twitter
    For Quick Alerts
    ALLOW NOTIFICATIONS  
    For Daily Alerts

    'ಚಾರ್ ಮಿನಾರ್' ಮಿಸ್ ಮಾಡಿಕೊಳ್ಳುವ ಚಿತ್ರವಲ್ಲ

    By ಉಜ್ವಲ್ ಕಿರಣ್
    |

    Rating:
    3.0/5
    'ತಾಜ್ ಮಹಲ್' ಚಂದ್ರು ಇನ್ನು ಮುಂದೆ 'ಚಾರ್ ಮಿನಾರ್' ಚಂದ್ರು ಆಗಿ ಬದಲಾಗುವ ಎಲ್ಲ ಸೂಚನೆಗಳನ್ನೂ ಈ ಚಿತ್ರದ ಮೂಲಕ ಕೊಟ್ಟಿದ್ದಾರೆ. ಅಷ್ಟರಮಟ್ಟಿಗೆ ಅವರ ಚಿತ್ರ ಪರಿಣಾಮಕಾರಿಯಾಗಿದೆ. ಚಂದ್ರು ಭಾವನೆಗಳ ಜೊತೆ ಕೋಕೋ ಆಡಿದ್ದಾರೆ. ಡೈಲಾಗ್ ನಲ್ಲೇ ಡಿಕ್ಕಿ ಹೊಡೆಯುತ್ತಾರೆ. ಹಾಡುಗಳಲ್ಲೇ ಮೈಮರೆಸುತ್ತಾರೆ...

    ಚಿತ್ರದ ಉದ್ದಕ್ಕೂ ಚಂದ್ರು ಅವರ ಚಮತ್ಕಾರ ಎದ್ದುಕಾಣುತ್ತದೆ. ಅಲ್ಲಲ್ಲಿ ಕಥೆಯನ್ನು ಒಂಚೂರು ಎಳೆದಂತೆ ಭಾಸವಾದರೂ ಎಲ್ಲೂ ಬೋರಾಗದಂತೆ ನೋಡಿಕೊಂಡಿದ್ದಾರೆ. ಚಿತ್ರಕಥೆ ಮೇಲಿನ ಅವರ ಬಿಗಿ ಹಿಡಿತ ಎಲ್ಲೂ ಪಟ್ಟುತಪ್ಪದಂತೆ ನೋಡಿಕೊಂಡಿರುವುದು ಇನ್ನೊಂದು ವಿಶೇಷ.

    ಈ ಬಾರಿ ಅವರು ಹಳ್ಳಿಗಾಡಿನ ಚಿತ್ರಣವನ್ನು ಚೊಕ್ಕಟವಾಗಿ ಕಟ್ಟಿಕೊಟ್ಟಿದ್ದಾರೆ. ಇದರ ಜೊತೆಗೆ ಭಾವನಾತ್ಮಕ ಅಂಶಗಳು, ಮನಸ್ಸಿಗೆ ಆಪ್ತವೆನಿಸುವ ಸಂಭಾಷಣೆ, ಕಣ್ಮನ ತಣಿಸುವ ಹಾಡುಗಳು ಚಿತ್ರದ ಸೊಗಸನ್ನು ಮತ್ತಷ್ಟು ಹೆಚ್ಚಿಸಿವೆ.

    'ಚಾರ್ ಮಿನಾರ್' ಮಿಸ್ ಮಾಡಿಕೊಳ್ಳುವ ಚಿತ್ರವಲ್ಲ

    'ಚಾರ್ ಮಿನಾರ್' ಮಿಸ್ ಮಾಡಿಕೊಳ್ಳುವ ಚಿತ್ರವಲ್ಲ

    ಚಿತ್ರ ಬಿಡುಗಡೆಗೂ ಮುನ್ನ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡುವುದರಲ್ಲಿ ಆರ್ ಚಂದ್ರು ಅವರದು ಎತ್ತಿದ ಕೈ. ಈ ಬಾರಿಯೂ ಅವರು 'ಚಾರ್ ಮಿನಾರ್' ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಮಾತನಾಡಿದ್ದರು. ಚಿತ್ರವನ್ನು ನೋಡಿದರೆ ಅವರ ಪ್ರಯತ್ನಕ್ಕೆ ಭೇಷ್ ಹೇಳಲೇ ಬೇಕು.

