ನಾಲಗೆ ಸೀಳ್ಸಿ ನರಕಕ್ಕೆ ಕಳಿಸಬೇಕು...ಆ ಅತ್ಯಾಚಾರಿಗಳನ್ನು..

ಉತ್ತರ ಪ್ರದೇಶದ ಹತ್ರಾಸ್‌ದಲ್ಲಿ ನಡೆದ ಅತ್ಯಾಚಾರಕ್ಕೆ ದೇಶವ್ಯಾಪಿ ಖಂಡನೆ ವ್ಯಕ್ತವಾಗುತ್ತಿದೆ. ಅತ್ಯಾಚಾರಿಗಳನ್ನು ನಡುಬೀದಿಯಲ್ಲಿ ಗಲ್ಲಿಗೇರಿಸಬೇಕೆಂದು ಅನೇಕರು ಒತ್ತಾಯ ಮಾಡುತ್ತಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಕನ್ನಡ ಚಲನಚಿತ್ರ ನಿರ್ದೇಶಕ ಸಿಂಪಲ್ ಸುನಿ ಸಹ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ''ನಾಲಗೆ ಸೀಳ್ಸಿ ನರಕಕ್ಕೆ ಕಳಿಸಬೇಕು...ಆ ಅತ್ಯಾಚಾರಿಗಳನ್ನು..'' ಎಂದು ಖಂಡಿಸಿದ್ದಾರೆ.

ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ 19 ವರ್ಷದ ಹುಡುಗಿಯ ಮೇಲೆ ದುಷ್ಕರ್ಮಿಗಳು ಗುಂಪು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ವರದಿಯಾಗಿದೆ. ಸೆಪ್ಟೆಂಬರ್ 14 ರಂದು ಈ ಘಟನೆ ಸಂಭವಿಸಿತ್ತು. ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹುಡುಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

Kannada Director Simple Suni React On Hathras Gang Rape

ಸೆಪ್ಟೆಂಬರ್ 29 ರಂದು ಬೆಳಗ್ಗೆ 6 ಗಂಟೆಗೆ ಸಂತ್ರಸ್ಥ ಮಹಿಳೆ ಮೃತಪಟ್ಟಿರುವುದನ್ನು ಸಹೋದರ ಖಚಿತಪಡಿಸಿದ್ದು, ''ನಮಗೆ ನ್ಯಾಯ ಬೇಕು. ಆರೋಪಿಗಳಿಗೆ ಶಿಕ್ಷಯಾಗಬೇಕು. ಅವರನ್ನು ಗಲ್ಲಿಗೇರಿಸಬೇಕು'' ಎಂದು ಒತ್ತಾಯಿಸಿದ್ದಾರೆ.

ಇನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ಸಹ ಈ ಘಟನೆಯನ್ನು ಖಂಡಿಸಿದ್ದು, ''ಅತ್ಯಾಚಾರಿಗಳನ್ನು ನಡುಬೀದಿಯಲ್ಲಿ ಗುಂಡಕ್ಕಿ ಕೊಲ್ಲಬೇಕು'' ಎಂದು ಕಿಡಿಕಾರಿದ್ದರು.

Recommended Video

ರಾಗಿಣಿ, ಸಂಜನಾ ಮೊಬೈಲ್ ನಿಂದ ಬಯಲಾಯ್ತು ಸ್ಪೋಟಕ ಮಾಹಿತಿ..? | Filmibeat Kannada

More from Filmibeat

English summary
Kannada director Simple suni condemns on Hathras gang rape. A 19-year-old woman who was raped and assaulted in Uttar Pradesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X