For Quick Alerts
  ALLOW NOTIFICATIONS  
  For Daily Alerts

  ನಟಿ ರಮ್ಯಾ 'ಡ್ರಾಮಾ ಕ್ವೀನ್'; ಹೀಗೆಂದು ಹೇಳಿದ್ದು ಯಾರು ಗೊತ್ತಾ?

  |

  ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಯಾವಾಗ ಮತ್ತೆ ಬಣ್ಣದಲೋಕಕ್ಕೆ ವಾಪಸ್ ಆಗುತ್ತಾರೆ ಅನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಚಿತ್ರರಂಗದಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ಬಣ್ಣದಲೋಕಕ್ಕೆ ಎಂಟ್ರಿ ಕೊಟ್ಟಿದ್ದ ರಮ್ಯಾ, ಸಂಸದೆಯಾಗಿಯೂ ಸೇವೆ ಸಲ್ಲಿಸಿದ್ದರು. ಲೋಕಸಭೆ ಚುನಾವಣೆಯಲ್ಲಿ ಒಮ್ಮೆ ಗೆದ್ದು ಒಮ್ಮೆ ಸೋಲಿನ ಕಹಿ ಉಂಡ ರಮ್ಯಾ ಮತ್ತೆ ಸಿನಿಮಾಗಳತ್ತ ಮುಖ ಮಾಡಲಿಲ್ಲ. ಆದರೆ ಅಭಿಮಾನಿಗಳು ಮಾತ್ರ ನೆಚ್ಚಿನ ನಟಿಯನ್ನು ಮತ್ತೆ ಬೆಳ್ಳಿತೆರೆಮೇಲೆ ನೋಡಲು ಕಾತರರಾಗಿದ್ದಾರೆ.

  ಶೀಘ್ರದಲ್ಲೇ ರಮ್ಯಾ ಚಿತ್ರರಂಗಕ್ಕೆ ವಾಪಸ್ ಆಗುವ ನಿರೀಕ್ಷೆ ಕೂಡ ಇದೆ. ಆದರೆ ಯಾವ ಸಿನಿಮಾ ? ಹೀರೊ ಯಾರಿರಬಹುದು ಅನ್ನುವುದು ಮಾತ್ರ ಸಸ್ಪೆನ್ಸ್. ಒಂದ್ಕಾಲದಲ್ಲಿ ಸ್ಯಾಂಡಲ್‌ವುಡ್ ಸೂಪರ್‌ ಸ್ಟಾರ್‌ಗಳ ಜೊತೆ ಮಿಂಚಿ ಮೋಹಕತಾರೆಯಾಗಿ ಮೆರೆದ ರಮ್ಯಾ, ಪರಭಾಷಾ ಸಿನಿಮಾಗಳಲ್ಲಿ ಕೂಡ ನಟಿಸಿ ಗೆದ್ದಿದ್ದರು. ಸದ್ಯ ರಮ್ಯಾ ಅವರ ಇನ್‌ಸ್ಟಾಗ್ರಾಂ ಸ್ಟೋರಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ತಮ್ಮನ್ನು ತಾವೇ ರಮ್ಯಾ 'ಡ್ರಾಮಾ ಕ್ವೀನ್' ಎಂದು ಕರೆದುಕೊಂಡಿದ್ದಾರೆ.

  ಸಾಮಾನ್ಯವಾಗಿ ಯಾರನ್ನಾದರೂ ನೀವು ತುಂಬಾ ಡ್ರಾಮಾ ಮಾಡ್ತೀರಾ ಅಂದರೆ ಗರಂ ಆಗ್ತಾರೆ. ಅಂತಹದ್ರಲ್ಲಿ ಹುಡುಗಿಯರನ್ನು ಡ್ರಾಮಾ ಕ್ವೀನ್ ಅಂತ ಕರೆದರೆ ಸುಮ್ಮನಿರ್ತಾರಾ? ಸಾಧ್ಯವೇ ಇಲ್ಲ. ಆದರೆ ಸ್ವತಃ ನಟಿ ರಮ್ಯಾ ತಮಗೆ ತಾವು ಡ್ರಾಮಾ ಕ್ವೀನ್ ಅಂತ ಬಿರುದು ಕೊಟ್ಟುಕೊಂಡಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ. ಅಭಿಮಾನಿಗಳ ಪ್ರೀತಿಯ ಪದ್ಮಾವತಿಯ ಸಾಕಷ್ಟು ಹಳೇ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಟ್ರೋಲ್ ಪೇಜ್‌ಗಳಲ್ಲಿ ಇಂತಹ ಸ್ಪೆಷಲ್ ವಿಡಿಯೋಗಳು ರಾರಾಜಿಸುತ್ತಿರುತ್ತವೆ. ಇಂಥದ್ದೇ ಹಳೇ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಈ ಹಿಂದೆ ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ರಮ್ಯಾ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಆಕೆಯ ಭಿನ್ನ ವಿಭಿನ್ನ ಎಕ್ಸ್‌ಪ್ರೆಷನ್‌ಗಳನ್ನು ಸೇರಿಸಿ ವಿಡಿಯೋವೊಂದು ಹರಿದಾಡ್ತಿದೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರೋ ಪದ್ಮಾವತಿ 'ನಾನೆಂಥಾ ಡ್ರಾಮಾ ಕ್ವೀನ್' ಎಂದು ಬರೆದುಕೊಂಡಿದ್ದಾರೆ.

  ಮೋಹಕ ತಾರೆಯ ಈ ಇನ್‌ಸ್ಟಾಗ್ರಾಂ ಸ್ಟೋರಿ ಈಗ ಸಖತ್ ವೈರಲ್ ಆಗಿದೆ. ಅಭಿಮಾನಿಗಳು ಇದನ್ನು ಪದೇ ಪದೆ ನೋಡಿ, ಮೇಡಮ್ ಸೂಪರ್ ಎಕ್ಸ್‌ಪ್ರೆಷನ್ ಅಂತಿದ್ದಾರೆ. ಇನ್ನು ತಮ್ಮ ನೆಚ್ಚಿನ ನಟಿ ಯಾವುದೇ ಪೋಸ್ಟ್ ಹಾಕಿದರೂ ಕಾಮೆಂಟ್ ಬಾಕ್ಸ್‌ನಲ್ಲಿ ಅಭಿಮಾನಿಗಳು, ಯಾವಾಗ ಕಂಬ್ಯಾಕ್ ಮಾಡ್ತೀರಾ ಮೇಡಂ? ನಮ್ ಬಾಸ್ ಜೊತೆ ಆಕ್ಟ್ ಮಾಡಿ ಮೇಡಂ ಅಂತ ಕೇಳುತ್ತಲೇ ಇರುತ್ತಾರೆ. 'ನಾಗರಹಾವು' ನಂತರ ಮೋಹಕತಾರೆ ರಮ್ಯಾ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಇತ್ತೀಚೆಗೆ ಪಾಲಿಟಿಕ್ಸ್‌ನಿಂದ ಅಂತರ ಕಾಯ್ದುಕೊಂಡಿರುವ ರಮ್ಯಾ, ಮತ್ತೆ ರಂಗೀನ್ ಲೋಕಕ್ಕೆ ರೀ-ಎಂಟ್ರಿ ಕೊಡುವ ಲೆಕ್ಕಾಚಾರದಲ್ಲಿದ್ದಾರೆ.

  'ಹೊಯ್ಸಳ' ಶೂಟಿಂಗ್‌ ಸೆಟ್‌ಗೆ ಭೇಟಿ ನೀಡಿದ್ದ ರಮ್ಯಾ

  ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ಸ್ಥಾನದಿಂದ ಹೊರಬಂದ ಮೇಲೆ ರಮ್ಯಾ ಕೆಲ ದಿನಗಳ ಕಾಲ ಅಜ್ಞಾತವಾಸದಲ್ಲಿದ್ದರು. ರಮ್ಯಾ ಎಲ್ಲಿದ್ದಾರೆ? ಏನ್ ಮಾಡುತ್ತಿದ್ದಾರೆ? ಅನ್ನುವುದು ಯಾರಿಗೂ ಗೊತ್ತಿರಲಿಲ್ಲ. ನಂತರ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದ ರಮ್ಯಾ ನಿಧಾನವಾಗಿ ಸಿನಿಮಾಗಳತ್ತ ಒಲವು ತೋರಿಸುತ್ತಿದ್ದಾರೆ. ಸಿನಿಮಾಗಳಲ್ಲಿ ನಟಿಸದೇ ಇದ್ದರೂ ಸೆಲೆಬ್ರೆಟಿಗಳ ಜೊತೆ ಆತ್ಮೀಯ ಒಡನಾಟವಿದೆ. ಇತ್ತೀಚೆಗೆ ಡಾಲಿ ಧನಂಜಯ ನಟನೆಯ 'ಹೊಯ್ಸಳ' ಸಿನಿಮಾ ಸೆಟ್‌ಗೆ ಭೇಟಿ ನೀಡಿದ್ದರು. ಆ ವಿಡಿಯೋ ಸಖತ್ ವೈರಲ್ ಆಗಿತ್ತು.

