For Quick Alerts
  ALLOW NOTIFICATIONS  
  For Daily Alerts

  ಚಂದ್ರು ಚಾರ್ ಮಿನಾರ್ ಗೆ ಶತದಿನೋತ್ಸವ ಸಂಭ್ರಮ

  By Rajendra
  |

  ಈ ವರ್ಷದ ಮೊದಲ ಹಿಟ್ ಚಿತ್ರ ಎಂಬ ಗೌರವಕ್ಕೆ ಪಾತ್ರವಾಗಿದ್ದ 'ಚಾರ್ ಮಿನಾರ್' ಚಿತ್ರ ಸೆಂಚುರಿ ಬಾರಿಸಿದೆ. ನಿರ್ದೇಶಕ ಆರ್ ಚಂದ್ರು ಹೋಂ ಬ್ಯಾನರ್ ಚಿತ್ರ ಇದಾಗಿರುವುದು ವಿಶೇಷ. ಒಂದು ಕಡೆ ಶತಕ ಸಂಭ್ರಮ ಇನ್ನೊಂದು ಕಡೆ 'ಬ್ರಹ್ಮ' ಸೆಟ್ಟೇರಿದ ಸಂತಸ ಚಂದ್ರು ಅವರದು.

  ಚಂದ್ರು ನಿರ್ದೇಶಿಸಿರುವ 'ತಾಜ್ ಮಹಲ್' ಹಾಗೂ 'ಮೈಲಾರಿ' ಚಿತ್ರಗಳು ಸೆಂಚುರಿ ಬಾರಿಸಿದ್ದರು. ಆದರೆ 'ಕೋ ಕೋ' ಚಿತ್ರ ಮಾತ್ರ ನಿರೀಕ್ಷಿಸಿದ ಮಟ್ಟದಲ್ಲಿ ಸದ್ದು ಮಾಡಲಿಲ್ಲ. 'ಪ್ರೇಮ್ ಕಹಾನಿ' ಚಿತ್ರವಂತೂ ಚಂದ್ರು ವೃತ್ತಿಜೀವನದಲ್ಲಿ ಭಾರಿ ಹೊಡೆತ ನೀಡಿತು. (ಚಾರ್ ಮಿನಾರ್ ಚಿತ್ರ ವಿಮರ್ಶೆ)

  ಅದೇನೇ ಇರಲಿ ಚಂದ್ರು ಈಗ ಚಾರ್ ಮಿನಾರ್ ಮೂಲಕ ಮತ್ತೆ ಗೆಲುವಿನ ನಗೆ ಬೀರಿದ್ದಾರೆ. ರಾಜ್ಯದಾದ್ಯಂತ 'ಚಾರ್ ಮಿನಾರ್' ಚಿತ್ರ 25ಕ್ಕೂ ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಮೂಲಕ ಚಂದ್ರು ಅವರಿಗೆ ಹೊಸ ಹುಮ್ಮಸ್ಸು ತಂದಿದೆ.

  ಏತನ್ಮಧ್ಯೆ ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗಿನ 'ಬ್ರಹ್ಮ' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದಾದ ಬಳಿಕ ತೆಲುಗು ಚಾರ್ ಮಿನಾರ್ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಚಂದ್ರು. ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ನಿರ್ಮಿಸಲಿರುವ ಈ ಚಿತ್ರದ ಹೀರೋ ಅವರ ಪುತ್ರ ನಾಗ ಚೈತನ್ಯ. (ಏಜೆನ್ಸೀಸ್)

  English summary
  Director R Chandru's home banner film Charminar completes 100 days over 25 theatres in Karnataka. Earlier his films 'Taj Mahal and Mylaari' also completed 100 days. Ko Ko Koli Kothi was average hit but 'Prem Kahani' was a disaster in his career

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X