For Quick Alerts
  ALLOW NOTIFICATIONS  
  For Daily Alerts

  ಹುಚ್ಚ ವೆಂಕಟ್‌ ಮೇಲೆ ಹಲ್ಲೆ ಮಾಡಿದ ಯುವಕರಿಗೆ ಜಗ್ಗೇಶ್ ಪ್ರಶ್ನೆ

  |

  ಹುಚ್ಚ ವೆಂಕಟ್‌ ಶ್ರೀರಂಗಪಟ್ಟಣದಲ್ಲಿ ಪುಂಡಾಟ ನಡೆಸಿ ಹಲ್ಲೆಗೊಳಗಾಗಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಘಟನೆ ನಡೆದಿದೆ.

  Recommended Video

  ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡ ದುನಿಯಾ ವಿಜಯ್ | Duniya vijay | Huccha Venkat

  ಹುಚ್ಚ ವೆಂಕಟ್‌ ಮೇಲೆ ಕೆಲವು ಯುವಕರು ಹಲ್ಲೆ ಮಾಡಿರುವ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ಹುಚ್ಚ ವೆಂಕಟ್‌ಗೆ ಹಿಗ್ಗಾ-ಮುಗ್ಗಾ ಥಳಿಸಿದ ಜನಹುಚ್ಚ ವೆಂಕಟ್‌ಗೆ ಹಿಗ್ಗಾ-ಮುಗ್ಗಾ ಥಳಿಸಿದ ಜನ

  ಕೆಲವು ದಿನಗಳಿಂದ ಶ್ರೀರಂಗಪಟ್ಟಣದಲ್ಲಿರುವ ಹುಚ್ಚ ವೆಂಕಟ್‌ ಅಲ್ಲಿ ತಮ್ಮ ಹುಚ್ಚಾಟ ನಡೆಸಿದ್ದು, ಜನರ ಮೇಲೆ ದರ್ಪ ತೋರಿ ಒದೆ ತಿಂದಿದ್ದಾರೆ. ಬಹುತೇಕ ಮಾನಸಿಕ ಅಸ್ವಸ್ಥ ಆಗಿರುವ ಹುಚ್ಚಾ ವೆಂಕಟ್‌ ಮೇಲೆ ಯುವಕರು ಮಾಡಿರುವ ಹಲ್ಲೆಯನ್ನು ಹಿರಿಯ ನಟ ಜಗ್ಗೇಶ್ ಖಂಡಿಸಿದ್ದಾರೆ.

  ಸೆಲ್ಫಿ ಪ್ರಚಾರಕ್ಕೆ ನಡವಳಿಕೆ ಸರಿಯೇ?

  ಸೆಲ್ಫಿ ಪ್ರಚಾರಕ್ಕೆ ನಡವಳಿಕೆ ಸರಿಯೇ?

  ತುಂಬ ದುಃಖವಾಯಿತು, ಸೆಲ್ಫಿ ಪ್ರಚಾರಕ್ಕೆ ಈ ನಡವಳಿಕೆ ಎಷ್ಟುಸರಿ? ಇಡಿ ಕರ್ನಾಟಕಕ್ಕೆ ಗೊತ್ತಿದೆ ವೆಂಕಟ್ ವಿಚಿತ್ರ ಖಾಯಿಲೆ ಇಂದ ಬಳಲುತ್ತಿರುವ ಒಬ್ಬ ಮನೋರೋಗಿ ಎಂದು. ಸಾಧ್ಯವಾದರೆ ಆತನಿಗೆ ಸಹಾಯಮಾಡಿ, ಆಗದಿದ್ದರೆ ಪೊಲೀಸರನ್ನು ಕರೆಸಿ ಹೀಗೆ ಮೃಗೀಯವಾಗಿ ಕೈಮಾಡಿ ವೀಡಿಯೊ ತೆಗೆದು ಜಾಲತಾಣಕ್ಕೆ ಹಾಕಿ ಆನಂದಿಸದಿರಿ, ಇದು ಬುದ್ದಿ ಇರುವ ಮನುಜರ ಲಕ್ಷಣವಲ್ಲಾ ಎಂದು ಟ್ವೀಟ್ ಮಾಡಿದ್ದಾರೆ ಜಗ್ಗೇಶ್.

  ಹಲ್ಲೆ ಮಾಡಿದ ಯುವರಿಗೆ ಜಗ್ಗೇಶ್ ಪ್ರಶ್ನೆ

  ಹಲ್ಲೆ ಮಾಡಿದ ಯುವರಿಗೆ ಜಗ್ಗೇಶ್ ಪ್ರಶ್ನೆ

  ಕೈಮಾಡಿದ ಹುಡುಗರಿಗೆ ನನ್ನ ಪ್ರಶ್ನೆ? ನಿಮ್ಮ ಮನೆಯಲ್ಲಿ ಒಬ್ಬ ಅಣ್ಣನೋ ತಮ್ಮನೋ, ತಂದೆಯೋ , ವೆಂಕಟ್ ರೀತಿ ಮಾನಸಿಕ ರೋಗಿ ಇದ್ದು ಯಾರಾದರು ಅವನ ಮೇಲೆ ಕೈಮಾಡಿದರೆ ನಿಮಗೆ ನೋವಾಗದೇ ಇರದೆ? ಎಂದು ಪ್ರಶ್ನೆ ಮಾಡಿರುವ ಜಗ್ಗೇಶ್, ನನಗೂ ಒಬ್ಬ ಜಗವರಿಯದ ದೇವರಮಗ ತಮ್ಮನಿದ್ದಾನೆ ಅವನ ಮಗುವಂತೆ 55ವರ್ಷದಿಂದ ಸಾಕುತ್ತಿದ್ದೇವೆ. ವೆಂಕಟ್ ಬಂಧುಗಳೆ ಹೃದಯವಿದ್ದರೆ ಅವನಿಗೆ ಸ್ವಾರ್ಥಬಿಟ್ಟು ಸಹಾಯಮಡಿ ಎಂದು ಮನವಿ ಮಾಡಿದ್ದಾರೆ ಜಗ್ಗೇಶ್.

  ಶ್ರೀರಂಗಪಟ್ಟಣದಲ್ಲಿ ಕಣ್ಣಿರು ಹಾಕುತ್ತಾ ಸಹಾಯಕ್ಕಾಗಿ ಅಂಗಲಾಚಿದ ಹುಚ್ಚ ವೆಂಕಟ್ಶ್ರೀರಂಗಪಟ್ಟಣದಲ್ಲಿ ಕಣ್ಣಿರು ಹಾಕುತ್ತಾ ಸಹಾಯಕ್ಕಾಗಿ ಅಂಗಲಾಚಿದ ಹುಚ್ಚ ವೆಂಕಟ್

  ನಟ ಬದುಕಿದ್ದಾಗಲೇ ಆತನ ಕೈ ಹಿಡಿಯಿರಿ: ಜಗ್ಗೇಶ್

  ನಟ ಬದುಕಿದ್ದಾಗಲೇ ಆತನ ಕೈ ಹಿಡಿಯಿರಿ: ಜಗ್ಗೇಶ್

  ಒಬ್ಬ ನಟ ಸತ್ತಾಗ ಮರುಗದಿರಿ, ಬದುಕಿದ್ದಾಗ ಅವನ ಕೈಹಿಡಿದು ಸಹಾಯಮಾಡಿ, ಮಾಧ್ಯಮಮಿತ್ರರೇ, ದಯಮಾಡಿ ಬದುಕಿರುವ ಕಲಾವಿದನ ಪರವಾಗಿ ನಿಂತು ಸಹಾಯಮಾಡುವ ಎಂದು ನಿಮ್ಮಲ್ಲಿ ವಿನಂತಿಮಾಡುವೆ. ಜೊತೆಗೆ ಮಾನಸಿಕ ಅಸ್ವಸ್ಥ ಮನುಷ್ಯನ ಮೇಲೆ ಕೈಮಾಡುವ ಘಟನೆಗಳನ್ನು ಕೊನೆ ಮಾಡುವ ಎಂದು ಮನವಿ ಮಾಡಿದ್ದಾರೆ.

  ರಚಿತಾ ರಾಮ್, ಪ್ರೇಮ್ ಗೆ ಪುಕ್ಕಟೆ ಸಲಹೆ: ಹುಚ್ಚ ವೆಂಕಟ್ ಗೆ ನೆಟ್ಟಿಗರ ಛೀಮಾರಿ.!ರಚಿತಾ ರಾಮ್, ಪ್ರೇಮ್ ಗೆ ಪುಕ್ಕಟೆ ಸಲಹೆ: ಹುಚ್ಚ ವೆಂಕಟ್ ಗೆ ನೆಟ್ಟಿಗರ ಛೀಮಾರಿ.!

  ಹುಚ್ಚ ವೆಂಕಟ್ ಅನ್ನು ಹಣಕ್ಕಾಗಿ ಬಳಸಿ ಬಿಸಾಡಿದರು

  ಹುಚ್ಚ ವೆಂಕಟ್ ಅನ್ನು ಹಣಕ್ಕಾಗಿ ಬಳಸಿ ಬಿಸಾಡಿದರು

  ಹುಚ್ಚ ವೆಂಕಟ್ ಅನ್ನು ಟಿಆರ್‌ಪಿಗಾಗಿ ಬಳಸಿಕೊಂಡ ಚಾನೆಲ್‌ಗಳನ್ನು ತರಾಟೆಗೆ ತೆಗೆದುಕೊಂಡಿರುವ ಜಗ್ಗೇಶ್, ಹಣ ಮಾಡಲೆಂದು ಆತನನ್ನು ಶೋಗಳಿಗೆ ತೆಗೆದುಕೊಂಡು ಬಳಸಿ ಬಿಸಾಡಿದರು ಎಂದು ಅಸಹನೆ ವ್ಯಕ್ತಪಡಿಸಿದ್ದಾರೆ. ತಾವು ಹುಚ್ಚ ವೆಂಕಟ್ ಅನ್ನು 2017 ರಲ್ಲಿ ಒಮ್ಮೆ ಮಾತ್ರವೇ ಭೇಟಿ ಆಗಿರುವುದಾಗಿ ಹೇಳಿದ್ದಾರೆ.

  ಮತ್ತೆ ಸುದ್ದಿಗೆ ಬಂದ ಹುಚ್ಚಾ ವೆಂಕಟ್: ಈ ಬಾರಿ ಮಾಡಿದ್ದಾರೆ ಒಳ್ಳೆ ಕೆಲಸಮತ್ತೆ ಸುದ್ದಿಗೆ ಬಂದ ಹುಚ್ಚಾ ವೆಂಕಟ್: ಈ ಬಾರಿ ಮಾಡಿದ್ದಾರೆ ಒಳ್ಳೆ ಕೆಲಸ

  English summary
  Actor Jaggesh request to help mentally unlabeled actor Huccha Venkat. He express unhappy over what happened to Huccha Venkat in Srirangapatna.
  Friday, June 19, 2020, 16:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X