For Quick Alerts
  ALLOW NOTIFICATIONS  
  For Daily Alerts

  ಆರ್ ಚಂದ್ರು ಚಿತ್ರದಲ್ಲಿ 'ರಾಜ್ ಕುಮಾರ್ ಫ್ಯಾನ್' ಯಾರು ಗೊತ್ತಾ?

  By Bharath Kumar
  |

  ಸ್ಟಾರ್ ನಿರ್ದೇಶಕ ಆರ್ ಚಂದ್ರು, 'ಡಾ.ರಾಜ್ ಕುಮಾರ್ ಅಭಿಮಾನಿ' ಕುರಿತು ಒಂದು ಹೊಸ ಸಿನಿಮಾ ಮಾಡಲಿದ್ದಾರೆ, ಈ ಚಿತ್ರದಲ್ಲಿ ಕನ್ನಡದ ಸ್ಟಾರ್ ನಟನೊಬ್ಬ 'ಡಾ.ರಾಜ್ ಅಭಿಮಾನಿ'ಯಾಗಿ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿಯನ್ನ ನಾವೇ ಫಿಲ್ಮಿ ಬೀಟ್ ನಲ್ಲಿ ನೀಡಿದ್ವಿ. ಈಗ ಆ ಚಿತ್ರಕ್ಕೆ ನಾಯಕನ ಹೆಸರು ಅಂತಿಮವಾಗಿದೆಯಂತೆ.['ಡಾ.ರಾಜ್ ಕುಮಾರ್ ಅಭಿಮಾನಿ' ಕುರಿತು ಆರ್ ಚಂದ್ರು ಹೊಸ ಸಿನಿಮಾ]

  ಹೌದು, 'ಲಕ್ಷ್ಮಣ' ಚಿತ್ರದ ಯಶಸ್ಸಿನಲ್ಲಿದ್ದ ಆರ್ ಚಂದ್ರು, ಈಗ 'ಕನಕ' ಎಂಬ ಹೊಸ ಚಿತ್ರದ ತಯಾರಿಯಲ್ಲಿದ್ದಾರೆ. ಮೂಲಗಳ ಪ್ರಕಾರ ಈ ಚಿತ್ರಕ್ಕೆ ನಾಯಕನಾಗಿ ದುನಿಯಾ ವಿಜಯ್ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೇ, ಇಷ್ಟೋತ್ತಿಗಾಗಲೇ ಈ ಚಿತ್ರವನ್ನ ಶುರು ಮಾಡಬೇಕಿತ್ತಂತೆ. ಆದ್ರೆ, ಅಷ್ಟರಲ್ಲಿ 'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ದುರಂತ ನಡೆದುಹೋಯಿತು.['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

  ಫಿಲ್ಮ್ ಚೇಂಬರ್ ತೀರ್ಮಾನದ ಪ್ರಕಾರ ಮುಂದಿನ ಆದೇಶದವರೆಗೂ ದುನಿಯಾ ವಿಜಯ್ ಯಾವುದೇ ಚಿತ್ರದಲ್ಲಿ ಅಭಿನಯಿಸುವಂತಿಲ್ಲ. ಅದೇ ಕಾರಣಕ್ಕೆ ಆರ್ ಚಂದ್ರು ಅವರು ಈ ಚಿತ್ರವನ್ನ ಇನ್ನು ಶುರು ಮಾಡುವುದಾಗಲಿ, ಅಥವಾ ನಾಯಕನ ಹೆಸರನ್ನ ಘೋಷಣೆ ಮಾಡುವುದಾಗಲಿ ಮಾಡಿಲ್ಲವಂತೆ.[ದುನಿಯಾ ವಿಜಯ್, ನಾಗಶೇಖರ್, ರವಿವರ್ಮಗೆ ತಾತ್ಕಾಲಿಕ ನಿಷೇಧ]

  Duniya Vijay Hero For R Chandru's New Film 'Kanaka'

  ಅಂದ್ಹಾಗೆ, 'ಕನಕ' ಆರ್ ಚಂದ್ರು ಅವರ ಹೋಮ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಸಿನಿಮಾ. ಅಲ್ಲದೇ, 'ಕನಕ' ಚಿತ್ರಕ್ಕೆ 'ರಾಜ್ ಕುಮಾರ್ ಫ್ಯಾನ್' ಎಂಬ ಅಡಿ ಬರಹವಿದೆ. ಇದೊಂದು ಒಬ್ಬ ಆಟೋ ಡ್ರೈವರ್ ಕಥೆಯಂತೆ. ಡಿಗ್ರಿ ಮಾಡದ ಈ ವ್ಯಕ್ತಿ ಅಪ್ಪಟ ಡಾ.ರಾಜ್ ಕುಮಾರ್ ಅವರ ಅಭಿಮಾನಿಯಾಗಿರುತ್ತಾರೆ. ಇಂತಹ ವ್ಯಕ್ತಿಯದೊಂದು ಲವ್ ಸ್ಟೋರಿಯ, ಜೊತೆಗೆ ಕೆಲವು ಇಂಟ್ರಸ್ಟಿಂಗ್ ವಿಷಯಗಳನ್ನಿಟ್ಟು ಸಿನಿಮಾ ರೂಪ ಕೊಡುತ್ತಿದ್ದಾರೆ ಆರ್ ಚಂದ್ರು.

  English summary
  According to source, Duniya Vijay will playing Lead Role in R Chandru's New Film 'Kanaka'. This film based on a true story about Auto Driver Who was A Fan of Dr RajKumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X