»   » ಭಾರತ ಸೆಮೀಸ್ ಗೆಲ್ಲುತ್ತಾ? ಏನಂತಾರೆ ಕನ್ನಡ ತಾರೆಯರು

ಭಾರತ ಸೆಮೀಸ್ ಗೆಲ್ಲುತ್ತಾ? ಏನಂತಾರೆ ಕನ್ನಡ ತಾರೆಯರು

Posted By:
Subscribe to Filmibeat Kannada

ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್ 2015 ಸೆಮಿಫೈನಲ್ ಹಂತದ ಕೊನೆಯ ಹಣಾಹಣಿಗೆ ಇನ್ನೊಂದೇ ದಿನ ಬಾಕಿ. ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನ ಎದುರಿಸುವುದಕ್ಕೆ ನಮ್ಮ ಟೀಮ್ ಇಂಡಿಯಾ ಸಜ್ಜಾಗಿದೆ.

ಆಸೀಸ್ ರನ್ನ ಬಗ್ಗುಬಡಿದು, ಭಾರತ ಫೈನಲ್ ತಲುಪಬೇಕು ಅನ್ನೋದು ಸಕಲ ಭಾರತೀಯರ ಆಸೆ. ಅದಕ್ಕೆ ದೇಶಾದ್ಯಂತ ಪೂಜೆ-ಪುನಸ್ಕಾರ ನಡೆಯುತ್ತಿದೆ. ನಾಳೆ ನಡೆಯುವ ಹೈವೋಲ್ಟೇಜ್ ಪಂದ್ಯದ ಮೇಲೆ ಇಡೀ ವಿಶ್ವ ಕಣ್ಣಿಟ್ಟಿದೆ.

ಆದ್ರೆ, ಸದಾ ಸಿನಿಮಾ, ಶೂಟಿಂಗ್ ಅನ್ನುತ್ತಲೇ ಬಿಜಿಯಾಗಿರುವ ನಮ್ಮ ಸ್ಯಾಂಡಲ್ ವುಡ್ ಮಂದಿಗೆ ಕ್ರಿಕೆಟ್ ಫೀವರ್ ಎಷ್ಟಿದೆ. ಸೆಮಿಫೈನಲ್ ಮ್ಯಾಚ್ ನೋಡುವುದಕ್ಕೆ ಯಾವ್ಯಾವ ತಾರೆಗಳು ತುದಿಗಾಲಲ್ಲಿ ನಿಂತಿದ್ದಾರೆ.?

ಭಾರತ ತಂಡಕ್ಕೆ ನಮ್ಮ ಸೆಲೆಬ್ರಿಟೀಸ್ ಚಿಯರ್ಸ್ ಹೇಗಿದೆ ಅಂತ ತಿಳಿದುಕೊಳ್ಳುವ ಸಲುವಾಗಿ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಕೆಲ ತಾರೆಯರನ್ನ ಸಂಪರ್ಕಿಸಿದಾಗ ಸಿಕ್ಕ ಪ್ರತಿಕ್ರಿಯೆಗಳು ಇಲ್ಲಿವೆ. ಈ ಸ್ಲೈಡ್ ಗಳಲ್ಲಿ ಓದಿ....

ರಾಗಿಣಿ

''ನಾನಂತೂ ಮ್ಯಾಚ್ ಗಾಗಿ ವೇಯ್ಟ್ ಮಾಡುತ್ತಿದ್ದೇನೆ. ಐ ಆಮ್ ಎಕ್ಸ್ ಟ್ರೀಮ್ಲಿ ಎಕ್ಸೈಟೆಡ್. ಇಂಡಿಯಾ v/s ಆಸ್ಟ್ರೇಲಿಯಾ ಮ್ಯಾಚ್ ಫೆಂಟಾಸ್ಟಿಕ್ ಆಗಿರುತ್ತೆ ಅನ್ನುವ ಭರವಸೆ ಇದೆ. ಆಸ್ಟ್ರೇಲಿಯಾನ ಇಂಡಿಯಾ ಕಿಲ್ ಮಾಡ್ಬೇಕು.'' [ಕ್ರಿಕೆಟ್ ಸಮರ ಎದುರಿಸಲು ಸಜ್ಜಾದ ಸಿನಿಮಾರಂಗ]

