For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ಸೂಪರ್ ಸ್ಟಾರ್‌ಗೆ ನಂದ ಕಿಶೋರ್ ಡೈರೆಕ್ಷನ್!

  |

  ಕನ್ನಡದ ನಿರ್ದೇಶಕರಿಗೆ ಪರಭಾಷೆಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಇಲ್ಲಿನ ತಂತ್ರಜ್ಞರು, ಕಲಾವಿದರಿಗೂ ಕೂಡ ಬೇಡಿಕೆ ಹೆಚ್ಚುತ್ತಿದೆ. ಕೆಜಿಎಫ್ ಸಿನಿಮಾದ ಬಳಿಕ, ನಿರ್ದೇಶಕ ಪ್ರಶಾಂತ್ ನೀಲ್ ಈಗ ಟಾಲಿವುಡ್‌ನಲ್ಲಿ ಸಿಕ್ಕಾ ಪಟ್ಟೆ ಬ್ಯುಸಿಯಾಗಿದ್ದಾರೆ. ಈಗ ನಿರ್ದೇಶಕ ನಂದಕಿಶೋರ್ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ.

  ನಿರ್ದೇಶಕ ನಂದ ಕಿಶೋರ್, ವಿಕ್ಟರಿ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ, ಸದ್ದು ಮಾಡಿ ಗಮನ ಸೆಳೆದರು. ಬಳಿಕ ಸಾಲು, ಸಾಲು ಸಿನಿಮಾಗಳನ್ನು ಮಾಡಿದ್ದಾರೆ. 'ಅಧ್ಯಕ್ಷ', 'ರನ್ನ', 'ಮುಕುಂದ ಮುರಾರಿ' ಸೇರಿದಂತೆ ಹಲವು ಚಿತ್ರಗಳನ್ನು ಮಾಡಿದ್ದಾರೆ.

  ಕಿಚ್ಚ ಸುದೀಪ್ ರಮ್ಮಿ ವಿವಾದ: ನಂದಕಿಶೋರ್‌ಗೆ ಯುವಕ ತಿರುಗೇಟು!ಕಿಚ್ಚ ಸುದೀಪ್ ರಮ್ಮಿ ವಿವಾದ: ನಂದಕಿಶೋರ್‌ಗೆ ಯುವಕ ತಿರುಗೇಟು!

  ಸದ್ಯ ಶ್ರೇಯಸ್ ಮಂಜು ಮತ್ತು ರೀಷ್ಮಾ ನಾಣಯ್ಯ ಅಭಿನಯದ 'ರಾಣಾ' ಚಿತ್ರದಲ್ಲಿ ನಂದ ಕಿಶೋರ್ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಹಲವು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈಗ ಮಲಯಾಳಂಗೆ ಎಂಟ್ರಿ ಕೊಡ್ತಿದ್ದು, ಸ್ಟಾರ್ ನಟನ ಸಿನಿಮಾ ಮಾಡಲಿದ್ದಾರೆ.

  'ಮೋಹನ್ ಲಾಲ್‌'ಗೆ ನಂದ ಕಿಶೋರ್ ಡೈರೆಕ್ಷನ್!

  'ಮೋಹನ್ ಲಾಲ್‌'ಗೆ ನಂದ ಕಿಶೋರ್ ಡೈರೆಕ್ಷನ್!

  ಕನ್ನಡದಲ್ಲಿ ಸಾಕಷ್ಟು ಹೆಸರಾಂತ ಸಿನಿಮಾಗಳನ್ನು ಕೊಟ್ಟ ಚಲನಚಿತ್ರ ನಿರ್ದೇಶಕ ನಂದ ಕಿಶೋರ್ ಇದೀಗ ದೊಡ್ಡ ಮಟ್ಟದ ಬಹುಭಾಷಾ ಚಿತ್ರವೊಂದಕ್ಕೆ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಮೋಹನ್ ಲಾಲ್ ನಟಿಸಲಿದ್ದಾರೆ. ಈ ಮೂಲಕ ಕನ್ನಡದ ಮತ್ತೊಬ್ಬ ನಿರ್ದೇಶಕ ನಂದ ಕಿಶೋರ್ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶನ ಮಾಡಿದವರ ಪಟ್ಟಿಗೆ ಸೇರಿದ್ದಾರೆ.

