ಅರ್ಜುನ್ ಸರ್ಜಾ ಕ್ಷಮೆ ಕೇಳುವುದು ದೊಡ್ಡತನ ಎಂದ ಪ್ರಕಾಶ್ ರೈ

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಕನ್ನಡ ನಟಿ ಶ್ರುತಿ ಹರಿಹರನ್ ಮಾಡಿದ ಆರೋಪಕ್ಕೆ ಸ್ಯಾಂಡಲ್ ವುಡ್ ನಲ್ಲಿ ಸುನಾಮಿಯೇ ಸೃಷ್ಟಿಯಾಗಿದೆ. ಚಿತ್ರರಂಗದ ಬಹುತೇಕರು ಅರ್ಜುನ್ ಸರ್ಜಾ ಪರವಾಗಿ ನಿಂತಿದ್ದಾರೆ. ಶ್ರುತಿ ಹರಿಹರನ್ ವಿರುದ್ಧ ನೆಟ್ಟಿಗರು ಕೆಂಡಕಾರುತ್ತಿದ್ದಾರೆ.

ನಟಿ ಶ್ರುತಿ ಹರಿಹರನ್ ವಿರುದ್ಧ ನಿರ್ಮಾಪಕ ಮುನಿರತ್ನ ಹಾಗೂ ಸಾ.ರಾ.ಗೋವಿಂದು ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ. ಎಲ್ಲೆಡೆ ಪರ-ವಿರೋಧ, ಸರಿ-ತಪ್ಪು ಚರ್ಚೆ ನಡೆಯುತ್ತಿರುವಾಗಲೇ, ನಟಿ ಶ್ರುತಿ ಹರಿಹರನ್ ಪರವಾಗಿ ಬಹುಭಾಷಾ ನಟ ಪ್ರಕಾಶ್ ರೈ (ಪ್ರಕಾಶ್ ರಾಜ್) ದನಿಯೆತ್ತಿದ್ದಾರೆ.

''ಶ್ರುತಿ ಹರಿಹರನ್ ನೋವನ್ನ ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಅವರ ನೋವಿಗಾಗಿ ಅರ್ಜುನ್ ಸರ್ಜಾ ಕ್ಷಮೆ ಕೇಳುವುದು ದೊಡ್ಡತನದ ಲಕ್ಷಣ'' ಎಂದಿದ್ದಾರೆ ನಟ ಪ್ರಕಾಶ್ ರಾಜ್. ಮುಂದೆ ಓದಿರಿ...

ಪ್ರತಿಭಾವಂತ ನಟಿ

ಪ್ರತಿಭಾವಂತ ನಟಿ

''ಶ್ರುತಿ ಹರಿಹರನ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತೆ.. ದಿಟ್ಟ ಹೆಣ್ಣು. ಅರ್ಜುನ್ ಸರ್ಜಾ ರವರು ಕನ್ನಡದ ಹೆಮ್ಮೆ.. ಹಿರಿಯ ನಟರೂ ಎಂಬುದನ್ನೂ ಮರೆಯದಿರೋಣ. ಆದರೆ ಶ್ರುತಿಯವರ ಆರೋಪದ ಹಿನ್ನೆಲೆಯಲ್ಲಿ.. ಆ ಹೆಣ್ಣು ಅನುಭವಿಸಿದ ಅಸಹಾಯಕತೆ...ಅವಮಾನ...ಇಷ್ಟು ದಿನಗಳ ಕಾಲ ತನ್ನೊಳಗೆ ಹುದುಗಿಸಿಟ್ಟ ಆ ಗಾಯದ ನೋವನ್ನು ಅರ್ಥಮಾಡಿಕೊಳ್ಳಬೇಕಾಗಿದೆ'' - ಪ್ರಕಾಶ್ ರಾಜ್, ನಟ

ದೊಡ್ಡತನದ ಲಕ್ಷಣ

ದೊಡ್ಡತನದ ಲಕ್ಷಣ

''ಅರ್ಜುನ್ ರವರು ಈ ಆರೋಪವನ್ನು ಅಲ್ಲಗಳೆದರೂ.. ಅವರ ಆ ದಿನದ ವರ್ತನೆ ಆಕೆಯಲ್ಲಿ ಉಂಟುಮಾಡಿದ ನೋವಿಗಾಗಿ ಕ್ಷಮೆ ಕೇಳುವುದು ದೊಡ್ಡತನದ ಲಕ್ಷಣ'' - ಪ್ರಕಾಶ್ ರಾಜ್, ನಟ

ದೌರ್ಜನ್ಯಕ್ಕೆ ಕೊನೆ ಕಾಣಲಿ

ದೌರ್ಜನ್ಯಕ್ಕೆ ಕೊನೆ ಕಾಣಲಿ

''ಅರಿತೋ ಅರಿಯದೆಯೋ ನಾವು ಗಂಡಸರು ಹುಟ್ಟಿನಿಂದಲೇ ಹೆಣ್ಣಿನ ಬೇಕು ಬೇಡಗಳ ಬಗ್ಗೆ ಸೂಕ್ಷಮತೆಯನ್ನು ಕಳೆದುಕೊಂಡಿರುವುದು ನಿಜ. ಹೆಣ್ಣು ಮಕ್ಕಳೂ ತಮ್ಮ ಹಕ್ಕನ್ನು ಅರಿಯದೆ ಇರುವುದೂ ಅಷ್ಟೇ ನಿಜ...ಪ್ರಸ್ತುತ ಹೆಣ್ಣುಮಕ್ಕಳ ಈ 'ಮಿ ಟೂ' ಅಭಿಯಾನ ಮುಂದಿನ ದಿನಗಳಲ್ಲಾದರೂ ನಮ್ಮ ಸಮಾಜದಲ್ಲಿ ಅವರ ಮೇಲಿನ ಶತಮಾನಗಳ ದೌರ್ಜನ್ಯಕ್ಕೆ.. ಅವಮಾನಗಳಿಗೆ... ಅಸಹಾಯಕತೆಗೆ...ಕೊನೆಯನ್ನು ಕಾಣಲಿ'' - ಪ್ರಕಾಶ್ ರಾಜ್, ನಟ

ಶ್ರುತಿ ಹರಿಹರನ್ ಪರವಾಗಿ ನಿಂತ ಪ್ರಕಾಶ್ ರಾಜ್

ಶ್ರುತಿ ಹರಿಹರನ್ ಪರವಾಗಿ ನಿಂತ ಪ್ರಕಾಶ್ ರಾಜ್

''ನಾನು ಶ್ರುತಿ ಹರಿಹರನ್ ರವರ ಪರವಾಗಿ.. ಈ ಮೂಲಕ ಎಲ್ಲಾ ನೊಂದ ಹೆಣ್ಣು ಮಕ್ಕಳ ಪರವಾಗಿ ನಿಲ್ಲುತ್ತೇನೆ'' - ಪ್ರಕಾಶ್ ರಾಜ್, ನಟ

More from Filmibeat

English summary
#MeToo: Kannada Actor Prakash Rai supports Kannada Actress Sruthi Hariharan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X