ರಾಧಿಕಾ ಪಂಡಿತ್

''ಇಂಡಿಯಾ ಸೆಮಿಫೈನಲ್ ಆಡುತ್ತಿರುವುದರಿಂದ ನಾನು ಎಂಟರ್ಟೇನಿಂಗ್ ಮ್ಯಾಚ್ ಎಕ್ಸ್ ಪೆಕ್ಟ್ ಮಾಡ್ತೀನಿ. ಎರಡು ತಂಡಗಳು ಬಲಿಷ್ಠವಾಗಿರುವ ಕಾರಣ ಮ್ಯಾಚ್ ಸೂಪರ್ ಎಕ್ಸೈಟಿಂಗ್ ಆಗಿರುತ್ತೆ. ಆದ್ರೆ, ಅದನ್ನ ನೋಡುವ ಭಾಗ್ಯ ನನಗಿಲ್ಲ. ಶೂಟಿಂಗ್ ಇದೆ. ಸ್ಕೋರ್ ನ ಟ್ರ್ಯಾಕ್ ಮಾಡ್ತಿರ್ಬೇಕು ಅಷ್ಟೇ''.

ಇಂದ್ರಜಿತ್ ಲಂಕೇಶ್

''ಡಿಫೆನಿಟ್ಲಿ ಇಂಡಿಯಾ ಆಡ್ತಿದೆ ಅಂದ್ರೆ ನಾನು ಮ್ಯಾಚ್ ನೋಡೇ ನೋಡ್ತೀನಿ. ನಾನು ಕೂಡ ಕ್ರಿಕೆಟರ್. ಕ್ರಿಕೆಟ್ ಆಡಿದ್ದೀನಿ. ಐ ಆಮ್ ಎ ಲವ್ವರ್ ಆಫ್ ಕ್ರಿಕೆಟ್. ಸೆಮಿಫೈನಲ್ ಅದ್ರಲ್ಲೂ ಇಂಡಿಯಾ ಆಡ್ತಿದೆ ಅಂದ್ರೆ ನನಗೆ ಎಕ್ಸೈಟ್ಮೆಂಟ್ ಜಾಸ್ತಿ. ನನ್ನ ಪ್ರೆಡಿಕ್ಷನ್ - ಯಾರು ಟಾಸ್ ಗೆಲ್ತಾರೋ, ಅವರೇ ಮ್ಯಾಚ್ ಗೆಲ್ತಾರೆ. ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಡಬೇಕು. ಯಾಕಂದ್ರೆ, ಇದು ಪ್ರೆಶರ್ ಗೇಮ್. ಮೊದಲು ಜಾಸ್ತಿ ರನ್ ಹೊಡೆದರೆ ಆಸ್ಟ್ರೇಲಿಯಾ ಮೇಲೆ ಪ್ರೆಶರ್ ಹಾಕಬಹುದು. ಒಳ್ಳೇ ಟೀಮ್ ಇದೆ. ಬ್ಯಾಟಿಂಗ್ ನಲ್ಲಿ ಸ್ಟ್ರಾಂಗ್ ಆದ್ರೆ ಡಿಫೆನಿಟ್ಲಿ ಇಂಡಿಯಾ ವಿಲ್ ವಿನ್''.

