»   » ನಟ ಬುಲೆಟ್ ಪ್ರಕಾಶ್ ಕೈಯಲ್ಲಿ ಅರಳಿದ ಕಮಲ

ನಟ ಬುಲೆಟ್ ಪ್ರಕಾಶ್ ಕೈಯಲ್ಲಿ ಅರಳಿದ ಕಮಲ

Posted By:
Subscribe to Filmibeat Kannada

ಬುಲೆಟ್ ಪ್ರಕಾಶ್ ಇನ್ಮುಂದೆ ಕೇವಲ ಹಾಸ್ಯ ನಟ ಮಾತ್ರ ಅಲ್ಲ. ಬಿಜೆಪಿ ಪಕ್ಷದ ಭವಿಷ್ಯ ನಾಯಕ ಮತ್ತು ಕಮಲ ಪಾಳಯದ ಕಾರ್ಯಕರ್ತ.

ಹೌದು, ನಟ ಬುಲೆಟ್ ಪ್ರಕಾಶ್ ರಾಜಕೀಯಕ್ಕೆ ಧುಮುಕಿದ್ದಾರೆ. ಇಂದು (ಜೂನ್ 18) ಬೆಂಗಳೂರಿನ ಬಿಜೆಪಿ ರಾಜ್ಯ ಘಟಕದ ಕಛೇರಿಯಲ್ಲಿ ಆರ್.ಅಶೋಕ್ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಬುಲೆಟ್ ಪ್ರಕಾಶ್ ಸೇರ್ಪಡೆಯಾದರು. [ರಾಜಕೀಯ ರಂಗಕ್ಕೆ ಹಾಸ್ಯ ನಟ ಬುಲೆಟ್ ಪ್ರಕಾಶ್]

Kannada Actor Bullet Prakash joins BJP Party

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿ ಕಂಡು ರಾಜಕೀಯಕ್ಕೆ ಬರುವ ಮನಸ್ಸು ಮಾಡಿದರಂತೆ ನಟ ಬುಲೆಟ್ ಪ್ರಕಾಶ್. ಹಾಗ್ನೋಡಿದರೆ, ಬುಲೆಟ್ ಪ್ರಕಾಶ್ ಗೂ ಬಿಜೆಪಿ ಪಕ್ಷಕ್ಕೂ ವರ್ಷಗಳಿಂದಲೂ ನಂಟಿದೆ. ಬುಲೆಟ್ ಪ್ರಕಾಶ್ ತಾಯಿ ಕೂಡ ಬಿಜೆಪಿ ಪಕ್ಷದ ಕಾರ್ಯಕರ್ತೆ. [ಸಾವನ್ನ ಗೆದ್ದು ಬಂದು ಗಳಗಳನೆ ಅತ್ತ ಬುಲೆಟ್ ಪ್ರಕಾಶ್]

Kannada Actor Bullet Prakash joins BJP Party

ನಟ ಆಗಿರುವ ಕಾರಣದಿಂದ ಯಾವುದೇ ಹುದ್ದೆಯ ಆಕಾಂಕ್ಷೆ ಹೊತ್ತು ರಾಜಕೀಯಕ್ಕೆ ಬಂದಿಲ್ಲ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ, ನಿಭಾಯಿಸಲು ಸಿದ್ಧ ಅಂತ ಬುಲೆಟ್ ಪ್ರಕಾಶ್ ಹೇಳಿದರು.

English summary
Kannada Actor Bullet Prakash has entered Politics. Bullet Prakash joined BJP Party today (June 18th) in the presence of R.Ashok in BJP State office.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada