Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತಾರೆ ರೂಪಿಕಾ ಖತರ್ನಾಕ್ ಕಲರ್ ಕಲರ್ ಚಿತ್ರಗಳು
ನಟಿ ರೂಪಿಕಾ ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಫಾರ್ಮ್ ಗೆ ಮರಳಿದ್ದಾರೆ. ಈಗ ಅವರ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಎಲ್ಲಾ ಚಿತ್ರಗಳಲ್ಲೂ ತಮ್ಮ ಗ್ಲಾಮರ್ ಗಮ್ಮತ್ತನ್ನು ತೋರುತ್ತಿದ್ದಾರೆ. ಈಗವರು ಅಭಿನಯಿಸುತ್ತಿರುವ 'ಖತರ್ನಾಕ್' (ಹಳೆ ಶೀರ್ಷಿಕೆ ಉಮೇಶ್ ರೆಡ್ಡಿ) ಎಂಬ ಚಿತ್ರದಲ್ಲೂ ತಮ್ಮ ಮೈಮಾಟ ಮೆರೆದಿದ್ದಾರೆ.
ಈ ಚಿತ್ರದಲ್ಲಿ ರೂಪಿಕಾ ಅವರದು ಕಾಲ್ಪನಿಕ ಪಾತ್ರವಂತೆ. ಚಿತ್ರದಲ್ಲಿ ತಮ್ಮದು ಭಿನ್ನ ಕ್ಯಾರೆಕ್ಟರ್ ಎನ್ನುತ್ತಾರೆ ಅವರು. ಆದಿತ್ಯ ರಮೇಶ್ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಉಮೇಶ್ ರೆಡ್ಡಿ' ಚಿತ್ರದ ಶೀರ್ಷಿಕೆಯನ್ನು 'ಖತರ್ನಾಕ್' ಎಂದು ಬದಲಿಸಲಾಗಿದೆ ಎಂದು ನಿರ್ಮಾಪಕ ಆದಿತ್ಯ ರಮೇಶ್ ತಿಳಿಸಿದ್ದಾರೆ.
ಚಿತ್ರ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಲಿದೆ. ಮಳವಳ್ಳಿ ಸಾಯಿಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸಾಧುಕೋಕಿಲ ಹಿನ್ನೆಲೆ ಸಂಗೀತ ನೀಡಿದ್ದಾರೆ. ಎಂ.ಆರ್.ಸೀನು ಛಾಯಾಗ್ರಹಣ, ರವಿವರ್ಮ ಸಾಹಸ ನಿರ್ದೇಶನ, ಈಶ್ವರಿಕುಮಾರ್ ಕಲಾನಿರ್ದೇಶನವಿರುವ 'ಖತರ್ನಾಕ್' ಚಿತ್ರಕ್ಕೆ ಮಲ್ಲಿಕಾರ್ಜುನ್ ಅವರ ಸಹ ನಿರ್ದೇಶನವಿದೆ.
ರವಿಕಾಳೆ, ರವಿವರ್ಮ, ರೂಪಿಕಾ, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಮುರಳಿಮೋಹನ್, ತುಳಸಿಶಿವಮಣಿ, ರವೀಂದ್ರನಾಥ್, ತುಮಕೂರು ಮೋಹನ್, ಶೋಭಾರಾಘವೇಂದ್ರ, ಶೋಭಿನಾ, ಲೀನಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ರೂಪಿಕಾ 'ಖತರ್ನಾಕ್' ಚಿತ್ರಗಳು ಸ್ಲೈಡ್ ಗಳಲ್ಲಿ...

ಖತರ್ನಾಕ್ ಚಿತ್ರದಲ್ಲಿ ತಮ್ಮದು ಗಂಭೀರ ಪಾತ್ರ
ಖತರ್ನಾಕ್ ಚಿತ್ರದಲ್ಲಿ ತಮ್ಮದು ಗಂಭೀರ ಪಾತ್ರ. ಆದರೆ ಅದು ನೈಜ ಪಾತ್ರವಲ್ಲ ಕಾಲ್ಪನಿಕವಾಗಿ ಮೂಡಿಬರುತ್ತದೆ.

ಎಲ್ಲೂ ಅಶ್ಲೀಲತೆ ಕಾಣಿಸುವುದಿಲ್ಲ
ತಮ್ಮ ಪಾತ್ರದಲ್ಲಿ ಗ್ಲಾಮರ್ ಇದೆ, ಆದರೆ ಅಶ್ಲೀಲತೆ ಇರುವುದಿಲ್ಲ ಎನ್ನುತ್ತಾರೆ ರೂಪಿಕಾ.

ಇದು ಮರೆಯಲಾಗದ ಪಾತ್ರ ಎನ್ನುತ್ತಾರೆ
ತಮ್ಮ ವೃತ್ತಿಜೀವನದಲ್ಲಿ ಮರೆಯಲಾಗದ ಪಾತ್ರ ಇದು ಎನ್ನುವ ರೂಪಿಕಾ ಅವರು ಭರತನಾಟ್ಯ ಕಲಾವಿದೆಯೂ ಹೌದು.

ಚಿತ್ರದಲ್ಲಿ ಸಂದೇಶವೂ ಉಂಟಂತೆ
ರೂಪಿಕಾ ಅವರು ಇತ್ತೀಚೆಗಷ್ಟೇ ತಮ್ಮ 19ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸಮಾಜದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟುವಲ್ಲಿ ನನ್ನ ಪಾತ್ರ ಮಹತ್ವದ್ದಾಗಿದೆ. ಚಿತ್ರದಲ್ಲಿ ಸಂದೇಶವೂ ಉಂಟು ಎನ್ನುತ್ತಾರೆ ರೂಪಿಕಾ.

ಚಿತ್ರದಲ್ಲಿ ಶೋಭಿನಾ ಎಂಬ ಮತ್ತೊಬ್ಬ ಬೆಡಗಿ
ಈ ಚಿತ್ರದಲ್ಲಿ ಉಮೇಶ್ ರೆಡ್ಡಿ ಪಾತ್ರವನ್ನು ಪ್ರತಿಭಾನ್ವಿತ ನಟ ರವಿ ಕಾಳೆ ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮತ್ತೊಬ್ಬ ಬೆಡಗಿಯ ಹೆಸರು ಶೋಭಿನಾ.