    'ಚಾರ್ ಮಿನಾರ್' ಮಿಸ್ ಮಾಡಿಕೊಳ್ಳುವ ಚಿತ್ರವಲ್ಲ

    'ಚಾರ್ ಮಿನಾರ್' ಮಿಸ್ ಮಾಡಿಕೊಳ್ಳುವ ಚಿತ್ರವಲ್ಲ

    ಸ್ಪೀಡ್ ಆಗಿ ಸಾಗುತ್ತಿರುವ ವಾಹನಕ್ಕೆ ದಿಢೀರ್ ಎಂದು ಹಳ್ಳ ಎದುರಾದಂತೆ ಕೆಲವೊಂದು ಸನ್ನಿವೇಶಗಳು ಚಿತ್ರದಲ್ಲಿ ಬರುತ್ತವೆ. ಅವಕ್ಕೆ ಕತ್ತರಿ ಹಾಕಿದ್ದರೆ ಚಿತ್ರ ಇನ್ನಷ್ಟು ಸೊಗಸಾಗಿ ಸಾಗಿಹೋಗುತ್ತಿತ್ತು. ಆದರೂ ಚಿತ್ರದಲ್ಲಿನ ಭಾವನಾತ್ಮಕ ಎಳೆಗಳು ಇವೆಲ್ಲವನ್ನೂ ಮರೆಸುತ್ತವೆ.

    'ಚಾರ್ ಮಿನಾರ್' ಮಿಸ್ ಮಾಡಿಕೊಳ್ಳುವ ಚಿತ್ರವಲ್ಲ

    'ಚಾರ್ ಮಿನಾರ್' ಮಿಸ್ ಮಾಡಿಕೊಳ್ಳುವ ಚಿತ್ರವಲ್ಲ

    ಆಕ್ಷನ್, ಕಾಮಿಡಿ, ಸಸ್ಪೆನ್ಸ್ ಚಿತ್ರಗಳಿಗೆ ಹೋಲಿಸಿದರೆ ಚಂದ್ರು ಇಲ್ಲಿ ತಮ್ಮ ತನವನ್ನು ಉಳಿಸಿಕೊಂಡಿದ್ದಾರೆ. ಚಿತ್ರ ನಿಧಾನವಾಗಿ ಸಾಗಿದಂತೆ ಅನ್ನಿಸಿದರೂ ಸಂಭಾಷಣೆ ಹಾಗೂ ಕಲಾವಿದರ ಪಾತ್ರಪೋಷಣೆ ನಡುವೆ ಇವೆಲ್ಲವೂ ಗಮನಕ್ಕೆ ಬರುವುದಿಲ್ಲ. ಚಂದ್ರು ಅವರ ಸಂಭಾಷಣೆ ಗಮನಸೆಳೆಯುತ್ತದೆ.

