»   » ಟ್ವಿಟ್ಟರ್ ನಲ್ಲಿ 'ರಾಜ ರಾಜೇಂದ್ರ'ನ ದರ್ಬಾರ್

ಟ್ವಿಟ್ಟರ್ ನಲ್ಲಿ 'ರಾಜ ರಾಜೇಂದ್ರ'ನ ದರ್ಬಾರ್

Posted By:
Subscribe to Filmibeat Kannada

ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುವುದಕ್ಕೆ ಸೆಲೆಬ್ರಿಟಿಗಳು ಇತ್ತೀಚೆಗೆ ಕಂಡುಕೊಂಡಿರುವ ತೀರಾ ಉಪಯುಕ್ತ ಮಾರ್ಗವೆಂದರೆ ಅವು, ಫೇಸ್ ಬುಕ್ ಮತ್ತು ಟ್ವಿಟ್ಟರ್ ನಂತಹ ಸಾಮಾಜಿಕ ಜಾಲ ತಾಣಗಳು.

ಬಾಲಿವುಡ್ ನ ಬಿಗ್ ಬಿ, ಸಲ್ಮಾನ್, ಶಾರೂಖ್ ಸೇರಿದಂತೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಸ್ಯಾಂಡಲ್ ವುಡ್ ನಲ್ಲೂ ಅಷ್ಟೆ, ಕಿಚ್ಚ ಸುದೀಪ್, ಲಕ್ಕಿ ಸ್ಟಾರ್ ರಮ್ಯಾ, ದರ್ಶನ್ ತೂಗುದೀಪ್ ಪ್ರಸಿದ್ಧ ಟ್ವೀಟ್ ಬರ್ಡ್ಸ್.


Kannada Actor Sharan has entered Twitter officially1

ದಿನದಿಂದ ದಿನಕ್ಕೆ ಟ್ವಿಟ್ಟರ್ ನಲ್ಲಿ ಸೆಲೆಬ್ರಿಟಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ಮೊನ್ನೆಯಷ್ಟೇ 'ಖುಷಿ ಖುಷಿಯಾಗಿ' ಚಿತ್ರದ ಪ್ರಚಾರಕ್ಕೋಸ್ಕರ ಟ್ವಿಟ್ಟರ್ ಗೆ ಅಧಿಕೃತ ಎಂಟ್ರಿಕೊಟ್ಟಿದ್ದರು. ಇದೀಗ ಅದೇ ಸಾಲಿಗೆ ನೂತನ ಎಂಟ್ರಿಕೊಟ್ಟಿರುವುದು ನಟ ಶರಣ್. [ಟ್ವಿಟ್ಟರ್ ನಲ್ಲಿ 'ನಮಸ್ಕಾರ ನಮಸ್ಕಾರ ನಮಸ್ಕಾರ' ಗಣೇಶ್]


'ರ್ಯಾಂಬೋ', 'ವಿಕ್ಟರಿ', 'ಅಧ್ಯಕ್ಷ' ಸೇರಿದಂತೆ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸುತ್ತಿರುವ ನಟ ಶರಣ್ ಅಭಿನಯಿಸುತ್ತಿರುವ ಹೊಸ ಸಿನಿಮಾ 'ರಾಜ ರಾಜೇಂದ್ರ'. ಇತ್ತೀಚೆಗಷ್ಟೇ 'ರಾಜ ರಾಜೇಂದ್ರ' ಚಿತ್ರದ ಆಡಿಯೋ ರಿಲೀಸ್ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಬೆಳ್ಳಿ ಪರದೆ ಮೇಲೆ 'ರಾಜ ರಾಜೇಂದ್ರ'ನ ದರ್ಬಾರ್ ಶುರುವಾಗಲಿದೆ.


Kannada Actor Sharan has entered Twitter officially3

ಹೀಗಾಗಿ, ಚಿತ್ರಕ್ಕೆ ಸ್ವಲ್ಪ ಬೂಸ್ಟ್ ಸಿಗಲಿ ಅಂತ ಶರಣ್, ಟ್ವಿಟ್ಟರ್ ಗೆ ಲಗ್ಗೆ ಇಟ್ಟಿದ್ದಾರೆ. ನಿನ್ನೆಯಷ್ಟೇ (ಜನವರಿ 12) 'ಟ್ವಿಟ್ಟರ್'ಗೆ ಕಾಲಿಟ್ಟಿರುವ ಶರಣ್ ''ರಾಜ ರಾಜೇಂದ್ರ ರಿಲೀಸ್ ಆಗುವುದಕ್ಕೆ ಕೌಂಟ್ ಡೌನ್ ಶುರುವಾಗಿದೆ'' ಅಂತ ಮೊದಲ ಟ್ವೀಟ್ ಮಾಡಿದ್ದಾರೆ.ಶರಣ್ ಟ್ವೀಟ್ ಮಾಡ್ತಿದ್ದಂತೆ ನಟಿ ಹರಿಪ್ರಿಯಾ ಶರಣ್ ರನ್ನ ಟ್ವೀಟ್ ಲೋಕಕ್ಕೆ ಆಹ್ವಾನಿಸಿದ್ದಾರೆ. ಹರಿಪ್ರಿಯಾ, ಹರ್ಷಿಕಾ ಪೂಣಚ್ಚ ಸೇರಿದಂತೆ ಚಿತ್ರರಂಗದ ಹಲವರು ಮತ್ತು 350ಕ್ಕೂ ಅಭಿಮಾನಿಗಳು ಕೆಲವೇ ಗಂಟೆಗಳಲ್ಲಿ ಶರಣ್ ರನ್ನ ಫಾಲೋ ಮಾಡಿದ್ದಾರೆ.ಇನ್ಮೇಲಿಂದ ಅಭಿಮಾನಿಗಳಿಗಾಗಿ 24 ಗಂಟೆ ಶರಣ್ ಟ್ವಿಟ್ಟರ್ ನಲ್ಲಿ ಲಭ್ಯವಿರುತ್ತಾರೆ. ಶರಣ್ ಗೆ ಹಾಯ್ ಹೇಳ್ಬೇಕು, 'ರಾಜ ರಾಜೇಂದ್ರ' ಚಿತ್ರದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಅಂತ ನಿಮ್ಗೆ ಆಸೆ ಇದ್ರೆ @sharanhruday ಗೆ ವಿಸಿಟ್ ಹಾಕಿ.


English summary
Kannada Actor Sharan of Adhyaksha fame has opened his official Twitter Account. sharanhruday is his Twitter Handle.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada