For Quick Alerts
  ALLOW NOTIFICATIONS  
  For Daily Alerts

  'ಪೊಗರು' ಸಿನಿಮಾ ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ

  |

  ಧೃವ ಸರ್ಜಾ ನಟನೆಯ 'ಪೊಗರು' ಸಿನಿಮಾದ ನಿರ್ಮಾಪಕ ಬಿ.ಕೆ.ಗಂಗಾಧರ್ ಮನೆ ಹಾಗೂ ಕಚೇರಿ ಮೇಲೆ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

  Recommended Video

  ಒಟ್ಟಿಗೆ ಕಾಣಿಸಿಕೊಂಡ ಶಿವಣ್ಣ, ಸುದೀಪ್, ಸಿಂಪಲ್ ಸುನಿ | Filmibeat Kannada

  ಇಂದು (ಡಿಸೆಂಬರ್ 23) ರ ಸಂಜೆ ವೇಳೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗಂಗಾಧರ್ ಮನೆ ಮೇಲೆ ದಾಳಿ ನಡೆಸಿದ್ದು, ಮನೆ ಮಾತ್ರವಲ್ಲದೆ ಅವರ ಗಾಂಧಿ ನಗರದ ಕಚೇರಿ ಮೇಲೆ ಸಹ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

  ವಾಣಿಜ್ಯ ತೆರಿಗೆ ಇಲಾಖೆ ಎಸಿ ಹಾಗೂ ಓರ್ವ ಮಹಿಳಾ ಅಧಿಕಾರಿ ಸೇರಿ ನಾಲ್ವರು ಅಧಿಕಾರಿಗಳಿಂದ‌ ದಾಳಿ. ಈ ಅಧಿಕಾರಿಗಳು ಕೋರಮಂಗಲದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯ ಅಧಿಕಾರಿಗಳು ಎನ್ನಲಾಗಿದೆ.

  ಗಂಗಾಧರ್ ಅವರು ಆದಾಯ ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಅನುಮಾನದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದೆ. ದಾಳಿ ವೇಳೆ ಕೆಲವು ದಾಖಲಾತಿಗಳನ್ನು ವಶ ಪಡಿಸಿಕೊಂಡಿದ್ದಾರೆ ಅಧಿಕಾರಿಗಳು.

  ಧೃವ ಸರ್ಜಾ ನಟನೆಯ 'ಪೊಗರು' ಸಿನಿಮಾವನ್ನು ಗಂಗಾಧರ್ ನಿರ್ಮಿಸಿದ್ದಾರೆ. ಸಿನಿಮಾಕ್ಕೆ ವಿದೇಶಿ ನಟರನ್ನು ಕರೆತಂದು, ಅದ್ಧೂರಿ ಸೆಟ್‌ಗಳನ್ನು ಹಾಕಿ ರಿಚ್ ಆಗಿಯೇ ಸಿನಿಮಾದ ಚಿತ್ರೀಕರಣವನ್ನು ಮಾಡಲಾಗಿದೆ.

  ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕರಲ್ಲಿ ಒಬ್ಬರು ಬಿ.ಕೆ.ಗಂಗಾಧರ್. ಇವರು ಪೊಗರು' ಗೆ ಮುನ್ನಾಅಧ್ಯಕ್ಷ' ಹಾಗೂ ಇನ್ನೂ ಕೆಲವು ಚಿತ್ರಗಳನ್ನು ನಿರ್ಮಿಸಿದ್ದಾರೆ.

  ನಂದಕಿಶೋರ್ ನಿರ್ದೇಶಿಸಿರುವ 'ಪೊಗರು' ಸಿನಿಮಾದಲ್ಲಿ ಧೃವ ಸರ್ಜಾ ಜೊತೆಗೆ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಧನಂಜಯ್, ರಾಘವೇಂದ್ರ ರಾಜ್‌ಕುಮಾರ್, ರವಿಶಂಕರ್ ಇನ್ನೂ ಹಲವು ಪ್ರಮುಖ ನಟರು ಸಿನಿಮಾದಲ್ಲಿದ್ದಾರೆ.

  ಪೊಗರು ಸಿನಿಮಾವು ಲಾಕ್‌ಡೌನ್ ಕಾರಣದಿಂದಾಗಿ ಬಿಡುಗಡೆ ತಡವಾಗಿದೆ. ಜನವರಿ ತಿಂಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವ ಯೋಚನೆಯಲ್ಲಿ ತಂಡ ಇತ್ತು. ಇದೇ ಸಂದರ್ಭದಲ್ಲಿ ನಿರ್ಮಾಪಕರ ಮೇಲೆ ಐಟಿ ರೇಡ್ ಆಗಿದೆ.

  English summary
  IT raid on Pogaru movie producer BK Gangadhar. Dhruva Sarja and Rashmika Mandanna were in the Pogaru movie.
  Wednesday, December 23, 2020, 19:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X