For Quick Alerts
  ALLOW NOTIFICATIONS  
  For Daily Alerts

  ಈ ಕನ್ನಡ ಮಣ್ಣನು ಮರಿಬೇಡ ಓ... ಅಭಿಮಾನಿ

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನವೆಂಬರ್ 1ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕನ್ನಡ ಬಾವುಟವನ್ನು ಹಾರಿಸುವ ಮೂಲಕ ರಾಜ್ಯೋತ್ಸವಕ್ಕೆ ಚಾಲನೆ ನೀಡಿದರು. ವಜ್ರೇಶ್ವರಿ ಕುಮಾರ್ ಅವರ ಜೊತೆಗೆ ಪುನೀತ್ ಅವರು ಇಂದು ಬೆಳಗ್ಗೆ ಸಮಯಕ್ಕೆ ಸರಿಯಾಗಿ ಆಗಮಿಸಿದರು.

  ಈ ಸಂದರ್ಭದಲ್ಲಿ ಕೆಎಫ್ ಸಿಸಿ ನೂತನ ಅಧ್ಯಕ್ಷ ಎಚ್ ಡಿ ಗಂಗರಾಜು, ಸಾ.ರಾ.ಗೋವಿಂದು, ಥಾಮಸ್ ಡಿಸೋಜಾ, ಡಿಆರ್ ಜಯರಾಜ್, ಎನ್ಎಂ ಸುರೇಶ್, ಬಿ ಮಹದೇವ್, ಡಾ.ಜಯಮಾಲಾ, ಬಿ.ವಿಜಯಕುಮಾರ್, ಕೆಎಂ ವೀರೇಶ್, ನಾಗಣ್ಣ ಮುಂತಾದವರಿದ್ದರು.

  ಇದೇ ಸಂದರ್ಭದಲ್ಲಿ ತಾಯಿ ಭುವನೇಶ್ವರಿ ಅವರ ಚಿತ್ರಪಟಕ್ಕೆ ಜ್ಯೋತಿ ಬೆಳಗಿ ಪೂಜಿಸಲಾಯಿತು. ಬಹಳ ಸಮಯದ ಬಳಿಕ ಕನ್ನಡ ಚಿತ್ರೋದ್ಯಮದ ಗಣ್ಯರು ಒಂದೆಡೆ ಸೇರುವಂತಾಯಿತು. ಎಲ್ಲರೂ ತಾಯಿ ಭುವನೇಶ್ವರಿ ಕೃಪಾಕಟಾಕ್ಷಕ್ಕೆ ಪಾತ್ರರಾದರು.

  ಈ ವರ್ಷ ಇನ್ನಷ್ಟು ಕನ್ನಡ ಚಿತ್ರಗಳು ನಿರ್ಮಾಣವಾಗಲಿ, ಕನ್ನಡ ಚಿತ್ರೋದ್ಯಮ ಬೆಳಗಲಿ, ಮತ್ತಷ್ಟು ಎತ್ತರಕ್ಕೆ ಏರಲಿ, ಸದಭಿರುಚಿಯ ಚಿತ್ರಗಳು ನಿರ್ಮಾಣವಾಗಲಿ ಎಂಬುದು ಎಲ್ಲ ಕನ್ನಡ ಚಿತ್ರಪ್ರೇಮಿಗಳ ಆಶಯ. ಏರಲಿ ಹಾರಲಿ ನಮ್ಮ ಕನ್ನಡ ಬಾವುಟ. ಒನ್ಇಂಡಿಯಾ ಕನ್ನಡದ ಓದುಗರೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಾಗಳು. ಈ ಕನ್ನಡ ಮಣ್ಣನು ಮರಿಬೇಡ ಓ... ಅಭಿಮಾನಿ. (ಒನ್ಇಂಡಿಯಾ ಕನ್ನಡ)

  English summary
  Kannada film industry celebrates 58th Kannada Rajyotsava on 1st November at KFCC. Power star Puneeth Rajkumar hoisted the Kannada flag at Karnataka Film Chamber of Commerce. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X