    'ಚಾರ್ ಮಿನಾರ್' ಮಿಸ್ ಮಾಡಿಕೊಳ್ಳುವ ಚಿತ್ರವಲ್ಲ

    'ಚಾರ್ ಮಿನಾರ್' ಮಿಸ್ ಮಾಡಿಕೊಳ್ಳುವ ಚಿತ್ರವಲ್ಲ

    ಸುರೇಶ್ ಮಂಗಳೂರು ಹಾಗೂ ಪ್ರೇಮ್ ನಡುವಿನ ಕೆಲವೊಂದು ಭಾವನಾತ್ಮಕ ಸನ್ನಿವೇಶಗಳು ಕಣ್ಣು ಮಂಜಾಗುವಂತೆ ಮಾಡಿದರೂ ಅಚ್ಚರಿಪಡಬೇಕಿಲ್ಲ. ಇದಕ್ಕೆ ಚಂದ್ರಶೇಖರ್ ಅವರ ಛಾಯಾಗ್ರಹಣ, ಹರಿ ಅವರ ಸಂಗೀತ ಹಾಗೂ ಗುರುಕಿರಣ್ ಅವರ ಹಿನ್ನೆಲೆ ಸಂಗೀತ ತಾಳಕ್ಕೆ ಮೇಳವಾಗುತ್ತದೆ.

    'ಚಾರ್ ಮಿನಾರ್' ಮಿಸ್ ಮಾಡಿಕೊಳ್ಳುವ ಚಿತ್ರವಲ್ಲ

    'ಚಾರ್ ಮಿನಾರ್' ಮಿಸ್ ಮಾಡಿಕೊಳ್ಳುವ ಚಿತ್ರವಲ್ಲ

    ಎಬಿಸಿಡಿ ಮೋಹನ್ ಪಾತ್ರಕ್ಕೆ ಪ್ರೇಮ್ ಅವರ ಪ್ರಾಮಾಣಿಕ ಪ್ರಯತ್ನ ಫಲಿಸಿದೆ. ದಡ್ಡ ವಿದ್ಯಾರ್ಥಿಯಾಗಿದ್ದ ಮೋಹನ್ ಅಮೆರಿಕಾ ಕಂಪನಿಯೊಂದರ ಸಿಇಓ ಆಗುವ ತನಕ ಅವರ ಪಾತ್ರದ ಏರಿಳಿತಗಳು ಪ್ರೇಕ್ಷಕರನ್ನು ಸೀಟಿಗೆ ಅಂಟಿ ಕೂರುವಂತೆ ಮಾಡುತ್ತವೆ. ಈ ಪಾತ್ರಕ್ಕಾಗಿ ಪ್ರೇಮ್ ಸಾಕಷ್ಟು ಬೆವರರಿಸಿರುವುದು ಎದ್ದು ಕಾಣುವ ಸಂಗತಿ.

    'ಚಾರ್ ಮಿನಾರ್' ಮಿಸ್ ಮಾಡಿಕೊಳ್ಳುವ ಚಿತ್ರವಲ್ಲ

    'ಚಾರ್ ಮಿನಾರ್' ಮಿಸ್ ಮಾಡಿಕೊಳ್ಳುವ ಚಿತ್ರವಲ್ಲ

    ಚಿತ್ರದ ನಾಯಕಿ ಮೇಘನಾ ಗಾಂವ್ಕರ್ ಕಣ್ಣುಗಳಲ್ಲೇ ಚೆಲ್ಲಾಟವಾಡುತ್ತಾರೆ. ಚಿತ್ರದಲ್ಲಿ ಅವರ ಕಣ್ಣುಗಳೇ ಪ್ರಮುಖ ಆಕರ್ಷಣೆ. ವೊಲ್ಟೇಜ್ ಗೆ ತಕ್ಕಂತೆ ಬದಲಾಗುವ ಬಲ್ಪ್ ಕಾಂತಿಯಂತೆ ಮೇಘನಾ ಕಣ್ಣುಗಳಲ್ಲೂ ಅದೇ ರೀತಿಯ ವೋಲ್ಟೇಜ್ ಇದೆ. ಮಿಸ್ ಮಾಡಿಕೊಳ್ಳುವ ಚಿತ್ರವಂತೂ ಅಲ್ಲ. ಹೋಗಿ ನೋಡಿ.

    English summary
    Kannada film Charminar review. The movie has a universal subject but Chandru takes it nearer to your heart by a strong package of nativity, emotions, and fantastic songs. Don't miss it to watch.
    Friday, April 26, 2013, 17:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X