»   » ವಿಜಯ್ ನಟನೆಯ 'ಕನಕ'ನಿಗೆ ಮಹಾರಾಷ್ಟ್ರದ ಎಮ್ಮೆಗಳು

ವಿಜಯ್ ನಟನೆಯ 'ಕನಕ'ನಿಗೆ ಮಹಾರಾಷ್ಟ್ರದ ಎಮ್ಮೆಗಳು

Written By:
Subscribe to Filmibeat Kannada

ದುನಿಯಾ ವಿಜಯ್ ಮತ್ತು ಆರ್.ಚಂದ್ರು ಕಾಂಬಿನೇಷನ್‌ ನಲ್ಲಿ 'ಕನಕ' ಅಣ್ಣಾವ್ರ ಅಭಿಮಾನಿ ಚಿತ್ರ ಮೊದಲ ಚಿತ್ರವಾಗಿ ನಿರ್ಮಾಣವಾಗುತ್ತಿದೆ. 'ಮಾಸ್ತಿ ಗುಡಿ' ಚಿತ್ರೀಕರಣದ ವೇಳೆ ಸಂಭವಿಸಿದ ದುರ್ಘಟನೆಯಿಂದ ಇಬ್ಬರು ನಟರು ಸಾವನಪ್ಪಿದ ಕಾರಣ ದುನಿಯಾ ವಿಜಯ್ ಯಾವುದೇ ಚಿತ್ರಗಳಲ್ಲಿ ನಟಿಸದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೂಚಿಸಿತ್ತು.[ಅಣ್ಣಾವ್ರ ಅಭಿಮಾನಿ 'ಕನಕ' ಸಾಂಗ್ ರೆಕಾರ್ಡಿಂಗ್ ಆರಂಭ]

kanaka

ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ವಿಜಯ್‌ ರವರು ಚಿತ್ರದಲ್ಲಿ ನಟಿಸಲು ಅನುಮತಿ ನೀಡಿದ್ದು, ಈ ವಿಷಯ ತಿಳಿದ ಆರ್‌.ಚಂದ್ರು ವಿಜಯ್ ನಟನೆಯ 'ಕನಕ' ಚಿತ್ರೀಕರಣ ಮುಂದುವರೆಸಿದ್ದಾರೆ.

ಕನಕ ಚಿತ್ರತಂಡ ಈಗ ಕನಕದಾಸರ ಹುಟ್ಟಿದ ಭಾಗದ ಚಿತ್ರೀಕರಣ ಮಾಡುತ್ತಿದ್ದು, ಇದರ ಚಿತ್ರೀಕರಣಕ್ಕಾಗಿ ಮಹಾರಾಷ್ಟ್ರದಿಂದ ಲಾರಿಗಳಲ್ಲಿ ಎಮ್ಮೆಗಳನ್ನು ಬೆಂಗಳೂರಿಗೆ ತರಿಸುತ್ತಿದೆಯಂತೆ. ಅಸಲಿ ಸಿನಿಮಾ ಸಂತ ಕನಕದಾಸರ ಬಗ್ಗೆ ಅಲ್ಲವಾದರೂ ಸಹ, ಅವರಿಗೆ ಗೌರವ ಸಲ್ಲಿಸಲು ಮುಂದಾಗಿರುವುದಾಗಿ ಆರ್.ಚಂದ್ರು ಹೇಳಿದ್ದಾರೆ.[ಆರ್ ಚಂದ್ರು ಚಿತ್ರದಲ್ಲಿ 'ರಾಜ್ ಕುಮಾರ್ ಫ್ಯಾನ್' ಯಾರು ಗೊತ್ತಾ?]

kanaka 2

'ಕನಕ' ಚಿತ್ರಕ್ಕೆ ನವೀನ್ ಸಜ್ಜು ಸಂಗೀತ ನೀಡಲಿದ್ದು, ಸತ್ಯ ಹೆಗಡೆ ಛಾಯಾಗ್ರಹಣವಿದೆ. ಮುಂದಿನ ವಾರದ ಒಳಗೆ ಚಿತ್ರಕ್ಕೆ ನಾಯಕ ನಟಿ ಆಯ್ಕೆ ಅಂತಿಮಗೊಳ್ಳಲಿದೆ ಎಂದು ಆರ್.ಚಂದ್ರು ಹೇಳಿದ್ದಾರೆ.

English summary
Karnataka film chamber yesterday gave permission to Vijay to act in movie. R.Chandru directorial 'Kanaka' shooting started again.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada