For Quick Alerts
  ALLOW NOTIFICATIONS  
  For Daily Alerts

  ಮುಂದುವರೆದ 'ಕಟ್ಟಪ್ಪ'ನ ವಿವಾದ: ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳು ಬ್ಯಾನ್!

  By Bharath Kumar
  |

  ತಮಿಳು ನಟ ಸತ್ಯರಾಜ್ ಕನ್ನಡಿಗರಿಗೆ ವಿಷಾದ ವ್ಯಕ್ತಪಡಿಸಿದ ನಂತರ ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

  ನಿನ್ನೆ (ಏಪ್ರಿಲ್ 21) ಮಧ್ಯಾಹ್ನದ ಹೊತ್ತಿಗೆ ತಮಿಳು ನಟ ಸತ್ಯರಾಜ್ ವಿಡಿಯೋ ಮೂಲಕ ಕನ್ನಡಿಗರಿಗೆ ಆದ ನೋವಿಗೆ ವಿಷಾದ ವ್ಯಕ್ತಪಡಿಸಿದ್ದರು. 9 ವರ್ಷಗಳ ಹಿಂದೆ ತಾನು ಮಾಡಿದ್ದ ಆಕ್ರೋಶದ ಭಾಷಣದಲ್ಲಿ ಕರ್ನಾಟಕವನ್ನ ಮತ್ತು ಕನ್ನಡ ಹೋರಾಟಗಾರರ ಬಗ್ಗೆ ಕೀಳಾಗಿ ಮಾತನಾಡಿದ್ದರು. ಅದನ್ನ ಪ್ರತಿಭಟಿಸಿ ಸತ್ಯರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ 'ಬಾಹುಬಲಿ-2 'ಚಿತ್ರವನ್ನ ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ವಿರೋಧಿಸಿದ್ದರು.[ಕನ್ನಡಿಗರನ್ನ ಉದ್ದೇಶಿಸಿ ಸತ್ಯರಾಜ್ ಮಾಡಿದ ತಮಿಳು ಭಾಷಣದಲ್ಲಿ ಏನಿದೆ.?]

  ಈ ಹಿನ್ನಲೆಯಲ್ಲಿ ಸತ್ಯರಾಜ್ ಕನ್ನಡಿಗರಿಗೆ ವಿಷಾದ ವ್ಯಕ್ತಪಡಿಸಿ, 'ಬಾಹುಬಲಿ-2' ಚಿತ್ರವನ್ನ ಬಿಡುಗಡೆ ಮಾಡುವಂತೆ ಮನವಿಮಾಡಿಕೊಂಡಿದ್ದರು. ಸತ್ಯರಾಜ್ ಕನ್ನಡಿಗರಿಗೆ ವಿಷಾದ ವ್ಯಕ್ತಪಡಿಸಿರುವ ಹಿನ್ನಲೆ ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನವನ್ನ ರದ್ದು ಮಾಡಲಾಗಿದೆಯಂತೆ. 'ಶುದ್ದಿ', 'ಚಕ್ರವರ್ತಿ' ಹಾಗೂ 'ಶ್ರೀನಿವಾಸ ಕಲ್ಯಾಣ' ಸೇರಿದಂತೆ ಹಲವು ಚಿತ್ರಗಳ ಪ್ರದರ್ಶನವನ್ನ ನಿಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.[ಕನ್ನಡಿಗರ ಮುಂದೆ ಮಂಡಿಯೂರಿದ ಕಟ್ಟಪ್ಪ: ಸಾ.ರಾ.ಗೋವಿಂದು ಪ್ರತಿಕ್ರಿಯೆ ಏನು.?]

  ಇದು ಕನ್ನಡಿಗರನ್ನ ಮತ್ತಷ್ಟು ಕೆರಳಿಸಿದ್ದು, ಕರ್ನಾಟಕದಲ್ಲೂ ತಮಿಳು ಚಿತ್ರಗಳನ್ನ ಬ್ಯಾನ್ ಮಾಡುವುದಾಗಿ ಕನ್ನಡ ಪರ ಹೋರಾಟಗಾರರು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

  English summary
  According to Source Kannada Films Stoped in Tamilnadu After Sathyaraj's speech addressing Kannadigas over 'Baahubali-2' release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X