»   » ಜಯಮಾಲಾ ಮಗಳು ಸಿನಿಮಾದಿಂದ ದೂರವಿದ್ದಿದ್ದು ಯಾಕೆ

ಜಯಮಾಲಾ ಮಗಳು ಸಿನಿಮಾದಿಂದ ದೂರವಿದ್ದಿದ್ದು ಯಾಕೆ

Posted By:
Subscribe to Filmibeat Kannada
Jayamala daughter entry into cinema field
ನಟಿ ಜಯಮಾಲಾ ತಾವೇ ಒಬ್ಬ ಜನಪ್ರಿಯ ನಟಿಯಾಗಿದ್ದರೂ ತಮ್ಮ ಪುತ್ರಿ ಸೌಂದರ್ಯಾಳನ್ನು ಮಾತ್ರ ಬಣ್ಣದ ಜಗತ್ತಿನಿಂದ ದೂರವಿಡಲು ಪ್ರಯತ್ನಿಸಿದ್ದಾರೆ? ಹೌದು ಎನ್ನುತ್ತಾರೆ ಸ್ವತಃ ಜಯಮಾಲಾ. ಅದೇಕೋ ಅವರಿಗೆ ತಮ್ಮಂತೆ ತನ್ನ ಮಗಳು ಚಿತ್ರರಂಗ ಪ್ರವೇಶ ಮಾಡುವುದು ಇಷ್ಟವಿಲ್ಲವಂತೆ.

ಜಯಮಾಲಾ ಮಗಳು ಸೌಂದರ್ಯ ಗಾಡ್ ಫಾದರ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾಳೆ. ಇದೇ ಶುಕ್ರವಾರ (ಜು 27) ಉಪೇಂದ್ರ ತ್ರಿಪಾತ್ರದಲ್ಲಿ ನಟಿಸುತ್ತಿರುವ ತಮಿಳು ರಿಮೇಕ್ ಚಿತ್ರವಾಗಿರುವ ಗಾಡ್ ಫಾದರ್ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಹಾಗೆ ನೋಡಿದರೆ ಜಯಮಾಲಾ ಮಗಳ ಬೆಳ್ಳಿತೆರೆ ಪ್ರವೇಶ ಈಗಲ್ಲ. ತನ್ನ ಮಗಳ ಸಿನಿಮಾ ಎಂಟ್ರಿ ಬಗ್ಗೆ ಮಾತನಾಡುತ್ತಾ ಗಿರಿಕನ್ಯೆ ಹೇಳುವುದಿಷ್ಟು, ಬಹಳ ಹಿಂದೆಯೇ ನನ್ನ ಮಗಳು ಸಿನಿಮಾಗೆ ಪ್ರವೇಶವಾಗಬೇಕಿತ್ತು.

ಅವಳಿಗೆ ಹದಿನಾರು ವರ್ಷವಾಗಿದ್ದಾಗಲೇ ಚಿತ್ರರಂಗದ ಅನೇಕರು ಅವಳನ್ನ ನಾಯಕಿಯಾಗಿ ಹಾಕಿಕೊಂಡು ಸಿನಿಮಾ ಮಾಡಲು ಮುಂದೆ ಬಂದಿದ್ದರು. ಆದರೆ ನಾನೇ ಆರು ವರ್ಷಗಳಿಂದಲೂ ಸುಳ್ಳು ಹೇಳಿಕೊಂಡು ಬಂದೆ.

ಅವಳ ಓದಿಗೆ ತೊಂದರೆಯಾಗುತ್ತದೆ ಅಂತಲೋ ಅವಳಿಗೆ ನಟನೆ ಬಗ್ಗೆ ಆಸಕ್ತಿ ಇಲ್ಲ ಎಂತಲೋ ಒಂದಲ್ಲ ಒಂದು ಸಬೂಬು ಹೇಳಿಕೊಂಡು ಬಂದೆ. ಆದರೆ ಆಮೇಲೆ ಆಮೇಲೆ ಅದು ಸಾಧ್ಯವಾಗಲೇ ಇಲ್ಲ.

