನಯಸಿದ್ದಾರೆ.

English summary
Actress Aindrita Ray makes her comeback into Sandalwood with an Item Number in the movie 'Sharp Shooter'. Diganth and Sangeetha are playing lead role in the movie Directed by Gouse Peer.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada