twitter
    For Quick Alerts
    ALLOW NOTIFICATIONS  
    For Daily Alerts

    ಮಾದಕ ವಸ್ತು ಪ್ರಕರಣ: ಪೊಲೀಸರ ಮುಂದೆ ಹಾಜರಾದ ಇಂದ್ರಜಿತ್ ಲಂಕೇಶ್

    |

    ಚಂದನವನದ ನಟ-ನಟಿಯರಿಗೆ ಮಾದಕ ದ್ರವ್ಯದ ನಂಟಿದೆ ಎಂದು ಆರೋಪಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಸಿಸಿಬಿ ಕಚೇರಿಗೆ ಭೇಟಿ ನೀಡಿದರು.

    Recommended Video

    Drug Mafia 15 ಜನ ಹೀರೋ, ಹೀರೋಯಿನ್ ದಾಖಲೆಯನ್ನು ಸಾಕ್ಷಿ ಸಮೇತ ಪೋಲೀಸರ ಕೈಗೆ ಕೊಟ್ಟ ಇ,ಲಂಕೇಶ್ |

    'ಪೊಲೀಸರು ನನಗೆ ಸೂಕ್ತ ಭದ್ರತೆ ಒದಗಿಸುವುದಾದರೆ ಎಲ್ಲರ ಹೆಸರು ಹೇಳಲು ನಾನು ಸಿದ್ಧ' ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದರು. ಇಂದ್ರಜಿತ್ ಲಂಕೇಶ್‌ ಮಾಹಿತಿ ನೀಡುವುದಾದರೆ ನಾವು ರಕ್ಷಣೆ ನೀಡಲು ಬದ್ಧ ಎಂದು ಸಹ ಪೊಲೀಸರು ಹೇಳಿದ್ದರು.

    ಅಂತೆಯೇ ಇದೇ ವಿಷಯದ ಬಗ್ಗೆ ಸಿಸಿಬಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಸಿಸಿಬಿ ಪೊಲೀಸರು ಕಚೇರಿಗೆ ಹಾಜರಾಗಿ ಮಾಹಿತಿ ನೀಡುವಂತೆ ಇಂದ್ರಜಿತ್ ಲಂಕೇಶ್‌ ಗೆ ನೊಟೀಸ್ ಜಾರಿ ಮಾಡಿದ್ದರು. ಹಾಗಾಗಿ ಇಂದು ಇಂದ್ರಜಿತ್ ಲಂಕೇಶ್ ಸಿಸಿಬಿ ಕಚೇರಿಗೆ ಹಾಜರಾಗಿದ್ದಾರೆ.

    'ಹಲವು ಮಾದಕ ವ್ಯಸನಿಗಳು ಇದ್ದಾರೆ'

    'ಹಲವು ಮಾದಕ ವ್ಯಸನಿಗಳು ಇದ್ದಾರೆ'

    'ಸ್ಯಾಂಡಲ್‌ವುಡ್‌ನ ಹಲವು ನಟ-ನಟಿಯರು ಮಾದಕ ವ್ಯಸನಿಗಳಾಗಿದ್ದಾರೆ. ಡ್ರಗ್ ಮಾಫಿಯಾದ ಜೊತೆಗೆ ಹಲವರಿಗೆ ಸಂಬಂಧ ಸಹ ಇದೆ. ಸೂಕ್ತ ರಕ್ಷಣೆ ಒದಗಿಸುವ ಭರವಸೆ ನೀಡಿದರೆ ಪೊಲೀಸರಿಗೆ ಎಲ್ಲ ಮಾಹಿತಿ ನಾನು ನೀಡುತ್ತೇನೆ' ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದರು.

    ಚಿರಂಜೀವಿ ಸರ್ಜಾ ಸಾವಿನ ಬಗ್ಗೆ ಇಂದ್ರಜಿತ್ ಅನುಮಾನ

    ಚಿರಂಜೀವಿ ಸರ್ಜಾ ಸಾವಿನ ಬಗ್ಗೆ ಇಂದ್ರಜಿತ್ ಅನುಮಾನ

    ಚಿರಂಜೀವಿ ಸರ್ಜಾ ಸಾವಿನ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದ ಇಂದ್ರಜಿತ್ ಲಂಕೇಶ್, ಇತ್ತೀಚೆಗೆ ಒಬ್ಬ ಖ್ಯಾತ ಯುವ ನಟ ಅಚಾನಕ್ಕಾಗಿ ತೀರಿಕೊಂಡರು. ಅವರ ಮರಣೋತ್ತರ ಪರೀಕ್ಷೆಯನ್ನೇಕೆ ಮಾಡಿಸಲಿಲ್ಲ ಎಂದು ಇಂದ್ರಜಿತ್ ಲಂಕೇಶ್ ಪ್ರಶ್ನೆ ಮಾಡಿದ್ದರು. ಇದು ಸಹ ವಿವಾದ ಕೆರಳಿಸಿತ್ತು.

    ಇಂದ್ರಜಿತ್ ಲಂಕೇಶ್ ಹೇಳಿಕೆಗೆ ಭಾರಿ ವಿರೋದ

    ಇಂದ್ರಜಿತ್ ಲಂಕೇಶ್ ಹೇಳಿಕೆಗೆ ಭಾರಿ ವಿರೋದ

    ಇಂದ್ರಜಿತ್ ಲಂಕೇಶ್ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿತ್ತು. ರವಿ ಬೆಳಗೆರೆ, ಪ್ರಕಾಶ್ ಸಂಬರಗಿ, ರಾಕ್‌ಲೈನ್ ವೆಂಕಟೇಶ್, ಕೊಬ್ರಿ ಮಂಜು ಇನ್ನೂ ಹಲವರು ಇಂದ್ರಜಿತ್ ಲಂಕೇಶ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು.

    ಚಿತ್ರರಂಗಕ್ಕೆ ಡ್ರಗ್ ಮಾಫಿಯಾದ ನಂಟಿದೆಯೋ ಇಲ್ಲವೋ?

    ಚಿತ್ರರಂಗಕ್ಕೆ ಡ್ರಗ್ ಮಾಫಿಯಾದ ನಂಟಿದೆಯೋ ಇಲ್ಲವೋ?

    ಚಿತ್ರರಂಗಕ್ಕೆ ಡ್ರಗ್ ಮಾಫಿಯಾದ ನಂಟಿದೆ ಎಂಬ ವಿಷಯ ಹೊರಬಿದ್ದಾಗಿನಿಂದಲೂ ಚಿತ್ರರಂಗದಲ್ಲಿ ಭಿನ್ನ-ಭಿನ್ನ ಹೇಳಿಕೆಗಳು ಹೊರ ಬೀಳುತ್ತಿವೆ. ಕೆಲವರು ಚಿತ್ರರಂಗಕ್ಕೆ ಮಾದಕ ವಸ್ತುವಿನ ನಂಟಿಲ್ಲವೆಂದರೆ, ಚಿತ್ರರಂಗಕ್ಕೆ ಮಾದಕ ವಸ್ತುವಿನ ನಂಟು ಖಂಡಿತವಾಗಿಯೂ ಇದೆ ಎಂದು ವಾದಿಸುತ್ತಿದ್ದಾರೆ

    English summary
    Director Indrajit Lankesh arrives at CCB Bengaluru to give information about Drug mafia link to Sandalwood.
    Monday, August 31, 2020, 22:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X