ಈಗ ಮಗಳ ರಂಗಪ್ರವೇಶ ಗಾಡ್ ಫಾದರ್ ಮೂಲಕ ನೆರವೇರಿದೆ. ಚಿತ್ರರಂಗದಲ್ಲಿ ಈಗ ಸಾಕಷ್ಟು ಬದಲಾವಣೆಯಾಗಿದೆ. ಕಲಾವಿದರಿಗೆ ಸಾಕಷ್ಟು ಗೌರವ ಮರ್ಯಾದೆ ದೊರಕುತ್ತಿದೆ. ನನ್ನ ಮಗಳೂ ಈಗ ತನಗೆ ಏನು ಬೇಕೆನಿಸುತ್ತದೋ ಅದನ್ನು ಮಾಡುವಷ್ಟು ಪ್ರಬುದ್ದಳಾಗಿದ್ದಾಳೆ. ಹಾಗಾಗಿ ಅವಳ ಮೇಲೆ ಇನ್ನು ನಿರ್ಬಂಧ ಹೇರುವುದು ಸರಿಯಲ್ಲ ಅಂತ ನಾನೇ ನಿರ್ಧರಿಸಿದೆ.

ಅವಳು ಐಎಎಸ್ ಅಧಿಕಾರಿಣಿಯಾಗಬೇಕೆಂದು ನನ್ನ ಕನಸಾಗಿತ್ತು. ಆದರೆ ಅವಳ ಆಯ್ಕೆ ನಟನೆಯಾಗಿತ್ತು. ನಾನದಕ್ಕೆ ಅಡ್ಡಿ ಮಾಡಲಿಲ್ಲ. ಈಗ ಗಾಡ್ ಫಾದರ್ ನೋಡಿದ ಪ್ರೇಕ್ಷಕ ಅವಳ ಭವಿಷ್ಯ ನಿರ್ಧರಿಸಲಿದ್ದಾಳೆ.

ಹಾಗಂತ ಆಕೆ ನಟಿಯಾದ ಬಗ್ಗೆ ನನಗೇನೂ ಬೇಸರವಿಲ್ಲ. ಎಷ್ಟೇ ಆದರೂ ನನ್ನ ಮಗಳಲ್ಲವೇ. ನನ್ನನ್ನ ದಶಕಗಳ ಕಾಲ ಪೊರೆದ, ಹಣ, ಹೆಸರು ಜನಪ್ರಿಯತೆ ಆರಾಧನೆ ಸಿಕ್ಕುವಂತೆ ನೋಡ್ಕೊಂಡ ಕ್ಷೇತ್ರವಿದು. ನನಗೂ ಮಗಳ ಆಯ್ಕೆಯ ಬಗ್ಗೆ ನಿಧಾನವಾಗಿ ಪ್ರೀತಿ ಮೊಳೆಯುತ್ತಿದೆ ಎನ್ನುತ್ತಾರೆ ಜಯಮಾಲಾ.

ಬಣ್ಣದಲೋಕಕ್ಕೆ ಪಾದಾರ್ಪಣೆ ಮಾಡುತ್ತಿರುವ ಸೌಂದರ್ಯಾಗೆ ಯಶಸ್ಸು ಸಿಗಲಿ, ಶಬರಿಮಲೆ ಅಯ್ಯಪ್ಪನ ಶ್ರೀರಕ್ಷೆ ಇರಲಿ ಎನ್ನುವುದು ನಮ್ಮೆಲ್ಲರ ಆಶಯ (ಒನ್ ಇಂಡಿಯಾ ಕನ್ನಡ)

English summary
Actress Jayamala was not interested her daughter Soundarya's entry into cinema field. Soundarya's debut film as heroine against Real Star Upendra releasing on this Friday (July 27).
Please Wait while comments are loading...