ಸಂಜನಾ ಗಲ್ರಾನಿ

''ಸೆಮಿಫೈನಲ್ ನಲ್ಲಿ ಗೆದ್ದು ಇಂಡಿಯಾ ಫೈನಲ್ ಗೆ ಹೋಗಲೇಬೇಕು. ಆಸ್ಟ್ರೇಲಿಯಾ ಕೂಡ ತುಂಬಾ ಸ್ಟ್ರಾಂಗ್ ಟೀಮ್. ನನ್ನ ಕಣ್ಣಿಗಂತೂ ಆಸ್ಟ್ರೇಲಿಯಾ ಟೀಮ್ Devils ತರಹ ಕಾಣ್ತಾರೆ. ನನಗೆ ಸ್ವಲ್ಪ ಭಯ ಇದೆ. ಇಂಡಿಯಾ ಗೆದ್ದರೆ ಸಾಕು. ಮ್ಯಾಚ್ ನೋಡೋಕೆ ಆಗಲ್ಲ. ನನಗೆ ಶೂಟಿಂಗ್ ಇದೆ. ನನ್ನ ಫೋನ್ ನಲ್ಲೇ ಲೈವ್ ಅಪ್ ಡೇಟ್ಸ್ ನೋಡ್ಕೋತೀನಿ. ನಾನಂತೂ ದಿನಾ ಪೂಜೆ ಮಾಡ್ತೀದ್ದೀನಿ. ''ದೇವರೆ ಇಂಡಿಯಾ ವರ್ಲ್ಡ್ ಕಪ್ ಗೆಲ್ಲಲ್ಲಿ'' ಅಂತ.''

ಚಂದ್ರಿಕಾ

''ನಾನು ಖಂಡಿತ ಮ್ಯಾಚ್ ನೋಡುತ್ತೇನೆ. ಫಸ್ಟ್ ಬಾಲ್ ನಿಂದಲೂ ಬಿಡದೆ ಮ್ಯಾಚ್ ನೋಡ್ತೀನಿ. ಇಂಡಿಯಾ ಚೆನ್ನಾಗಿ ಆಡಿ, ಆಸ್ಟ್ರೇಲಿಯಾಗೆ ಟಫ್ ಕಾಂಪಿಟೇಷನ್ ಕೊಡುತ್ತೆ ಅಂತ ಭಾವಿಸಿದ್ದೇನೆ. ಆಸ್ಟ್ರೇಲಿಯಾನ ಬೀಟ್ ಮಾಡಿ ಇಂಡಿಯಾ ಫೈನಲ್ ಗೆ ರೀಚ್ ಆಗ್ಬೇಕು. ಆಸ್ಟ್ರೇಲಿಯಾಗೆ ಅದು ಹೋಮ್ ಟೌನ್ ಆಗಿರುವ ಕಾರಣ, ಅವರಿಗೂ ಸಿಕ್ಕಾಪಟ್ಟೆ ಪ್ರೆಶರ್ ಇದೆ. ಸೋ, ನಾನು ಈ ಮೂಲಕ ಇಂಡಿಯಾಗೆ ಆಲ್ ದಿ ಬೆಸ್ಟ್ ವಿಶ್ ಮಾಡುತ್ತೇನೆ''.

ಶ್ವೇತಾ ಶ್ರೀವಾತ್ಸವ್

''ನಿಜ ಹೇಳ್ಬೇಕಂದ್ರೆ, ನಾನು ಕ್ರಿಕೆಟ್ ಮ್ಯಾಚ್ ನೋಡೋದೇ ಇಲ್ಲ. ನಮ್ಮನೆಯಲ್ಲಿ ಎಲ್ಲರೂ ನೋಡ್ತಾರೆ. ನಾನು ಸ್ಪೋರ್ಟ್ಸ್ ಪರ್ಸನ್ ಅಲ್ಲವೇ ಅಲ್ಲ. ಯಾವುದೇ ಆಟದ ಬಗ್ಗೆ ನನಗೆ ಇಂಟ್ರೆಸ್ಟ್ ಇಲ್ಲ. ಕ್ರಿಕೆಟ್ ಮ್ಯಾಚ್ ನನಗೆ ಅರ್ಥ ಆಗಲ್ಲ. ತುಂಬಾ ಬೋರಿಂಗ್ ಅನ್ಸುತ್ತೆ. ಒಂದು ಓವರ್ ನಲ್ಲಿ ಸುಮಾರು ಬಾರಿ ಆಕಳಿಸಿರುತ್ತೇನೆ. ಹೀಗಾಗಿ ನೋಡಿದರೂ ಏನಾಗ್ತಿದೆ ಅಂತ ಗೊತ್ತಾಗಲ್ಲ. ಬಟ್ ಏನೇ ಆಗಲಿ, ಇಂಡಿಯಾ ಗೆಲ್ಲಬೇಕು ಅಷ್ಟೇ. ವರ್ಲ್ಡ್ ಕಪ್ ವಿನ್ ಆದ್ರೆ ನಮಗೂ ಹೆಮ್ಮೆ''.

