»   » 'ಉಪ್ಪಿ 2' ಚೆನ್ನಾಗಿದೆ ಅಂದ ಸೆನ್ಸಾರ್ ಮಂಡಳಿ

'ಉಪ್ಪಿ 2' ಚೆನ್ನಾಗಿದೆ ಅಂದ ಸೆನ್ಸಾರ್ ಮಂಡಳಿ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಉಪ್ಪಿ 2' ಬಿಡುಗಡೆಗೆ ಸೆನ್ಸಾರ್ ಬೋರ್ಡ್ ಅಸ್ತು ಎಂದಿದೆ. ಆಗಸ್ಟ್ 14 ರಂದು ರಾಜ್ಯಾದ್ಯಂತ ಉಪೇಂದ್ರ ಅವರು ಪ್ರೇಕ್ಷಕರಿಗೆ ತೆರೆಯ ಮೇಲೆ 'ಉಪ್ಪಿ 2' ಬಡಿಸಲಿದ್ದಾರೆ.

ಸುಮಾರು ವಿವಾದಗಳಿಗೆ ತೆರೆ ಎಳೆದು ಅಂತೂ ಇಂತೂ 'ಉಪ್ಪಿ 2' ಪ್ರೇಕ್ಷಕರತ್ತ ಬರುತ್ತಿದೆ.
ಈ ಮೊದಲು ಡಿಫರೆಂಟ್ ಪೋಸ್ಟರ್ ಗಳನ್ನು ಬಿಡುಗಡೆ ಮಾಡುವ ಮೂಲಕ ರಿಯಲ್ ಸ್ಟಾರ್ ತಮ್ಮ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದರು. [ಕೇಸ್ ಹಾಕಿದ ಜಗ್ಗೇಶ್, ತುಟಿ ಬಿಚ್ಚದ ಉಪೇಂದ್ರ!]


Kannada Actor Upendra starrer 'Uppi 2' gets U/A certificate

ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶಿಸಿ ನಟಿಸುತ್ತಿರುವ 'ಉಪ್ಪಿ 2' ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ನಿಂದ ಯು/ಎ ಪ್ರಮಾಣಪತ್ರ ದೊರೆತಿದೆ. ಈ ಹಿಂದೆ 'ಉಪ್ಪಿ 2' ಚಿತ್ರ ಪೋಸ್ಟರ್ ನಿಂದ ಹಿಡಿದು ಪ್ರೋಮೋಷನ್ ವರೆಗೂ ಗಾಂಧಿನಗರದಲ್ಲಿ ಭಾರಿ ಕೋಲಾಹಲವನ್ನೇ ಎಬ್ಬಿಸಿತ್ತು.['ಉಪ್ಪಿ 2' ಚಿತ್ರದ ಹೊಚ್ಚ ಹೊಸ ಪೋಸ್ಟರ್ ರಿಲೀಸ್]


ಅಂತೂ ಇಂತೂ ಕೊನೆಯದಾಗಿ ಎಲ್ಲವೂ ಸುಖಾಂತ್ಯ ಕಂಡ ಮೇಲೆ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಇನ್ನೂ ಒಂದು ವಿಶೇಷ ಏನಪ್ಪಾ ಅಂದ್ರೆ ಆಗಸ್ಟ್ 14 ರಂದು 'ಉಪ್ಪಿ 2' ಜೊತೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ 25ನೇ ಚಿತ್ರ 'ಬುಗುರಿ' ಕೂಡ ತೆರೆ ಕಾಣುತ್ತಿದ್ದು, ಇನ್ನು ಅದ್ಯಾವ ವಿವಾದ ಶುರುವಾಗಲಿದೆ ಅನ್ನೋದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.


Kannada Actor Upendra starrer 'Uppi 2' gets U/A certificate

1999 ರಲ್ಲಿ ತೆರೆ ಕಂಡಿದ್ದ ಉಪೇಂದ್ರ ಅಭಿನಯದ 'ಉಪೇಂದ್ರ' ಚಿತ್ರದ ನಂತರ ಮತ್ತೊಮ್ಮೆ ರಿಯಲ್ ಸ್ಟಾರ್ ಹೋಮ್ ಬ್ಯಾನರ್ ನಲ್ಲಿ ಬರುತ್ತಿರುವ 'ಉಪ್ಪಿ 2' ಚಿತ್ರವನ್ನು ಸ್ವತಃ ಉಪೇಂದ್ರ ಅವರೇ ರಚಿಸಿ-ನಿರ್ದೇಶಿಸಿ-ನಟಿಸುತ್ತಿದ್ದಾರೆ. [ಉಪ್ಪಿಗಿಂತ ರುಚಿ ಬೇರೆ ಇಲ್ಲ! ಯಾಕೆ ಗೊತ್ತಾ?]


ಚಿತ್ರದಲ್ಲಿ ಕ್ರಿಸ್ಟಿನಾ ಉಪ್ಪಿ ಜೊತೆ ಡ್ಯುಯೆಟ್ ಹಾಡಲಿದ್ದು, ಪ್ರೀಯಾಂಕ ಉಪೇಂದ್ರ ಬಂಡವಾಳ ಹಾಕಿದ್ದಾರೆ. ಗುರುಕಿರಣ್ 'ಉಪ್ಪಿ 2' ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

English summary
Kannada movie 'Uppi 2' gets U/A Certificate from the Censor Board. 'Uppi 2' features Kannada actor Upendra, Actress Kristina Akheeva in the lead role. The movie is directed by Upendra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada