Just In
Don't Miss!
- News
ಯಲ್ಲಾಪುರ ಭೂಕುಸಿತ: ಯುವತಿಯ ಮದುವೆ ಕನಸು "ಮಣ್ಣು'ಪಾಲು
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Automobiles
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫೋಟೋ ಆಲ್ಬಂ: ನಟಿ ಭಾವನಾ-ನವೀನ್ ಅದ್ಧೂರಿ ಆರತಕ್ಷತೆ

'ಜಾಕಿ', 'ರೋಮಿಯೋ', 'ವಿಷ್ಣುವರ್ಧನ', 'ಯಾರೇ ಕೂಗಾಡಲಿ', 'ಟೋಪಿವಾಲಾ' 'ಬಚ್ಚನ್' ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದ ಮಲಯಾಳಂ ನಟಿ ಭಾವನಾ ಇದೀಗ ಹೊಸ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಅದು ಕನ್ನಡ ಚಿತ್ರ ನಿರ್ಮಾಪಕ ನವೀನ್ ಜೊತೆಗೆ.!
ನಟಿ ಭಾವನಾ ಹಾಗೂ ನಿರ್ಮಾಪಕ ನವೀನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತ್ರಿಶೂರ್ ನಲ್ಲಿನ ದೇವಸ್ಥಾನದಲ್ಲಿ ನಿನ್ನೆ (ಜನವರಿ 22) ಭಾವನಾ-ನವೀನ್ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. ಬಳಿಕ ತ್ರಿಶೂರ್ ನಲ್ಲಿಯೇ ಇರುವ ನೆಹರು ಕನ್ವೆನ್ಷನ್ ಸೆಂಟರ್ ನಲ್ಲಿ ನವ ಜೋಡಿಯ ಆರತಕ್ಷತೆ ಕಾರ್ಯಕ್ರಮ ಜರುಗಿತು.
ಮಾಲಿವುಡ್ ಲೋಕದ ಗಣ್ಯಾತಿಗಣ್ಯರೇ ಭಾವನಾ-ನವೀನ್ ವಿವಾಹ ಆರತಕ್ಷತೆಗೆ ಸಾಕ್ಷಿ ಆದರು. ಬನ್ನಿ ಹಾಗಾದ್ರೆ, ಯಾರೆಲ್ಲ ನವೀನ್-ಭಾವನಾ ರಿಸೆಪ್ಷನ್ ನಲ್ಲಿ ಭಾಗವಹಿಸಿದ್ರು ಅಂತ ನೋಡ್ಕೊಂಡ್ ಬರೋಣ....

ಮಿರಿ ಮಿರಿ ಮಿಂಚಿದ ಭಾವನಾ
ಸ್ಪೆಷಲ್ ಆಗಿ ಡಿಸೈನ್ ಮಾಡಲಾದ ಗೋಲ್ಡನ್ ಬಣ್ಣದ ಲೆಹೆಂಗಾದಲ್ಲಿ ವಧು ಭಾವನಾ ಮಿರಿ ಮಿರಿ ಮಿಂಚಿದರು.
ಭಾವನಾ-ನವೀನ್ ಆರತಕ್ಷತೆಯ ಫೋಟೋ ಆಲ್ಬಂ ಇಲ್ಲಿದೆ

ಶುಭ ಹಾರೈಸಿದ ಮಮ್ಮೂಟಿ
ಮಾಲಿವುಡ್ ಲೋಕದ ಸೂಪರ್ ಸ್ಟಾರ್ ಮಮ್ಮೂಟಿ ಭಾವನಾ-ನವೀನ್ ಆರತಕ್ಷತೆಯಲ್ಲಿ ಭಾಗವಹಿಸಿ ನವ ವಧುವರರಿಗೆ ಶುಭ ಹಾರೈಸಿದರು.
ಭಾವನಾ-ನವೀನ್ ವಿವಾಹ ಮಹೋತ್ಸವದ ಚಿತ್ರಗಳು ಇಲ್ಲಿದೆ

ಇಂದ್ರಜಿತ್-ಪೂರ್ಣಿಮಾ ದಂಪತಿ
ಖ್ಯಾತ ನಟ ಇಂದ್ರಜಿತ್ ಹಾಗೂ ಪತ್ನಿ ಪೂರ್ಣಿಮಾ ಕೂಡ ಆರತಕ್ಷತೆಯಲ್ಲಿ ಭಾಗವಹಿಸಿ ಭಾವನಾ-ನವೀನ್ ಗೆ ಶುಭ ಕೋರಿದರು.
ಭಾವನಾ-ನವೀನ್ ಮೆಹಂದಿ ಕಾರ್ಯಕ್ರಮದ ಫೋಟೋಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

ಪೃಥ್ವಿರಾಜ್-ಸುಪ್ರಿಯಾ
ಭಾವನಾ ಜೊತೆಗೆ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದ ಪೃಥ್ವಿರಾಜ್ ಕೂಡ ತಮ್ಮ ಪತ್ನಿ ಸುಪ್ರಿಯಾ ಸಮೀತ ಆಗಮಿಸಿ ನವ ಜೋಡಿಗೆ ಶುಭಾಶಯ ತಿಳಿಸಿದರು.

ನಟಿ ಭಾಮಾ
ಕನ್ನಡದಲ್ಲಿಯೂ ಅಭಿನಯಿಸಿರುವ ನಟಿ ಭಾಮಾ ಕೂಡ ಭಾವನಾ-ನವೀನ್ ಆರತಕ್ಷತೆಗೆ ಸಾಕ್ಷಿ ಆದರು.