  ನಟ ಸುದೀಪ್ ಬಗ್ಗೆ ಅವಹೇಳನಕಾರಿ ಕಮೆಂಟ್: ಆಕ್ರೋಶಗೊಂಡ ನಿರ್ದೇಶಕ ನಂದ ಕಿಶೋರ್!ನಟ ಸುದೀಪ್ ಬಗ್ಗೆ ಅವಹೇಳನಕಾರಿ ಕಮೆಂಟ್: ಆಕ್ರೋಶಗೊಂಡ ನಿರ್ದೇಶಕ ನಂದ ಕಿಶೋರ್!

  ಟ್ವೀಟ್ ಮಾಡಿದ ಮೋಹನ್ ಲಾಲ್!

  ಟ್ವೀಟ್ ಮಾಡಿದ ಮೋಹನ್ ಲಾಲ್!

  ಈ ವಿಚಾರದ ಬಗ್ಗೆ ನಟ ಮೋಹಲ್ ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ. "ನಾನು 'ವೃಷಭ' ಚಿತ್ರಕ್ಕೆ ಸಹಿ ಹಾಕಲು ಕಾತರನಾಗಿದ್ದೇನೆ. ಇದು AVS ಸ್ಟುಡಿಯೋಸ್ ನಿರ್ಮಾಣದ ಮೊದಲ ಸಿನಿಮಾ ಆಗಿದೆ. ಈ ಚಿತ್ರವನ್ನು ನಂದ ಕಿಶೋರ್ ನಿರ್ದೇಶನ ಮಾಡುತ್ತಿದ್ದಾರೆ. ಅಭಿಷೇಕ್ ವ್ಯಾಸ್, ಪ್ರವೀಣ್ ಸಿಂಗ್ ಮತ್ತು ಶ್ಯಾಮ್ ಸುಂದರ್ ಬಂಡವಾಳ ಹೂಡುತ್ತಿದ್ದಾರೆ. ಈ ಬಹುಭಾಷಾ ಸಿನಿಮಾ ಆಕ್ಷನ್ ಮತ್ತು ಭಾವನೆಗಳಿಂದ ತುಂಬಿದೆ. ನಿಮ್ಮೆಲ್ಲರ ಬೆಂಬಲ, ಆಶೀರ್ವಾದವನ್ನು ನಾನು ಕೋರುತ್ತೇನೆ" ಎಂದು ಮೋಹನ್ ಲಾಲ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

  ನಂದಕಿಶೋರ್ ಮಾತು!

  ನಂದಕಿಶೋರ್ ಮಾತು!

  ಈ ಸುದ್ದಿಯ ಬಗ್ಗೆ ಸಿನಿಮಾ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿದ ನಿರ್ದೇಶಕ ನಂದ ಕಿರೋಶ್, "ಹೌದು, ನಾನು ಮಲಯಾಳಂ ಸೂಪರ್‌ ಸ್ಟಾರ್‌ಗಾಗಿ ಸಿನಿಮಾ ಒಂದನ್ನು ಮಾಡುತ್ತಿದ್ದೇನೆ. ಇದೊಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾ ಆಗಲಿದೆ. ಈ ಚಿತ್ರದಲ್ಲಿ ನಾಯಕ ನಟ ಹಲವು ಆಯಾಮಗಳಿರುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ" ಎಂದು ಹೇಳಿಕೊಂಡಿದ್ದಾರೆ ನಂದ ಕಿಶೋರ್.

  2023ರಲ್ಲಿ ಸಿನಿಮಾ ಶುರು!

  2023ರಲ್ಲಿ ಸಿನಿಮಾ ಶುರು!

  ವರದಿಯ ಪ್ರಕಾರ, ಈ ಚಿತ್ರದಲ್ಲಿ ತೆಲುಗಿನ ದೊಡ್ಡ ಸ್ಟಾರ್ ಒಬ್ಬರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ. ಈ ಚಿತ್ರದ ಶೂಟಿಂಗ್ ಜುಲೈ 2023ರಲ್ಲಿ ಪ್ರಾರಂಭವಾಗಲಿದೆ. ಹಲವು ಹಂತಗಳಲ್ಲಿ ಸಿನಿಮಾ ಶೂಟಿಂಗ್ ನಡೆಸಲು ಸಿನಿಮಾತಂಡ ಯೋಜನೆ ರೂಪಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಹೊರ ಬಿಡಲಿದೆ ಸಿನಿಮಾ ತಂಡ.

  English summary
  Kannada Director Nanda Kishor To Direct Malayalam Super Star Mohanlal, Know More,
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X