For Quick Alerts
  ALLOW NOTIFICATIONS  
  For Daily Alerts

  ಕೆ.ಮಂಜು, ಇಮ್ರಾನ್ ಏಟಿಗೆ ತಿರುಗೇಟು ಕೊಡಲು ಮಾಲಾಶ್ರೀ ತಯಾರು!

  By Harshitha
  |

  ಸ್ಯಾಂಡಲ್ ವುಡ್ ನ ಕನಸಿನ ರಾಣಿ ಮಾಲಾಶ್ರೀ ಹಾಗೂ ನಿರ್ಮಾಪಕ ರಾಮು ಇಂದು 'ಮತ್ತೊಂದು ತುರ್ತು ಸುದ್ದಿಗೋಷ್ಠಿ' ಕರೆದಿದ್ದಾರೆ.

  ಇಂದು ಮಧ್ಯಾಹ್ನ 2 ಗಂಟೆಗೆ ಗಾಂಧಿನಗರದಲ್ಲಿರುವ ಸಿಲ್ವರ್ ಸ್ಟಾರ್ ಹೋಟೆಲ್ ನಲ್ಲಿ ಮಾಲಾಶ್ರೀ ಹಾಗೂ ರಾಮು ರವರ 'ದಿಢೀರ್ ಸುದ್ದಿಗೋಷ್ಠಿ' ನಡೆಯಲಿದೆ. [ತುರ್ತು ಸುದ್ದಿಗೋಷ್ಠಿ ಕರೆದು ನಟಿ ಮಾಲಾಶ್ರೀ ಕಣ್ಣೀರಿಟ್ಟಿದ್ದು ಯಾಕೆ?]

  ನಿನ್ನೆಯಷ್ಟೇ, 'ಉಪ್ಪು ಹುಳಿ ಖಾರ' ಚಿತ್ರದ ವಿವಾದದ ವಿಚಾರವಾಗಿ ನಟಿ ಮಾಲಾಶ್ರೀ 'ಟೈಮ್ ಸೆನ್ಸ್' ಬಗ್ಗೆ ಇಮ್ರಾನ್ ಸರ್ದಾರಿಯಾ ಬೇಸರ ವ್ಯಕ್ತಪಡಿಸಿದ್ದರು. [ಮಾಲಾಶ್ರೀ 'ಉಪ್ಪು ಹುಳಿ ಖಾರ'ದ 'ಕಹಿ' ಸತ್ಯ ಬಿಚ್ಚಿಟ್ಟ ಇಮ್ರಾನ್.!]

  ''ನಟಿ ಮಾಲಾಶ್ರೀಗೆ ರಾಮು ದುಡ್ಡು ಕೊಡುವುದಿಲ್ಲ'' ಅಂತ ಮಾಲಾಶ್ರೀ ವೈಯುಕ್ತಿಕ ಜೀವನದ ಬಗ್ಗೆ ನಿರ್ಮಾಪಕ ಕೆ.ಮಂಜು ಕಾಮೆಂಟ್ ಮಾಡಿದ್ದರು.

  ಸಾಲ್ದು ಅಂತ 'ನಟಿ ಮಾಲಾಶ್ರೀಗೆ 45 ಲಕ್ಷ ರೂಪಾಯಿ ಕೊಟ್ಟಿದ್ದರೂ, ಹೊಸ ಸಂಭಾವನೆ ಕೇಳುತ್ತಿದ್ದಾರೆ' ಅಂತ ಕೊಬ್ರಿ ಮಂಜು ಗರಂ ಆಗಿದ್ದರು. 'ಬೇಕಾದರೆ ನಾನು ಅಳುತ್ತೇನೆ' ಅಂತ ಪತ್ರಿಕಾ ಮಿತ್ರರ ಮುಂದೆ ಅಣಕು ಪ್ರದರ್ಶನ ಮಾಡಿದ್ದರು. ['ನಾನೇನು ಮಾಲಾಶ್ರೀ ಮನೆ ಕೆಲಸದವನಾ' ಎಂದ ಕೊಬ್ರಿ ಮಂಜು.!]

  ಇದಾದ ನಂತರ ಯಾವುದೇ ಮಾಧ್ಯಮಕ್ಕೆ ಹೇಳಿಕೆ ನೀಡದ 'ಲೇಡಿ ಟೈಗರ್' ಮಾಲಾಶ್ರೀ ಇದೀಗ ಮತ್ತೊಂದು ಬಾರಿ ಪ್ರೆಸ್ ಮೀಟ್ ಮಾಡುತ್ತಿದ್ದಾರೆ. ಅವರೊಂದಿಗೆ ನಿರ್ಮಾಪಕ ರಾಮು ಕೂಡ ಕೆಲ ವಿಷಯಗಳನ್ನ ಬಹಿರಂಗ ಮಾಡಲು ನಿರ್ಧರಿಸಿದ್ದಾರೆ.

  ಕೊಬ್ರಿ ಮಂಜು ಹಾಗೂ ಇಮ್ರಾನ್ ಸರ್ದಾರಿಯಾ ಕೊಟ್ಟಿರುವ ಏಟಿಗೆ ನಟಿ ಮಾಲಾಶ್ರೀ ಹೇಗೆ ತಿರುಗೇಟು ನೀಡ್ತಾರೋ, ಕಾದು ನೋಡೋಣ....

  English summary
  After Choreographer turned Director Imran Sardhariya and Producer K.Manju lashed out against Kannada Actress Malashri in the press meet held yesterday, Malashri and her husband Producer Ramu have decided to address the press today at 2pm in Hotel Silver Star, Gandhinagar, Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X