ತರುಣ್ ಸುಧೀರ್

''ಇಂಡಿಯಾ ಈ ಬಾರಿ ವರ್ಲ್ಡ್ ಕಪ್ ಎತ್ತಿಹಿಡಿಯುವುದನ್ನು ನಾನು ನೋಡಬೇಕು ಅನ್ನೋ ಆಸೆ ಇದೆ. ಕ್ವಾಟರ್ ಫೈನಲ್ ಮ್ಯಾಚ್ ಒಂದನ್ನ ನಾವು ಮಿಸ್ ಮಾಡಿಕೊಂಡಿದ್ವಿ. 'ರನ್ನ' ಶೂಟಿಂಗ್ ಗಾಗಿ Switzerland ಗೆ ಹೋಗಿದ್ದ ಕಾರಣ. ಅದು ಬಿಟ್ಟರೆ ಮಿಕ್ಕೆಲ್ಲಾ ಮ್ಯಾಚ್ ಗಳನ್ನ ನೋಡಿದ್ವಿ. ನಾವೆಲ್ಲಾ ಸುದೀಪ್ ಸರ್ ಮನೆಯಲ್ಲೇ ಒಟ್ಟಾಗಿ ಮ್ಯಾಚ್ ನೋಡೋದು. ನಾಳೆ ಮ್ಯಾಚ್ ಕೂಡ ನಾನು, ನಮ್ಮಣ್ಣ ಮತ್ತು ಫ್ರೆಂಡ್ಸ್ ಎಲ್ಲಾ ಸುದೀಪ್ ಸರ್ ಮನೆಯಲ್ಲೇ ಕೂತು ಇಂಡಿಯಾಗೆ ಚಿಯರ್ ಮಾಡ್ತೀವಿ. ಟೀಮ್ ಇಂಡಿಯಾ ಗೆದ್ದೇ ಗೆಲ್ಲುತ್ತೆ ಅನ್ನೋ ವಿಶ್ವಾಸ ಇದೆ''.

ನಿಕ್ಕಿ ಗಲ್ರಾನಿ

''ನಾನು ತುಂಬಾ ಎಕ್ಸೈಟ್ ಆಗಿದ್ದೀನಿ. ಆಸ್ಟ್ರೇಲಿಯಾ ತುಂಬಾ ಸ್ಟ್ರಾಂಗ್ ಟೀಮ್. ಆದ್ರೆ, ಆಸ್ಟ್ರೇಲಿಯಾನ ನಮ್ಮ ಟೀಮ್ ಇಂಡಿಯಾ ಬೀಟ್ ಮಾಡಲೇಬೇಕು. ವರ್ಲ್ಡ್ ಕಪ್ ಗೆಲ್ಲಬೇಕು. ಮ್ಯಾಚ್ ನೋಡೋಕೆ ಕಷ್ಟ. ಯಾಕಂದ್ರೆ, ಅವತ್ತು ನನಗೆ ಶೂಟಿಂಗ್ ಇದೆ. ಬಟ್ ಸ್ಕೋರ್ ಫಾಲೋಅಪ್ ನಲ್ಲಿರುತ್ತೇನೆ. ಇಂಡಿಯಾ ಫೈನಲ್ ಗೆ ಹೋಗಬೇಕು ಅಂತ ದೇವರಲ್ಲಿ ಕೇಳಿಕೊಳ್ಳುತ್ತೇನೆ.''

