For Quick Alerts
  ALLOW NOTIFICATIONS  
  For Daily Alerts

  ಶ್ರುತಿ ಜನ್ಮದಿನ: ವಿಶೇಷ ವಿಡಿಯೋ ಮೂಲಕ ಸಿನಿ ಗಣ್ಯರಿಂದ ಶುಭಾಶಯಗಳ ಮಹಾಪೂರ

  |

  ಸ್ಯಾಂಡಲ್ ವುಡ್ ನ ಹಿರಿಯ ನಟಿ ಶ್ರುತಿ ಅವರು ಇಂದು (ಸೆಪ್ಟಂಬರ್ 18) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಶ್ರುತಿ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿಂದ ಸಿನಿಮಾ ಗಣ್ಯರಿಂದ ಮತ್ತು ಸ್ನೇಹಿತರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

  3ದಶಕಗಳಿಗೂ ಅಧಿಕ ಕಾಲ ಸಿನಿಮಾರಂಗದಲ್ಲಿ ಸಕ್ರೀಯರಾಗಿರುವ ನಟಿ ಶ್ರುತಿ ಇಂದಿಗೂ ಬಹುಬೇಡಿಕೆಯ ನಟಿಯಾಗಿದ್ದಾರೆ. 1989ರಲ್ಲಿ ನಟಿ ಶ್ರುತಿ ಮಲಯಾಳಂ ಸಿನಿಮಾರಂಗದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಕನ್ನಡದಲ್ಲಿ ಆಸೆಗೊಬ್ಬ ಮೀಸೆಗೊಬ್ಬ ಸಿನಿಮಾ ಮೂಲಕ ಶ್ರುತಿ ನಾಯಕಿಯಾಗಿ 1990ರಲ್ಲಿ ಬೆಳ್ಳಿಪರದೆ ಮೇಲೆ ಮಿಂಚಿದರು. ಅಂದಹಾಗೆ ಶ್ರುತಿ ಅವರ ಮೂಲ ಹೆಸರು ಗಿರಿಜಾ. ಬಣ್ಣದ ಲೋಕಕ್ಕೆ ಗಿರಿಜಾ ಆಗಿ ಎಂಟ್ರಿ ಕೊಟ್ಟವರು ಬಳಿಕ ಶ್ರುತಿಯಾಗಿ ಪ್ರಸಿದ್ಧಿಗಳಿಸಿದರು.

  ಅಂದಹಾಗೆ ಶ್ರುತಿ ಎಂದು ನಾಮಕರಣ ಮಾಡಿದ್ದು ಹಿರಿಯ ನಿರ್ಮಾಪಕ, ನಟ ದ್ವಾರಕೀಶ್. ಅದೇ ಸಮಯದಲ್ಲಿ ಶ್ರುತಿ ಹೆಸರಿನಲ್ಲಿ ಸಿನಿಮಾವನ್ನು ಮಾಡಿದರು. ಈ ಸಿನಿಮಾ ಶ್ರುತಿ ವೃತ್ತಿ ಜೀವನಕ್ಕೆ ಮತ್ತಷ್ಟು ಮೈಲೇಜ್ ತಂದುಕೊಟ್ಟಿತು. ಬಳಿಕ ಶ್ರುತಿ ಹಿಂದಿ ತಿರುಗಿ ನೋಡಿದ್ದೆ ಇಲ್ಲ. ಅನೇಕ ಅದ್ಭುತ ಸಿನಿಮಾಗಳನ್ನು ನೀಡಿರುವ ಶ್ರುತಿ ಸ್ಯಾಂಡಲ್ ವುಡ್ ನ ಬಹುತೇಕ ಸ್ಟಾರ್ ನಟರ ಜೊತೆ ನಟಿಸಿದ್ದಾರೆ.


  ಇಂದಿಗೂ ಅದೇ ಬೇಡಿಕೆಯನ್ನು ಉಳಿಸಿಕೊಂಡಿರುವ ಶ್ರುತಿ ಭಜರಂಗಿ-2 ಮತ್ತು ರತ್ನನ್ ಪ್ರಪಂಚ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಅಂದಹಾಗೆ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಶ್ರುತಿ ತಿರುಪತಿಗೆ ಎಂಟ್ರಿ ಕೊಟ್ಟಿದ್ದಾರೆ. ಹುಟ್ಟುಹಬ್ಬದ ಕಾರಣ ನಟಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಕುಟುಂಬ ಸಮೇತ ಶ್ರುತಿ ತಿರುಪತಿಗೆ ಭೇಟಿ ನೀಡಿದ್ದಾರೆ.

  ನಟಿ ಶ್ರುತಿ ಇಬ್ಬರು ಅಮ್ಮಂದಿರು, ತಂದೆ ಮತ್ತು ಮಗಳು ಗೌರಿ ಜೊತೆ ಶ್ರುತಿ ತಿರುಪತಿಯಲ್ಲಿ ಕಾಲಕಳೆದಿದ್ದಾರೆ. ಈ ಬಗ್ಗೆ ಶ್ರುತಿ "ಜನುಮದಿನದಂದು ತಿರುಪತಿ ತಿಮ್ಮಪ್ಪನ ದರ್ಶನ, ಪ್ರತ್ಯಕ್ಷ ದೇವರಾದ ಹೆತ್ತವರ ಆಶೀರ್ವಾದ, ದೇವರವರದಂತ ಮಗಳು, ನೆನ್ನೆ ಇಂದಲೇ ಶುಭಕೋರಿದ ಅಭಿಮಾನಿಗಳು, ಅಚ್ಚರಿಯ ಶುಭಾಶಯ ಕಳಿಸಿದ ಸ್ನೇಹಿತರು, ಹಿತೈಷಿಗಳು. ನಾನೇ ಪುಣ್ಯವಂತಳು" ಎಂದು ಬರೆದುಕೊಂಡಿದ್ದಾರೆ.

  ಶ್ರುತಿ ಹುಟ್ಟುಹಬ್ಬಕ್ಕೆ ಮಗಳು ಗೌರಿ ಕೂಡ ವಿಶೇಷವಾಗಿ ಶುಭಕೋರಿದ್ದಾರೆ. ಇನ್ನು ವಿಶೇಷ ಎಂದರೆ ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಶ್ರುತಿ ಅವರಿಗೆ ಶುಭಾಶಯ ತಿಳಿಸಿದ್ದಾರೆ. ವಿಶೇಷ ವಿಡಿಯೋ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್, ವಾಸುಕಿ ವೈಭವ್, ತರುಣ್ ಸುಧೀರ್, ಶೈನ್ ಶೆಟ್ಟಿ, ಅನು ಪ್ರಭಾಕರ್, ಅನಿರುದ್ಧ ಸೇರಿದಂತೆ ಅನೇಕರು ವಿಶ್ ಮಾಡಿರುವ ವಿಡಿಯೋವನ್ನು ಶ್ರುತಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ಈ ವಿಡಿಯೋವನ್ನು ನಟಿ ಶ್ರುತಿ ಶೇರ್ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. "ಈ ಅದ್ಭುತ ಪದಗಳಿಗಾಗಿ ಪ್ರತಿಯೊಬ್ಬರಿಗೂ ಧನ್ಯವಾದಗಳು. ಎಲ್ಲರೂ ಸಮಯತೆಗೆದುಕೊಂಡು ವಿಶ್ ಮಾಡಿದ್ದೀರಿ. ದೇವರು ನಿಮ್ಮೆಲ್ಲರಿಗೂ ಒಳ್ಳೆದು ಮಾಡಲಿ ಎಂದು ಕೇಳಿಕೊಳ್ಳುತ್ತೇನೆ. ಪುಟ್ಟ ದೇವತೆ ನಂದಾಗೆ (ಅನುಪ್ರಭಾಕರ್ ಮಗಳು) ವಿಶೇಷ ಧನ್ಯವಾದ" ಎಂದು ಹೇಳಿದ್ದಾರೆ.

  English summary
  Kannada celebrities wish to Actress Shruthi on Birthday, video vial on Social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X