»   » ಹೋಮ್ ಸ್ಟೇ ಸಮಸ್ಯೆಯಲ್ಲಿ ಎವರ್ಗ್ರೀನ್ ನಟಿ ಶ್ರುತಿ

ಹೋಮ್ ಸ್ಟೇ ಸಮಸ್ಯೆಯಲ್ಲಿ ಎವರ್ಗ್ರೀನ್ ನಟಿ ಶ್ರುತಿ

By: ಜೀವನರಸಿಕ
Subscribe to Filmibeat Kannada

ಕನ್ನಡದ ಎವರ್ಗ್ರೀನ್ ನಟಿ ಶ್ರುತಿ ಈಗ ಹೋಮ್ ಸ್ಟೇ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಹೀಗೊಂದು ಲೈನ್ ಕೇಳಿದ್ರೆ ನಿಮ್ಗೆ ಒಂದು ಕಡೆ ಶಾಕ್ ಮತ್ತೊಂದು ಕಡೆ ಅಚ್ಚರಿ ಎರಡೂ ಆಗಬಹುದು. ಈ ಮಾತು ಕೇಳಿದ್ರೆ ನಿಮ್ಗೆ ಮತ್ತೊಂದು ಶಾಕ್ ಆಗೋದು ಖಂಡಿತ.

ಕಾರಣ ಗೊತ್ತೇ ಇದೆ ಯಾವಾಗ್ಲೂ ಶ್ರುತಿ ಒಂದಿಲ್ಲೊಂದು ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ತಾನೇ ಇರ್ತಾರೆ. ಆದರೆ ಇಲ್ಲಿ ಶ್ರುತಿಗೆ ತೊಂದರೆಯಾಗಿಲ್ಲ. ಶ್ರುತಿಯೇ ತೊಂದರೆಯಾಗಿದ್ದಾರೆ. ಹೌದು ಇದು ಕನ್ನಡ ಸೇರಿದಂತೆ ಹಿಂದಿ, ತಮಿಳು ಭಾಷೆಗಳಲ್ಲಿ ಬರ್ತಿರೋ ಸಿನಿಮಾ.


'ಹೋಮ್ ಸ್ಟೇ' ಅನ್ನೋ ಸಿನಿಮಾದಲ್ಲಿ ಶ್ರುತಿ ದೆವ್ವವಾಗಿ ಕಾಡಲಿದ್ದಾರೆ. ಅದರಲ್ಲೂ ಮುಖ್ಯ ಪಾತ್ರಧಾರಿಯಾಗಿರೋ ಶ್ರುತಿ ದೆವ್ವವಾಗಿ ಗಟ್ಟಿ ಗುಂಡಿಗೆ ಇರೋರಿಗೂ ಒಂದು ಸಾರಿ ಭಯ ಹುಟ್ಟಿಸ್ತಾರಂತೆ. ಈ ಹಿಂದೆ ಒಮ್ಮೆ ಮಾತ್ರ ದೆವ್ವವಾಗಿ ಕನ್ನಡದಲ್ಲಿ ಭಯ ಹುಟ್ಟುಹಾಕಿದ್ದ ಶ್ರುತಿ ಈಗ ಮೂರುಭಾಷೆಗಳಲ್ಲಿ ಭಯಪಡಿಸೋಕೆ ರೆಡಿಯಾಗ್ತಿದ್ದಾರೆ. [ನನ್ನ ಹಣೆಬರಹ ಇದ್ದಂಗೆ ನಡೆಯಲಿ: ನಟಿ ಶ್ರುತಿ]

ಇಷ್ಟಕ್ಕೂ ಚಿತ್ರದ ಒನ್ ಲೈನ್ ಸ್ಟೋರಿ ಏನೆಂದರೆ, ಕೊಡಗಿನ 'ಹೋಮ್ ಸ್ಟೇ' ಒಂದರಲ್ಲಿ ನಡೆಯೋ ಈ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಸೈಲೆಂಟಾಗಿ ಶೂಟಿಂಗ್ ಮುಗಿಸಿದ್ದು ಸದ್ಯದಲ್ಲೇ ತೆರೆಗೆ ಬರಲಿದೆ. ಇಲ್ಲಿ ಸಂತೋಷದ ವಿಷಯ ಅಂದ್ರೆ ಎಲ್ಲ ಸಮಸ್ಯೆಗಳ ನಡುವೆ ಶ್ರುತಿ ಬಾಲಿವುಡ್ ನಲ್ಲಿ ಮಿಂಚೋಕೆ ರೆಡಿಯಾಗಿರೋದು.

ಸಂತೋಷ್ ಕೋಡಂಕೇರಿ ಆಕ್ಷನ್ ಕಟ್ ಹೇಳಿರುವ ಚಿತ್ರವನ್ನು ಸಿದ್ದು ಕೊನ್ನೂರು ನಿರ್ಮಿಸಿದ್ದಾರೆ. ಚಿತ್ರದಲ್ಲಿ ರವಿಕಾಳೆ ಸೇರಿದಂತೆ ಹಲವು ಕಲಾವಿದರಿದ್ದಾರೆ. ಈ ಸೈಕೋಲಾಜಿಕಲ್ ಥ್ರಿಲ್ಲರ್ ಸಿನಿಮಾ ಏನೆಲ್ಲಾ ಮಾಡುತ್ತದೋ ಕಾದುನೋಡೋಣ.

English summary
Kannada films evergreen actress Shruti debuts in Bollywood. The tri-lingual movie titled as Home Stay, which is said to be a psychological thriller, is based on an incident that happens in a home stay in Coorg when a girl was staying alone one night.
Please Wait while comments are loading...