ಮೋಹನ್

''ಇಂಡಿಯಾ ಮ್ಯಾಚ್ ಗೆದ್ದೇ ಗೆಲ್ಲುತ್ತೆ ಅಂತ ನಾನು ಎಕ್ಸ್ ಪೆಕ್ಟ್ ಮಾಡ್ತೀನಿ. ಟಾಸ್ ಗೆದ್ದರೆ ನಮ್ಮವರು ಖಂಡಿತವಾಗಿ ಗೆಲ್ಲುತ್ತಾರೆ. ಚೇಸಿಂಗ್ ಹೋದರೆ ಸ್ವಲ್ಪ ಕಷ್ಟ. ಸ್ಕೋರ್ 300 ದಾಟಿದರೆ, ಕಷ್ಟ ಆಗಬಹುದು. ಇಲ್ಲಾಂದ್ರೆ, ಇಂಡಿಯಾ ಈಸ್ ಕೇಪಬಲ್ ಆಫ್ ಚೇಸಿಂಗ್. ಮುಂಚೆಯಿಂದಲೂ ನಾನು ಅಂದುಕೊಂಡಿದ್ದೆ, India v/s New Zealand ಫೈನಲ್ ಗೆ ಬರುತ್ತೆ ಅಂತ. ಹಾಗೇ ಆದರೆ ಖುಷಿ. ನಾನಂತೂ ಫಸ್ಟ್ ಬಾಲ್ ಇಂದ ಮ್ಯಾಚ್ ನೋಡ್ತೀನಿ. ಟಿವಿ ಬಿಟ್ಟು ಕೂತುಕೊಳ್ಳೋಕೆ ಮನಸ್ಸು ಬರಲ್ಲ. ನನ್ನ ಪ್ರಕಾರ ಇಂಡಿಯಾ ಸೆಮಿಫೈನಲ್ ಗೆದ್ದರೆ ಕಪ್ ಗೆದ್ದ ಹಾಗೆ. New Zealand ನ ಸೋಲಿಸೋಕೆ ಇಂಡಿಯಾ ಇಂದ ಮಾತ್ರ ಸಾಧ್ಯ. ಟಾಸ್ ಗೆದ್ದರೆ ಖಂಡಿತ ಮ್ಯಾಚ್ ಗೆಲ್ಲುತ್ತೀವಿ.'' [ಕ್ರಿಕೆಟ್ ಮುಗಿಯುವವರೆಗೆ ಬರಲ್ವಂತೆ 'ಮಳೆ ನಿಲ್ಲುವವರೆಗೆ']

ಸಿಂಧು ಲೋಕನಾಥ್

''ನಾನು ಕ್ರಿಕೆಟ್ ಮ್ಯಾಚ್ ನೋಡಲ್ಲ.''

ನಿಕಿಶಾ ಪಟೇಲ್

''ಇಂಡಿಯಾ ಸೆಮಿಫೈನಲ್ ಗೆಲ್ಲಲೇಬೇಕು. ಆಸ್ಟ್ರೇಲಿಯಾ ಬಿಗ್ ಚಾಲೆಂಜ್. ಅವರದ್ದು ಸ್ಟ್ರಾಂಗ್ ಟೀಮ್. ಆದ್ರೆ, ನಮ್ಮವರೂ ಕಡಿಮೆ ಏನಲ್ಲ. ಕಳೆದ ಎಲ್ಲಾ ಮ್ಯಾಚ್ ಗಳಲ್ಲೂ ಇಂಡಿಯಾ ಪರ್ಫಾಮೆನ್ಸ್ ಚೆನ್ನಾಗಿದೆ. ಇಲ್ಲೂ ಅದನ್ನೇ ಟೀಮ್ ಇಂಡಿಯಾ ಮುಂದುವರಿಸಬೇಕು. ಇಂಡಿಯಾ ಸೋತರೆ ನನಗೆ ತುಂಬಾ ಅಪ್ಸೆಟ್ ಆಗುತ್ತೆ. ನನಗೆ ಶೂಟಿಂಗ್ ಇರುವ ಕಾರಣ ಮ್ಯಾಚ್ ನೋಡೋಕೆ ಆಗಲ್ಲ. ಬಟ್ ಬ್ರೇಕ್ ಟೈಮ್ ನಲ್ಲಿ ಸ್ಕೋರ್ ನೋಡುತ್ತೇನೆ.''

