For Quick Alerts
  ALLOW NOTIFICATIONS  
  For Daily Alerts

  ಸಂಗೀತ ಕ್ಷೇತ್ರದಲ್ಲಿ ಮೆರೆಯಲಿದ್ದಾರೆ 'ಜೋಶ್' ಕನ್ನಡಿಗ ವಿರಾಜ್

  By ಫಿಲ್ಮಿಬೀಟ್ ಡೆಸ್ಕ್
  |

  ಡೈಲಿಹಂಟ್‌ನ ಕಿರು ವಿಡಿಯೋ ಅಪ್ಲಿಕೇಶನ್ 'ಜೋಶ್' ಅತ್ಯುತ್ತಮ ಕಂಟೆಂಟ್‌ಗಳ ಮೂಲಕ ವಿವಿಧ ಭಾಷೆಯ ಲಕ್ಷಾಂತರ ಬಳಕೆದಾರರ ಮನ ಗೆದ್ದಿದೆ. ಕಂಟೆಂಟ್ ಕ್ರಿಯೇಷನ್‌ನಿಂದ ಹಿಡಿದು, ಫನ್ ಚಾಲೆಂಜ್‌ಗಳಲ್ಲಿ ಭಾಗವಹಿಸುವುದು ಇನ್ನಿತರೆ ಹಲವು ಮನೊರಂಜನೆಗಳನ್ನು ಪ್ರತಿದಿನವೂ ಒದಗಿಸುತ್ತದೆ 'ಜೋಶ್'.

  ಈ ಸ್ವದೇಶಿ ಅಪ್ಲಿಕೇಶನ್, ಪ್ರತಿಭಾವಂತರಿಗೆ ಅತ್ಯುತ್ತಮ ವೇದಿಕೆ ಎಂಬುದನ್ನು ಈಗಾಗಲೇ ನಿರೂಪಿಸಿಕೊಂಡಿದೆ. ಕನಸು ಹೊಂದಿದ ಹಲವು ಪ್ರತಿಭಾವಂತರು ಜೋಶ್ ಮೂಲಕ ತಮ್ಮ ಕನಸು ಈಡೇರಿಸಿಕೊಂಡಿದ್ದಾರೆ. ಕನಸು ನನಸು ಮಾಡಿಕೊಳ್ಳುವ ಹಾದಿಯಲ್ಲಿದ್ದಾರೆ. ಅತ್ಯಂತ ಕಡಿಮೆ ಸಮಯದಲ್ಲಿ 'ಜೋಶ್' ಹಲವು ಅತ್ಯುತ್ತನ್ನತ ಸ್ಥಾನಗಳಲ್ಲಿ ಗುರುತಿಸಿಕೊಂಡಿದೆ.

  'ಜೋಶ್‌'ನಿಂದ ಬೆಳಕಿಗೆ ಬಂದ ಪ್ರತಿಭೆಗಳ ಬಗ್ಗೆ ಮಾತನಾಡುವಾಗ ಕನ್ನಡ ಕಂಟೆಂಟ್ ಕ್ರಿಯೇಟರ್ ವಿರಾಜ್ ಕನ್ನಡಿಗ ಅವರನ್ನು ಮರೆಯುವಂತೆಯೇ ಇಲ್ಲ. ಸಂಗೀತ ನಿರ್ದೇಶಕ, ಹಾಡುಗಾರ, ಚಿತ್ರಸಾಹಿತಿ ಆಗಿರುವ ವಿರಾಜ್ ನರ-ನರದಲ್ಲೂ ಹರಿಯುತ್ತಿರುವುದು ಸಂಗೀತವೇ.

  ಜಕ್ಕೂರಿನ ಮಧ್ಯಮವರ್ಗದ ಕುಟುಂಬದಿಂದ ಬಂದ ವಿರಾಜ್ ಮೊದಲಿಗೆ ಜನಪ್ರಿಯಗೊಂಡಿದ್ದು ಅವರ 'ಜೂಸ್ ಕುಡಿತೀಯ' ಹಾಡಿನ ಮೂಲಕ. ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಯ್ತು. 2012 ರಿಂದಲೂ ಹಲವು ಹಾಡುಗಳನ್ನು ವಿರಾಜ್ ಬಿಡುಗಡೆ ಮಾಡುತ್ತಲೇ ಬಂದಿದ್ದಾರೆ. 'ಫುಲ್ ಫೀಲಿಂಗ್ಸು', 'ಲೋಕಲ್ ಬಾಯ್ಸ್ ಪಾರ್ಟಿ', 'ಜೂಸ್ ಕುಡಿತೀಯ' ಹಾಡುಗಳು ದೊಡ್ಡ ಮಟ್ಟದ ಜನಾಕರ್ಷಣೆ ಪಡೆದುಕೊಂಡಿವೆ. ಯೂಟ್ಯೂಬ್‌ನಲ್ಲಿ ಸಾಕಷ್ಟು ವೀವ್ಸ್ ಸಹ ಗಳಿಸಿಕೊಂಡಿವೆ.

  Josh Kannada Creator Viraj Kannadiga Set To Take Music Industry By Storm

  ವಿರಾಜ್ ಕೆಲವು ಕನ್ನಡ ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಪಿಆರ್‌ಕೆ ಫಿಲಮ್ಸ್‌ ನಿರ್ಮಾಣ ಮಾಡಿರುವ 'ಫ್ಯಾಮಿಲಿ ಪ್ಯಾಕ್' ಸಿನಿಮಾಕ್ಕೆ ವಿರಾಜ್ ಸಂಗೀತ ನೀಡಿದ್ದಾರೆ. ಜೊತೆಗೆ 'ಆಮ್ಲೆಟ್' ಹೆಸರಿನ ಸಿನಿಮಾಕ್ಕೂ ಸಂಗೀತ ನೀಡಿದ್ದಾರೆ. ಬಿಗ್‌ಬಾಸ್‌ನ ದಿವ್ಯಾ ಸುರೇಶ್ ನಟಿಸಿರುವ 'ಪುಂಗಿ ಡ್ಯಾನ್ಸ್' ವಿಡಿಯೋ ಹಾಡು ಸಹ ಇವರದ್ದೇ. ಇಂಥಹಾ ಅದ್ಭುತ ಪ್ರತಿಭಾವಂತರನ್ನು ತನ್ನ ಫ್ಲ್ಯಾಟ್‌ಫಾರ್ಮ್‌ನಲ್ಲಿ ಹೊಂದಿರುವುದಕ್ಕೆ 'ಜೋಶ್‌'ಗೆ ಬಹಳ ಹೆಮ್ಮೆಯಿದೆ.

  ವಿರಾಜ್‌ರ ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

  ವಿರಾಜ್ ನಿಧಾನಕ್ಕೆ ಸ್ಟಾರ್‌ಡಮ್ ಕಡೆಗೆ ಹೆಜ್ಜೆ ಹಾಕುತ್ತಿದ್ದು, 'ಜೋಶ್' ಅಪ್ಲಿಕೇಶನ್‌ ಜೊತೆಗೆ ಅವರ ಪಯಣ, ಸಂಗೀತ ಪ್ರೇಮಿಗಳಿಗೆ ಅತ್ಯುತ್ತಮ ಅನುಭವವನ್ನು ಮುಂದಿನ ದಿನಗಳಲ್ಲಿ ತಂದೊಡ್ಡಲಿದೆ.

  English summary
  Josh Kannada creator Viraj Kannadiga set to take music industry by storm. He is well known independent music creator in Kannada.
  Monday, June 13, 2022, 19:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X