   '777 ಚಾರ್ಲಿ' ಸಿನಿಮಾ ನೋಡಿ ರಮ್ಯಾ ಕಣ್ಣೀರು

  '777 ಚಾರ್ಲಿ' ಸಿನಿಮಾ ನೋಡಿ ರಮ್ಯಾ ಕಣ್ಣೀರು

  ಪ್ರಾಣಿಪ್ರೇಮಿಯೂ ಆಗಿರುವ ರಮ್ಯಾ ತಮ್ಮ ನೆಚ್ಚಿನ ಶ್ವಾನದ ಫೋಟೊವನ್ನು ಆಗಾಗ್ಗೆ ಇನ್‌ಸ್ಟ್ರಾಗ್ರಾಮ್‌ನಲ್ಲಿ ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಚಿತ್ರ ನೋಡಿ ಭಾವುಕರಾಗಿದ್ದರು. ರಮ್ಯಾ ಸೇರಿದಂತೆ ಚಿತ್ರರಂಗದ ಸೆಲೆಬ್ರೆಟಿಗಳಿಗಾಗಿ ಚಿತ್ರತಂಡ ಸ್ಪೆಷಲ್ ಶೋ ಏರ್ಪಡಿಸಿತ್ತು. ಧರ್ಮ ಮತ್ತು ಚಾರ್ಲಿಯ ಮನಮಿಡಿಯುವ ಕಥೆ ನೋಡ್ತಾ ನೋಡ್ತಾ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದ್ದರು.

   ಸ್ಟಾರ್‌ಗಳ ನೆಚ್ಚಿನ ನಟಿ ರಮ್ಯಾ

  ಸ್ಟಾರ್‌ಗಳ ನೆಚ್ಚಿನ ನಟಿ ರಮ್ಯಾ

  ಸಾಮಾನ್ಯವಾಗಿ ನಟನಟಿಯರಿಗೆ ಅಭಿಮಾನಿಗಳು ಇರ್ತಾರೆ. ಆದರೆ ಕನ್ನಡ ಚಿತ್ರರಂಗದ ಸಾಕಷ್ಟು ಸ್ಟಾರ್ ಕಲಾವಿದರಿಗೆ ರಮ್ಯಾ ಅಂದರೆ ಅಚ್ಚುಮೆಚ್ಚು. ಸಿಂಪಲ್ ಸ್ಟಾರ್ ರಕ್ಷಿತ್‌ ಶೆಟ್ಟಿ ಸೇರಿದಂತೆ ಹಲವರು ನಾವು ರಮ್ಯಾ ಅಭಿಮಾನಿ ಅಂತ ಹೇಳಿಕೊಂಡಿದ್ದಾರೆ. ರಮ್ಯಾ ಜೊತೆ ನಟಿಸುವ ಇಂಗಿತ ವ್ಯಕ್ತಪಡಿಸುತ್ತಿರುತ್ತಾರೆ.

  Recommended Video

  ನಿರೂಪ್ ಬಂಡಾರಿ ನೀತ ಅಶೋಕ್ ಪ್ರಕಾರ ವಿಕ್ರಾಂತ್ ರೋಣ ಹಾಗು ಫ್ಯಾಂಟಮ್‌ಗೆ ಸಂಭಂದಾನೇ ಇಲ್ಲ | Filmibeat Kannada
   ಹೊಸ ಚಿತ್ರದಲ್ಲಿ ಮೋಹಕ ತಾರೆ ಅಭಿನಯ?

  ಹೊಸ ಚಿತ್ರದಲ್ಲಿ ಮೋಹಕ ತಾರೆ ಅಭಿನಯ?

  ನಟಿ ರಮ್ಯಾ ಯಾವಾಗ ಚಿತ್ರರಂಗಕ್ಕೆ ವಾಪಸ್ ಬರುತ್ತಾರೆ ಅಂತ ಅಭಿಮಾನಿಗಳು ಕಾಯುತ್ತಿರುವುದೇನೋ ನಿಜ. ಕೆಲ ದಿನಗಳ ಹಿಂದೆ ಮಾರ್ಚ್‌ನಲ್ಲಿ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಡುವುದಾಗಿ ಪದ್ಮಾವತಿ ಕೂಡ ಹೇಳಿದ್ದರು. ಆದರೆ ಅಂತಹ ಯಾವುದೇ ಸುದ್ದಿ ಬರಲಿಲ್ಲ. ಇನ್ನು ಈಗಾಗಲೇ ರಮ್ಯಾ ಹೊಸಬರ ಚಿತ್ರವೊಂದರಲ್ಲಿ ಸದ್ದಲ್ಲದೇ ಬಣ್ಣ ಹಚ್ಚಿ 2 ದಿನ ನಟಿಸಿದ್ದಾರೆ ಅನ್ನುವ ಗುಸುಗುಸು ಕೂಡ ಇದೆ. ಎಲ್ಲದಕ್ಕೂ ಶೀಘ್ರದಲ್ಲೇ ಉತ್ತರ ಸಿಗಲಿದೆ.

  English summary
  Kannada Actress Ramya Herself Called Drama Queen Instagram Story Goes Viral. Know More.
  Sunday, July 24, 2022, 18:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X