For Quick Alerts
  ALLOW NOTIFICATIONS  
  For Daily Alerts

  'RRR' ಚಿತ್ರದಲ್ಲಿ ಅರುಣ್ ಸಾಗರ್ ಅಭಿನಯ: ಪಾತ್ರದ ಬಗ್ಗೆ ಮಾತನಾಡಿದ ನಟ!

  |

  'RRR' ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ಈ ಚಿತ್ರದ ಬಗ್ಗೆ ಎಷ್ಟೇ ಹೇಳಿದರು ಅದು ಕಡಿಮೆ. ಯಾಕೆಂದರೆ ಅದಾಗಲೇ ಸಿನಿಮಾ ನೋಡಲು ಸಿನಿಪ್ರಿಯರು ಸಜ್ಜಾಗಿ ಬಿಟ್ಟಿದ್ದಾರೆ. 'ಆರ್‌ಆರ್‌ಆರ್‌' ಚಿತ್ರವನ್ನು ಯಾವ ಕಣ್ತುಂಬಿ ಕೊಳ್ಳುತ್ತೇವೋ ಅಂತ ಕಾಯುತ್ತಿದ್ದಾರೆ.

  'ಆರ್‌ಆರ್‌ಆರ್‌' ಸಿನಿಮಾ ಕನ್ನಡದಲ್ಲಿ ರಿಲೀಸ್‌ ಆಗುತ್ತಿದೆ. ಆದರೆ ಈ ಚಿತ್ರದಲ್ಲಿ ಕನ್ನಡ ಕಲಾವಿದರು ಇಲ್ಲವಲ್ಲ ಅಂತ ಸಾಕಷ್ಟು ಜನರಿಗೆ ಅನಿಸಿದೆ. ಆದರೆ ಈಗ ಚಿತ್ರ ತಂಡದಿಂದ ಕನ್ನಡಿಗರಿಗೆ ಸಿಹಿ ಸುದ್ದಿ ಒಂದು ಬಂದಿದೆ.

  ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ಕನ್ನಡದ ಹೆಸರಾಂತ ಕಲಾವಿದರೊಬ್ಬರು ಅಭಿನಯಿಸಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ. ಹೌದು ಕನ್ನಡದ ಕಲಾ ನಿರ್ದೇಶಕ, ನಟ ಅರುಣ್ ಸಾಗರ್‌ 'ಆರ್‌ಆರ್‌ಆರ್‌' ಚಿತ್ರದ ಪ್ರಮುಖ ಪಾತ್ರ ಒಂದರಲ್ಲಿ ಅಭಿನಯಿಸಿದ್ದಾರೆ.

  'RRR' ಚಿತ್ರದ ಆರಂಭದಲ್ಲಿ ಅರುಣ್‌ ಸಾಗರ್ ಎಂಟ್ರಿ!

  'RRR' ಚಿತ್ರದ ಆರಂಭದಲ್ಲಿ ಅರುಣ್‌ ಸಾಗರ್ ಎಂಟ್ರಿ!

  ಇಡೀ ವಿಶ್ವವೇ ಎದುರು ನೋಡುತ್ತಿರುವ ಭಾರತೀಯ ಚಿತ್ರ 'ಆರ್‌ಆರ್‌ಆರ್‌' ಸಿನಿಮಾ ಭಾಗ ಆಗಿದ್ದಾರೆ ಕಲಾ ನಿರ್ದೇಶಕ, ನಟ ಅರುಣ್ ಸಾಗರ್. ಅರುಣ್ ಸಾಗರ್ ಸಿನಿಮಾದ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಆರಂಭದಲ್ಲಿ ಅರುಣ್ ಸಾಗರ್ ಪಾತ್ರ ಬಂದು ಹೋಗುತ್ತದೆ. ಸದ್ಯ ಇವರ ಪಾತ್ರದ ಬಗ್ಗೆ ಇಷ್ಟೇ ಮಾಹಿತಿ ಲಭ್ಯ ಆಗಿರುವುದು. ಹಾಗಾಗಿ ಅರುಣ್ ಸಾಗರ್ ಪಾತ್ರ ಹೇಗೆ ಇರಲಿದೆ. ಅವರು ಯಾವ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ? ಎನ್ನುವ ಬಗ್ಗೆ ಕುತೂಹಲಗಳು ಹುಟ್ಟಿಕೊಂಡಿವೆ.

  'RRR' ಪಾತ್ರದ ಬಗ್ಗೆ ಮಾತನಾಡಿದ ಅರುಣ್ ಸಾಗರ್!

  'RRR' ಪಾತ್ರದ ಬಗ್ಗೆ ಮಾತನಾಡಿದ ಅರುಣ್ ಸಾಗರ್!