ಮೇಘನಾ ರಾಜ್

''ಇಂಡಿಯಾ ಒಳ್ಳೆ ಫಾರ್ಮ್ ನಲ್ಲಿದೆ. ಗೆದ್ದೇ ಗೆಲ್ಲುತ್ತಾರೆ ಅನ್ನುವ ವಿಶ್ವಾಸ ಇದೆ. ಹೋಪ್ ಫಾರ್ ದಿ ಬೆಸ್ಟ್. ನನಗೆ ಮ್ಯಾಗಝೀನ್ ಕವರ್ ಶೂಟ್ ಇದೆ ನಾಳೆ. ಫ್ರೀ ಟೈಮ್ ನಲ್ಲಿ ಸ್ಟುಡಿಯೋದಲ್ಲಿ ಮ್ಯಾಚ್ ನೋಡುತ್ತೀನಿ''. [ಕ್ರಿಕೆಟ್ ವರ್ಲ್ಡ್ ಕಪ್ ಮುಗಿದ್ರೆ ಸಾಕು ಕನ್ನಡ ಸಿನಿಮಾ ಹಬ್ಬ]

ಕಾವ್ಯ ಶೆಟ್ಟಿ

''ನಾನು ಕ್ರಿಕೆಟ್ ನ ಫಾಲೋ ಮಾಡೋದೇ ಇಲ್ಲ.''

ಶೃತಿ ಹರಿಹರನ್

''ಫೈನಲ್ ಗೆ India v/s New Zealand ಬರೋದು ಪಕ್ಕಾ. ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾನ ಇಂಡಿಯಾ ಸೋಲಿಸೋದು ಗ್ಯಾರೆಂಟಿ. ಎಲ್ಲಾ ಭಾರತೀಯರ ಹಾರೈಕೆ ಟೀಮ್ ಇಂಡಿಯಾ ಮೇಲಿದೆ. ಮ್ಯಾಚ್ ನೋಡೋಕೆ ನಂಗೆ ತುಂಬಾ ಇಷ್ಟ ಆದ್ರೆ, ನನ್ನ ಮುಂದಿನ ಚಿತ್ರ 'ಗೋದಿ ಬಣ್ಣ ಸಾಧಾರಣ ಮೈಕಟ್ಟು ಶೂಟಿಂಗ್ ನಡೆಯುತ್ತಿದೆ. ಸೋ ಬಿಜಿ ಶೆಡ್ಯೂಲ್. ನೋಡೋಕೆ ಆಗಲ್ಲ.''

ಅಂಬರೀಷ್

''ಬರೀ ನಾಳೆ ಮ್ಯಾಚ್ ಅಲ್ಲ. ಫೈನಲ್ ಮ್ಯಾಚ್ ಕೂಡ ಭಾರತ ಗೆಲ್ಲುತ್ತೆ. ನಮ್ಮ ಇಂಡಿಯಾ ಟೀಮ್ ತುಂಬಾ ಸ್ಟ್ರಾಂಗ್ ಆಗಿದೆ. ಆಸ್ಟ್ರೇಲಿಯಾ ತಂಡವನ್ನ ಖಂಡಿತ ಸೋಲಿಸುತ್ತೆ. ಈ ಬಾರಿ ಕಪ್ ನಮ್ಮದೇ.''

English summary
Team India will be facing Australia in ICC World Cup Semi-Finals tomorrow (March 26th). All cricket fans are excited over the match. Similarly, our Sandalwood Celebrities too. Kannada Actors have shared their expectations on the Semis match with 'Fimibeat Kannada'. Here is how, the Actors and Actresses have cheered Team India.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X