For Quick Alerts
  ALLOW NOTIFICATIONS  
  For Daily Alerts

  ಅದ್ಧೂರಿ ಸೆಟ್‌ನಲ್ಲಿ ಐದನೇ ಹಂತದ ಚಿತ್ರೀಕರಣ ಆರಂಭಿಸಲಿರುವ 'ಕಬ್ಜ'

  |

  ಉಪೇಂದ್ರ ನಟಿಸಿ, ಆರ್ ಚಂದ್ರು ನಿರ್ದೇಶನ ಮಾಡುತ್ತಿರುವ ಅದ್ಧೂರಿ, ಬಹುನಿರೀಕ್ಷಿತ ಸಿನಿಮಾ 'ಕಬ್ಜ'ದ ಐದನೇ ಹಂತದ ಚಿತ್ರೀಕರಣ ಅಕ್ಟೋಬರ್ 04ರಿಂದ ಆರಂಭವಾಗುತ್ತಿದೆ.

  ಸಿನಿದ ಚಿತ್ರೀಕರಣಕ್ಕಾಗಿ ಮಿನರ್ವಾ ಮಿಲ್‌ನಲ್ಲಿ ಅದ್ಧೂರಿಯಾಗಿ ಸೆಟ್ ಹಾಕಲಾಗಿದ್ದು ರಿಯಲ್ ಸ್ಟಾರ್ ಉಪೇಂದ್ರ, ಬಾಲಿವುಡ್ ನಟ ನವಾಬ್ ಶಾ ಸೇರಿದಂತೆ ಹಲವು ಖ್ಯಾತ ನಟರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

  ಚಿತ್ರೀಕರಣಕ್ಕಾಗಿ ಕೆ.ಜಿ.ಎಫ್ ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್ ಅವರ ನೇತೃತ್ವದಲ್ಲಿ ಸುಮಾರು ಒಂದು ತಿಂಗಳಿನಿಂದ ಮಿನರ್ವ ಮಿಲ್ ನಲ್ಲಿ ಅದ್ದೂರಿಯಾಗಿ ಸೆಟ್ ನಿರ್ಮಾಣವಾಗಿದೆ. ಇದೇ ಸೆಟ್ ನಲ್ಲಿ ಸುಮಾರು 42ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ರಿಯಲ್ ಸ್ಟಾರ್ ಉಪೇಂದ್ರ , ಬಾಲಿವುಡ್ ನಟ ನವಾಬ್ ಶಾ ಸೇರಿದಂತೆ ಅನೇಕ ಹೆಸರಾಂತ ಕಲಾವಿದರು ಈ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಈ ಹಂತದ ಚಿತ್ರೀಕರಣ ಮುಗಿದರೆ, ಬಹುತೇಕ ಚಿತ್ರೀಕರಣ ಮುಗಿದಂತೆ. ಕೊನೆಯ ಹಂತದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯಲಿದೆ.

  ನಿರ್ದೇಶಕ ಆರ್.ಚಂದ್ರು ನಿರ್ದೇಶಿಸುತ್ತಿರುವ ಈ ಪ್ಯಾನ್ ಇಂಡಿಯಾ ಕಿಚ್ಚ‌ ಸುದೀಪ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ ಇದು ಅಭಿಮಾನಿಗಳ ಕಾತುರವನ್ನು ಇನ್ನಷ್ಟು ಹೆಚ್ಚಿಸಿದೆ. ಚಿತ್ರ ಬಿಡುಗಡೆಗೆ ಕರ್ನಾಟಕವಷ್ಟೇ ಅಲ್ಲದೇ ಇತರ ರಾಜ್ಯಗಳಲ್ಲೂ ತುದಿಗಾಲಿನಲ್ಲಿ ಕಾದಿದ್ದಾರೆ. ಸಿನಿಮಾವು ಕನ್ನಡ ಸೇರಿದಂತೆ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿದೆ.

  'ಕಬ್ಜ' ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಕತೆಯನ್ನು ಫೈನ್ ಟ್ಯೂನ್ ಮಾಡಿಕೊಟ್ಟಿರುವುದು 'ಬಾಹುಬಲಿ'ಗೆ ಕತೆ ಬರೆದಿರುವ ವಿಜಯೇಂದ್ರ ಪ್ರಸಾದ್, ಇವರು ನಿರ್ದೇಶಕ ರಾಜಮೌಳಿಯವರ ತಂದೆ.

  ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್ ಚಂದ್ರು ಅವರೆ ನಿರ್ಮಿಸುತ್ತಿರುವ ಕಬ್ಜ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ.. ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ.. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್,ವಿಜಯ್, ಪೀಟರ್ ಹೆನ್ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ಕಿಚ್ಚ ಸುದೀಪ್, ಕಾಮರಾಜನ್(ಐ ಮೂವಿ ಖ್ಯಾತಿ), ಜಗಪತಿ ಬಾಬು, ರಾಹುಲ್ ಜಗತಪ್,ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವಾಬ್ ಶಾ, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರಿದ್ದಾರೆ.

  'ಕಬ್ಜ' ಜೊತೆಗೆ ಹಲವು ಸಿನಿಮಾಗಳಲ್ಲಿ ಉಪೇಂದ್ರ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಉಪೇಂದ್ರ ನಟಿಸಿರುವ ತೆಲುಗು ಸಿನಿಮಾ 'ಗನಿ' ಬಿಡುಗಡೆಗೆ ತಯಾರಾಗಿದೆ. ಕನ್ನಡದ 'ಲಗಾಮ್' ಸಿನಿಮಾದಲ್ಲಿ ಉಪೇಂದ್ರ ನಟಿಸಿದ್ದು ಅದರ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಸಿನಿಮಾದಲ್ಲಿ ಹರಿಪ್ರಿಯ ನಾಯಕಿಯಾಗಿ ನಟಿಸಿದ್ದಾರೆ. ಓಂ ಪ್ರಕಾಶ್ ರಾವ್ ನಿರ್ದೇಶನದ 'ತ್ರಿಶೂಲಂ', ಎಂ ಜಯರಾಮ್ ನಿರ್ದೇಶನದ 'ಬುದ್ಧಿವಂತ 2', 'ಹೋಮ್ ಮಿನಿಸ್ಟರ್', 'ನಾಗಾರ್ಜುನ' ಸಿನಿಮಾಗಳಲ್ಲಿಯೂ ಉಪೇಂದ್ರ ತೊಡಗಿಸಿಕೊಂಡಿದ್ದಾರೆ. ಇವುಗಳ ಜೊತೆಗೆ ತಮ್ಮದೇ ನಿರ್ದೇಶನದ ಸಿನಿಮಾವನ್ನು ಸಹ ಉಪೇಂದ್ರ ಘೋಷಿಸಿದ್ದು, ಕೆಲವು ದಿನಗಳ ಹಿಂದಷ್ಟೆ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದರು. ಬಹಳ ಭಿನ್ನವಾದ ಹೆಸರನ್ನು ಉಪೇಂದ್ರ ತಮ್ಮ ಸಿನಿಮಾಕ್ಕೆ ಇಟ್ಟಿದ್ದಾರೆ.

  English summary
  Kabza movie's fifth shcedule shooting will start from October 05 in Minarva Mill. A big set has been built by KGF fame art director Shiva Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X