  'RRR' ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಅರುಣ್ ಸಾಗರ್ 'ಫಿಲ್ಮಿ ಬೀಟ್' ಜೊತೆಗೆ ಮಾತನಾಡಿದ್ದಾರೆ. " ಅದೊಂದು ಸಣ್ಣ ಪಾತ್ರ, ಹೆಚ್ಚು ಹೊತ್ತು ಇರುವುದಿಲ್ಲ. ಚಿತ್ರದ ಆರಂಭದಲ್ಲಿ ಬಂದು ಹೋಗುತ್ತದೆ. ಲುಕ್ ಬಗ್ಗೆ, ಪಾತ್ರದ ಬಗ್ಗೆ ಈಗ ಹೇಳಲು ಸಾಧ್ಯವಿಲ್ಲ. ನೀವೆ ಚಿತ್ರದಲ್ಲಿ ನೋಡಿ " ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ. ಅರುಣ್ ಸಾಗರ್‌ ಪಾತ್ರದ ಚಿತ್ರೀಕರಣ ಹೈದ್ರಾಬಾದ್‌ನಲ್ಲಿ ನಡೆದಿದೆ. ಆದರೆ ಎಷ್ಟು ದಿನ ಶೂಟಿಂಗ್‌ ಇತ್ತು. ಅವರ ಲುಕ್‌ ಹೇಗೆ ಇರಲಿದೆ. ಪಾತ್ರವೇನು ಎನ್ನುವ ಬಗ್ಗೆ ಅರುಣ್ ಸಾಗರ್ ಸದ್ಯಕ್ಕೆ ಬಿಟ್ಟು ಕೊಟ್ಟಿಲ್ಲ.

  'ಬಾಹುಬಲಿ' ಭಾಗ ಆಗಿದ್ದ ಕಿಚ್ಚ ಸುದೀಪ್!

  'ಬಾಹುಬಲಿ' ಭಾಗ ಆಗಿದ್ದ ಕಿಚ್ಚ ಸುದೀಪ್!

  ನಟ ಕಿಚ್ಚ ಸುದಿಪ್‌ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಲ್ಲಿ ಅಭಿನಯಿಸಿದ್ದರು. ಬಾಹುಬಲಿ ಭಾಗ ಒಂದರಲ್ಲಿ ಅಸ್ಲಂ ಖಾನ್‌ ಆಗಿ ಕಿಚ್ಚ ಅಭಿನಯಿಸಿದ್ದರು. ಆದರೆ ಬಾಹುಬಲಿ ಎರಡರಲ್ಲಿ ಅವರು ಕಾಣಿಸಿಕೊಂಡಿಲ್ಲ. ಈಗ 'ಆರ್‌ಆರ್‌ಆರ್‌' ಸರದಿ ಈ ಚಿತ್ರ ಪ್ಯಾನ್‌ ಇಂಡಿಯಾ ಸಿನಿಮಾ. ಹಾಗಾಗಿ ತೆಲುಗು, ತಮಿಳು, ಬಾಲಿವುಡ್ ಕಲಾವಿದರು ಚಿತ್ರದಲ್ಲಿ ಪ್ರಧಾನವಾಗಿದ್ದಾರೆ. ಕನ್ನಡದ ಕಲಾವಿದ ಅರುಣ್ ಸಾಗರ್‌ ಕೂಡ 'RRR' ಚಿತ್ರದ ಭಾಗ ಆಗಿದ್ದಾರೆ. ಇದು ಕನ್ನಡಿಗರಿಗೆ ಸಂತಸದ ಸುದ್ದಿಯೇ ಸರಿ.

  'RRR' ರಿಲೀಸ್‌ಗೆ ಕೌಂಟ್‌ಡೌನ್ ಆರಂಭ!

  'RRR' ರಿಲೀಸ್‌ಗೆ ಕೌಂಟ್‌ಡೌನ್ ಆರಂಭ!

  ರಾಜಮೌಳಿ ನಿರ್ದೇಶನ, ರಾಮ್‌ ಚರಣ್ ತೇಜ, ಜೂನಿಯರ್ ಎನ್‌ಟಿಆರ್, ಆಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ಅದ್ಧೂರಿ ಕಲಾವಿದರ ಅಭಿನಯ, ನಿರೀಕ್ಷೆ ಹುಟ್ಟಿಸಿರುವ ಚಿತ್ರದ ಕಥೆ, ಹೀಗೆ ಹತ್ತು ಹಲವು ವಿಶೇಷತೆಗಳಿರುವ 'ಆರ್‌ಆರ್‌ಆರ್‌' ಚಿತ್ರದ ರಿಲೀಸ್‌ ದಿನಾಂಕ ಪ್ರಕಟ ಆಗಿದೆ. ಸಿನಿಪ್ರೇಮಿಗಳು 'ಆರ್‌ಆರ್‌ಆರ್‌' ಚಿತ್ರವನ್ನು ನೋಡಲು ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಮುಂದಿನ ವರ್ಷ ಚಿತ್ರ ರಿಲೀಸ್‌ ಆಗುತ್ತಿದೆ. ಈಗಾಗಲೇ ಚಿತ್ರ ತಂಡ ಪ್ರಚಾರ ಆರಂಭಿಸಿದೆ. ಇತ್ತೀಚೆಗೆ 'ಆರ್‌ಆರ್‌ಆರ್‌' ಚಿತ್ರತಂಡ ಬೆಂಗಳೂರಿಗೆ ಭೇಟಿ ನೀಡಿತ್ತು.

  English summary
  Kannada Actor Arun Sagar has a cameo in RRR, what he says about the role, know more,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X